ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಪುಣ್ಯವು ದೇವರಿಗಿಂತ ದೊಡ್ಡದಾಗಿದೆ, ಆದರೆ ಪುಣ್ಯವನ್ನು ಗಳಿಸುವುದು ಸುಲಭವಿಲ್ಲ. ಪುಣ್ಯವನ್ನು ಗಳಿಸಲು ಹೋದರೆ, ಅದು ನಿಮ್ಮ ಜೀವವನ್ನೇ ತೆಗೆದುಕೊಳ್ಳುವುದು. ಅದು ಇಷ್ಟೊಂದು ಕಠಿಣ ಮತ್ತು ದುಬಾರಿಯಾಗಿದೆ. ಪುಣ್ಯವನ್ನು ಗಳಿಸಲು ಕೆಂಡದಲ್ಲಿ ಕೈ ಸುಟ್ಟುಕೊಳ್ಳಬೇಕಾಗಿರುತ್ತದೆ, ಮುಳ್ಳುಗಳ ಮೇಲೆ ನಡೆಯಬೇಕಾಗುತ್ತದೆ ಮತ್ತು ಸತತವಾಗಿ ಸಂಕಟಗಳನ್ನು ಎದುರಿಸಬೇಕಾಗುತ್ತದೆ.

ಸಾಧಕರ ಮುಂದೆ ಭಾವದ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ವೇದನೆಯಾಗುತ್ತದೆ. ಭಕ್ತನು ಭಗವಂತನೊಂದಿಗೆ ಏಕರೂಪವಾಗಿದ್ದರೆ ಮಾತ್ರ ಈ ರೀತಿ ಘಟಿಸುತ್ತದೆ. ಅವನು ವಿಭಕ್ತನಾಗಿದ್ದರೆ, ಏನೂ ಘಟಿಸುವುದಿಲ್ಲ. ಭಗವಂತನು ನಿರ್ಗುಣ-ನಿರಾಕಾರನಿದ್ದಾನೆ.

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸರಿಗೆ ದೇವರ ದರ್ಶನದ ಬಗ್ಗೆ ಇದ್ದ ಉತ್ಕಟ ಭಾವ !

ದೈವೀತತ್ತ್ವದ ವಿವಿಧ ರೂಪಗಳನ್ನು ಹಾಗೂ ಭಕ್ತಿಯ ವಿವಿಧ ಪದ್ಧತಿಗಳನ್ನು ತಿಳಿದುಕೊಳ್ಳಲು ರಾಮಕೃಷ್ಣರು ಅನೇಕ ರೀತಿಯಲ್ಲಿ ಪ್ರಯತ್ನಿಸಿದರು. ರಾಮಾಯಣದ ಸಮಯದಲ್ಲಿ ಶ್ರೀರಾಮನ ದರ್ಶನಕ್ಕಾಗಿ ಹೇಗೆ ಹನುಮಂತನು ಪರಿತಪಿಸಿದ್ದನೋ ಅದೇ ರೀತಿಯ ಸ್ಥಿತಿಯನ್ನು ರಾಮಕೃಷ್ಣರು ಅನುಭವಿಸಿದರು.

ಭಗವಂತನ ಭಾವವಿಶ್ವವನ್ನು ಅನುಭವಿಸುವ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ಸಕ್ಕರೆಯ ಸವಿಯನ್ನು ಹೇಗೆ ಶಬ್ದದಿಂದ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಭಾವವನ್ನು ಸಹ ಶಬ್ದದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತತ ಭಗವಂತನ ಅನುಸಂಧಾನದಲ್ಲಿರುವ ಸುಲಭವಾದ ಮಾರ್ಗವೆಂದರೆ ಸತತ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು.

ನವವಿಧ ಭಕ್ತಿ

ಭಗವಂತನ ನಾಮ-ಗುಣ-ಲೀಲೆಗಳನ್ನು ಸದಾ ಧ್ಯಾನಿಸುವುದು ಹಾಗೂ ಅದರಲ್ಲಿಯೇ ಮಗ್ನರಾಗಿರುವುದು ಎಂದರೆ ಸ್ಮರಣ ಭಕ್ತಿ. ಗುರುಗಳು ಅಥವಾ ಈಶ್ವರನ ಸ್ಥೂಲ ರೂಪವನ್ನು (ಮೂರ್ತಿ/ಚಿತ್ರ) ಮತ್ತು ನಾಮಜಪದ ಮೂಲಕ ಸೂಕ್ಷ್ಮ ರೂಪವನ್ನು ಸತತ ಸ್ಮರಿಸುವುದೇ ಸ್ಮರಣ ಭಕ್ತಿ

ಭಗವಂತನ ಭೇಟಿಗಾಗಿ ವ್ಯಾಕುಲರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಜಗತ್ತೆಲ್ಲ ಈಗ ಶೂನ್ಯವೆನಿಸುತ್ತದೆ. ಈಗ ‘ಜೀವ ಬೇಡುತ್ತಿದೆ ದರ್ಶನ ಎನ್ನುವ ಸ್ಥಿತಿಯಾಗಿದೆ. ಆದ್ದರಿಂದ ನಿನ್ನ ಬಳಿ ಮತ್ತೇನನ್ನು ಬೇಡಲಿ ? ಬೇಡಿದರೂ ಅದು ನನ್ನ ದತ್ತಾತ್ರೇಯನ ಮನಮೋಹಕ ವಿಶ್ವ ರೂಪವನ್ನೇ ಬೇಡುತ್ತೇನೆ. ಕೇವಲ ಅದೇ ಬೇಕಾಗಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಯಾವ ಭಾವವನ್ನಿಡಬೇಕು ?

