ಕಾಯಿಲೆಯಿಂದ ಬಳಲುವ ಸಾಧಕರ ಬಗ್ಗೆ ಎಲ್ಲ ರೀತಿಯಿಂದ ಕಾಳಜಿ ವಹಿಸುವ ಭಕ್ತವತ್ಸಲ !
‘ತಮಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲದಿದ್ದರೂ, ಕಾಯಿಲೆಯಿಂದ ಬಳಲುತ್ತಿರುವ ಓರ್ವ ಸಾಧಕನನ್ನು ಭೇಟಿಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಮೆಟ್ಟಿಲುಗಳನ್ನು ಹತ್ತಿ ಅವನನ್ನು ಭೇಟಿಯಾಗಲು ಮೇಲೆ ಹೋಗುತ್ತಾರೆ.
‘ತಮಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲದಿದ್ದರೂ, ಕಾಯಿಲೆಯಿಂದ ಬಳಲುತ್ತಿರುವ ಓರ್ವ ಸಾಧಕನನ್ನು ಭೇಟಿಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಮೆಟ್ಟಿಲುಗಳನ್ನು ಹತ್ತಿ ಅವನನ್ನು ಭೇಟಿಯಾಗಲು ಮೇಲೆ ಹೋಗುತ್ತಾರೆ.
ಸನಾತನದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕಿ ಕು. ದೀಪಾಲಿ ಮತಕರ ಇವರ ಆರೋಗ್ಯವು ಅಕ್ಟೋಬರ್ ೨೦೧೬ ರಲ್ಲಿ ಬಹಳ ಗಂಭೀರವಾಗಿತ್ತು. ಅವರ ಮೇಲಿನ ಈ ಮಾರಣಾಂತಿಕ ಸಂಕಟ ದೂರವಾಗಬೇಕೆಂದು ಪರಾತ್ಪರ ಗುರು ಡಾಕ್ಟರರು ಸಂತರಿಗೆ ನಾಮಜಪ ಮಾಡಲು ಹೇಳಿದ್ದರು.
ಒಂದು ಪ್ರಸಂಗದಲ್ಲಿ ಓರ್ವ ಸಾಧಕಿಯು ತಾನು ಕಂಡ ಒಂದು ಕನಸಿನ ಬಗ್ಗೆ ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದಳು. ಆ ಕನಸಿನಲ್ಲಿ ಅವಳಿಗೆ ಪರಾತ್ಪರ ಗುರು ಡಾಕ್ಟರರು ಅವಳನ್ನು ಬಿಟ್ಟು ಹೋಗಿದ್ದು ಕಾಣಿಸಿತು. ಅವಳು ಆ ವಾಕ್ಯವನ್ನು ಪೂರ್ಣ ಹೇಳುವ ಮೊದಲೇ ಪರಾತ್ಪರ ಗುರು ಡಾಕ್ಟರರು, “ನಾನು ನನ್ನ ಸಾಧಕರನ್ನು ಎಂದಿಗೂ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ, ಎಂದು ಹೇಳಿದರು.
ಈ ವಿಶೇಷಾಂಕದಲ್ಲಿ ಸಾಧಕರಿಗೆ ಸಹಜವಾಗಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.
ಸಂತ ತುಕಾರಾಮ ಮಹಾರಾಜರು ಸದೇಹ ವೈಕುಂಠಕ್ಕೆ ಹೋದ ಏಕೈಕ ಸಂತಶ್ರೇಷ್ಠರಾಗಿದ್ದಾರೆ. ಅವರನ್ನು ಕರೆದೊಯ್ಯಲು ಪುಷ್ಪಕವಿಮಾನ ಬಂದಿತ್ತು. ಪ.ಪೂ. ಡಾಕ್ಟರರು ಹೇಳುತ್ತಾರೆ, ‘ಒಂದು ವೇಳೆ ನನ್ನನ್ನು ವೈಕುಂಠಕ್ಕೆ ಕರೆದೊಯ್ಯಲು ದೇವರು ಪುಷ್ಪಕವಿಮಾನವನ್ನು ಕಳುಹಿಸಿದರೆ, ನಾನು ದೇವರಿಗೆ, ‘ಸನಾತನದ ಎಲ್ಲ ಸಾಧಕರನ್ನು ನನ್ನೊಂದಿಗೆ ವೈಕುಂಠಕ್ಕೆ ಕರೆದುಕೊಂಡು ಹೋಗುವುದಿದೆ.