ಭೀಕರ ಆಪತ್ಕಾಲದಲ್ಲಿ ಆರೋಗ್ಯ ರಕ್ಷಣೆಗಾಗಿ ಔಷಧಿ ಸಸ್ಯಗಳನ್ನು ಬೆಳೆಸಿರಿ

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ನಮಗೆ ಆಲೋಪಥಿ ಔಷಧಿಗಳಲ್ಲ, ಆಯುರ್ವೇದೀಯ ಔಷಧಿ ಸಸ್ಯಗಳು ಆಧಾರವಾಗಲಿವೆ. ‘ಬಾಯಾರಿದಾಗ ಬಾವಿ ತೋಡಿದ ಹಾಗೆ ! ಎಂಬ ಗಾದೆ ಮಾತಿದೆ. ಹೀಗಾಗದಿರಲು ಮುಂಬರುವ ಭೀಕರ ಆಪತ್ಕಾಲದಲ್ಲಿ ಕಡಿಮೆ ಬೆಲೆಯ ಮತ್ತು ಬಹುಗುಣಿಯಾಗಿರುವ ವಿವಿಧ ಆಯುರ್ವೇದೀಯ ಸಸ್ಯಗಳು ಸಹಜವಾಗಿ ದೊರೆಯಲು ಈಗಿನಿಂದಲೇ ಅವುಗಳನ್ನು ಮನೆಯ ಸುತ್ತಲೂ, ಮನೆಯ ಪರಿಸರದಲ್ಲಿ ಮತ್ತು ಗದ್ದೆಗಳಲ್ಲಿ ಬೆಳೆಸುವುದು ಆವಶ್ಯಕವಾಗಿದೆ.

ಆಪತ್ಕಾಲೀನ ಪರಿಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳಿಗೆ ಕೆಲವು ಪರಿಹಾರೋಪಾಯಗಳು

 ಕೆಲವು ಜನರು ಅತಿಭಾವನಾಶೀಲ ಮತ್ತು ಮನಸ್ಸಿನಿಂದ ಬಹಳ ದುರ್ಬಲರಾಗಿರುತ್ತಾರೆ. ನೆರೆ, ಭೂಕಂಪ, ಮಹಾಯುದ್ಧ ಇತ್ಯಾದಿ ಸಂಕಟಗಳನ್ನು ನೋಡಿ ಅವರು ಭಯಭೀತರಾಗುತ್ತಾರೆ. ಅವರಿಗೆ ಈ ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು ಬೇಡವೆನಿಸುತ್ತದೆ. ಕೆಲವರ ಮನಸ್ಸು ಅಸ್ವಸ್ಥವಾಗಿರುವುದರಿಂದ ಅವರಿಗೆ ಸ್ವಯಸೂಚನೆಗಳನ್ನು ಕೊಡಲು ನೆನಪು  ಆಗುವುದಿಲ್ಲ.

ನಿರ್ಲಕ್ಷಿತ‘ದ್ವೀಪ’ !

ಅರಬೀ ಸಮುದ್ರದಲ್ಲಿ ಕೇರಳದ ಬಳಿಯ ಕೇಂದ್ರಾಡಳಿತ ಪ್ರದೇಶವಾದ ‘ಲಕ್ಷದ್ವೀಪ’ವು ಸದ್ಯ ಚರ್ಚೆಯ ವಿಷಯವಾಗಿದೆ. ಇಲ್ಲಿನ ಹೊಸ ಆಡಳಿತಗಾರರಾದ ಪ್ರಫುಲ್ಲ ಪಟೇಲ ಇವರು ೪ ಅಧಿನಿಯಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಶೇ. ೯೮ ರಷ್ಟು ಮುಸಲ್ಮಾನರ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಜಾರಿಗೆ ತರಲಾದ ಈ ಕಾನೂನುಗಳಿಗೆ ರಾಜಕೀಯ ಸ್ತರದಲ್ಲಿ ವಿರೋಧವಾಗತೊಡಗಿದೆ.

ಜಾನ್‌ರೋಜ್ ಇವರ ವಿವಾದಿತ ಹೇಳಿಕೆ !

ದೇಶ ಎಷ್ಟು ಕಠಿಣ ಪರಿಸ್ಥಿತಿಯಲ್ಲಿದೆ ಎನ್ನುವುದು ಗಮನಿಸಿ, ಎಲ್ಲ ವೈದ್ಯಕೀಯ ಶಾಖೆಗಳನ್ನು ಒಂದುಗೂಡಿಸಿ ಭಾರತೀಯರ ಆರೋಗ್ಯ ಚೆನ್ನಾಗಿರಲು ಒಂದು ಮಾರ್ಗವನ್ನು ಕಂಡು ಹಿಡಿಯಬೇಕಾಗಿರುವ ಸಮಯದಲ್ಲಿ ಈ ದ್ವೇಷದ ಭಾಷೆ ದೇಶವಿರೋಧಿಯಾಗಿದೆ. ಹಾಗಾಗಿ ಜಾನ್‌ರೋಜ್ ಇವರೇ ಮೊದಲು ದೇಶದ ಕ್ಷಮೆ ಕೋರಬೇಕಾಗಿದೆ.

ನಿಜವಾದ ‘ಜಾಗರಣೆ !

‘ದೇಶದಲ್ಲಿ ಕೊರೊನಾದ ೨ ನೇ ಅಲೆಯಿರುವಾಗ ಕುಂಭಮೇಳದ ಆಯೋಜನೆಯನ್ನು ಮಾಡಬೇಕಾಗಿತ್ತೇ ?, ‘ಅದನ್ನು ಸಾಂಕೇತಿಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲವೇ ?, ಎಂದು ಕೆಲವು ಪ್ರಗತಿಪರ ಹಿಂದೂಗಳು ಪ್ರಶ್ನಿಸಿದ್ದರು. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮನವಿ ಮಾಡಿದ್ದರು.

ಮೃತದೇಹ ಮತ್ತು ಮನುಷ್ಯತ್ವ !

ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಗಂಗಾನದಿಯಲ್ಲಿ ೨-೩ ದಿನಗಳಲ್ಲಿ ಅನೇಕ ಮೃತದೇಹಗಳು ಸಿಗುತ್ತಿವೆ. ಬಕ್ಸರ್(ಬಿಹಾರ) ಇಲ್ಲಿ ೪೦ ಮೃತದೇಹಗಳು ತೇಲಿ ಬಂದಿವೆ. ಈ ಮೊದಲು ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯ ನದಿಯ ದಡದಲ್ಲಿ ಇದೇ ರೀತಿ ಮೃತದೇಹಗಳು ತೇಲಿ ಬಂದಿದ್ದವು. ಈ ಹಿಂದೆ ಹಮೀರಪುರ ಮತ್ತು ಕಾನಪುರ ಜಿಲ್ಲೆಯಲ್ಲಿಯೂ ಗಂಗಾನದಿಯ ದಡದಲ್ಲಿ ಮೃತದೇಹಗಳು ಸಿಕ್ಕಿದ್ದವು.

ಆಪತ್ಕಾಲೀನ ಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳ ಮೇಲಿನ ಕೆಲವು ಉಪಾಯಯೋಜನೆಗಳು

ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರ ಮನಸ್ಸು ಅಸ್ಥಿರವಾಗುವುದು, ಮನಸ್ಸಿನ ಮೇಲೆ ಒತ್ತಡ ಬರುವುದು, ಕಾಳಜಿಯಾಗುವುದು, ಭಯವಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಬಹಳಷ್ಟು ಜನರು ಸಂಬಂಧಿಕರಲ್ಲಿಯೂ ಭಾವನಾತ್ಮಕ ದೃಷ್ಟಿಯಿಂದ ಸಿಲುಕಿಕೊಳ್ಳುತ್ತಾರೆ. ಹೀಗಾದಾಗ ಮಾನಸೋಪಚಾರ ತಜ್ಞರ ಸಹಾಯ ಪಡೆಯಬೇಕು.

ಧಗಧಗಿಸುತ್ತಿರುವ ಬಂಗಾಲ !

ಬಂಗಾಲದ ಚುನಾವಣೆಯ ಫಲಿತಾಂಶದ ನಂತರ ಅಲ್ಲಿ ಅರಾಜಕತೆಯು ಅಟ್ಟಹಾಸ ಮೆರೆಯುತ್ತಿದೆ. ತೃಣಮೂಲ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರವನ್ನು ಸ್ಥಾಪಿಸಲು ಯಶಸ್ಸು ದೊರಕಿದ್ದರೂ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಬಾನೊ) ಇವರು ನಂದಿಗ್ರಾಮದಲ್ಲಿ ಸೋಲುಂಡಿದ್ದಾರೆ.

ಮಹಾಯುದ್ಧ, ಭೂಕಂಪಗಳಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ?

ಸ್ವಯಂಸೂಚನೆಗಳ ವಿವಿಧ ಪದ್ಧತಿಗಳ ಸವಿಸ್ತಾರ ಮಾಹಿತಿ, ಸ್ವಭಾವದೋಷ ಮತ್ತು ಅಹಂನ ವಿವಿಧ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು ಹೇಗೆ ತಯಾರಿಸಬೇಕು ಇತ್ಯಾದಿಗಳ ಸವಿಸ್ತಾರ ವಿವೇಚನೆಯನ್ನು ಸನಾತನದ ಗ್ರಂಥ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ-ನಿರ್ಮೂಲನೆ’ ಇದರಲ್ಲಿ ಮಾಡಲಾಗಿದೆ.

ಓ ರಕ್ಷಕನೇ…!

ಸೃಷ್ಟಿಯನ್ನು ಬ್ರಹ್ಮದೇವನು ಉತ್ಪತ್ತಿ ಮಾಡಿದನು, ಭಗವಾನ ಶ್ರೀವಿಷ್ಣು ಅದರ ಪಾಲನೆಯನ್ನು ಮಾಡುತ್ತಿದ್ದಾನೆ ಮತ್ತು ಭಗವಾನ ಶಿವನು ಲಯಗೊಳಿಸುವವನಾಗಿದ್ದಾನೆ. ಸೃಷ್ಟಿಯ ಮೇಲೆ ಸಂಕಟಗಳು ಬಂದೆರಗಿದಾಗಲೆಲ್ಲ, ದೇವರು, ದೇವತೆಗಳು, ಋಷಿಗಳು, ಮುನಿಗಳು, ಭಕ್ತರು ಭಗವಾನ ವಿಷ್ಣುವಿನ ಮೊರೆ ಹೋದರು.