‘ರಾಷ್ಟ್ರಭಕ್ತರು ಮತ್ತು ಕ್ರಾಂತಿಕಾರರು ರಾಷ್ಟ್ರದಲ್ಲಿಯೇ ದೇವರನ್ನು ಕಾಣುತ್ತಾರೆ; ಆದುದರಿಂದ ಅವರು ರಾಷ್ಟ್ರವನ್ನು ನಿರಪೇಕ್ಷವಾಗಿ ಪ್ರೀತಿಸುತ್ತಾರೆ ಮತ್ತು ರಾಷ್ಟ್ರಕ್ಕಾಗಿ ಪ್ರಾಣದ ಬಲಿದಾನವನ್ನು ಮಾಡುತ್ತಾರೆ. ವಿವಿಧ ಸಂಪ್ರದಾಯಗಳು ಮತ್ತು ಸಾಧನಾ ಮಾರ್ಗಕ್ಕನುಸಾರ ಸಾಧನೆ ಮಾಡುವ ಹೆಚ್ಚಿನ ಸಾಧಕರು ಹಿಂದಿನ ಜನ್ಮದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಿರುವುದರಿಂದ ಅವರು ಈಗಿನ ಜನ್ಮದಲ್ಲಿಯೂ ಗುರುಗಳನ್ನು ಅಥವಾ ದೇವರನ್ನು ನಿರಪೇಕ್ಷವಾಗಿ ಪ್ರೀತಿಸುತ್ತಾರೆ ಮತ್ತು ವ್ಯಷ್ಟಿ ಸಾಧನೆಗಾಗಿ ಜೀವನವನ್ನು ಸಮರ್ಪಿಸುತ್ತಾರೆ.

ಸಪ್ತರ್ಷಿಗಳ ಆಜ್ಞೆಯಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತಗಳಿಂದ ಮಾಡಲಾದ ಧರ್ಮಧ್ವಜದ ಸ್ಥಾಪನೆಯ ವಿಧಿಯ ಛಾಯಾಚಿತ್ರಮಯ ಗಮನಾರ್ಹ ಅಂಶಗಳು !

ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧ್ವಜದ ಮೇಲೆ ಒಂದು ಬದಿಗೆ ಪ್ರಭು ಶ್ರೀರಾಮನ ಚಿತ್ರ ಮತ್ತು ಇನ್ನೊಂದು ಬದಿಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದಲ್ಲಿನ ಚಿತ್ರವನ್ನು ಹಾಕಲು ಆಜ್ಞೆಯನ್ನು ಮಾಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯದೊಂದಿಗೆ ಸಂಬಂಧಿಸಿದ ಹೆಸರಿನ ಸಾಕ್ಷಿಯನ್ನು ನೀಡುವ ರಾಜಸ್ಥಾನದ ‘ಶ್ರೀಸತ್ ಚಿತ್ ದೇವಿ’ ದೇವಸ್ಥಾನ !

ರಾಜಸ್ಥಾನದ ಜೋಧಪುರದಲ್ಲಿ ಓಶಿಯಾ ಹೆಸರಿನ ಊರು ಇದೆ. ಇಲ್ಲಿ ಸತ್ಚಿಯಾದೇವಿಯ ದೇವಸ್ಥಾನವಿದೆ. ಈ ದೇವಿ ಎಂದರೆ ‘ಸತ್ಚಿತ್ ದೇವಿಯಾಗಿದ್ದಾಳೆ. ಸಾಧ್ಯವಾದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ದೇವಸ್ಥಾನದ ದರ್ಶನವನ್ನು ಪಡೆಯಬೇಕು. ಈ ದೇವಸ್ಥಾನಕ್ಕೆ ಹೋಗುವುದು ಬಹಳ ಮಹತ್ವದ್ದಾಗಿದೆ.

ಪರಬ್ರಹ್ಮಸ್ವರೂಪರಾದ ಶ್ರೀಮನ್ನಾರಾಯಣನೇ ‘ಶ್ರೀ ಜಯಂತ  ರೂಪದಲ್ಲಿ ಸನಾತನದ ಸಾಧಕರಿಗೆ ಗುರುರೂಪದಲ್ಲಿ ದೊರಕಿದ್ದಾರೆ !

‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ.