ಮನೆಯಲ್ಲಿ ಕುಳಿತು ಬಾಲಸಂಸ್ಕಾರವರ್ಗ, ಧರ್ಮ ಸಂವಾದ ಇತ್ಯಾದಿ ಕಾರ್ಯಕ್ರಮಗಳ ಲಾಭ ಪಡೆಯಿರಿ !
ಬೆಂಗಳೂರು – ‘ಕೊರೋನಾ ರೋಗಾಣುವಿನಿಂದಾಗಿ ಜಗತ್ತಿನಾದ್ಯಂತ ಮೃತ್ಯುವು ತಾಂಡವವಾಡುತ್ತಿದೆ. ಲಕ್ಷಗಟ್ಟಲೆ ಜನರು ಇದರಿಂದ ಪೀಡಿತರಾಗಿದ್ದಾರೆ, ಇನ್ನೂ ಈ ಸೋಂಕು ತಡೆಗಟ್ಟುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದರ ಪರಿಣಾಮದಿಂದ ಭಾರತದಾದ್ಯಂತ ‘ಸಂಚಾರ ನಿಷೇಧ ಹಾಗೂ ‘ಲಾಕ್‌ಡೌನ್ ಮಾಡಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಳಜಿ, ಚಿಂತೆ, ನಿರಾಶೆ ಹಾಗೂ ಅಸುರಕ್ಷಿತತೆ ಈ ಭಾವನೆಗಳು ಹೆಚ್ಚಾಗುತ್ತಿವೆ. ಈ ಕಾಲಾವಧಿಯಲ್ಲಿ ಎಲ್ಲರ ಮನೋಧೈರ್ಯ ಕುಗ್ಗುತ್ತಿದೆ. ಈ ಮಾನಸಿಕ ಹಿಂಸೆಯನ್ನು ತಡೆ ಗಟ್ಟಲು, ಮನೋಬಲ ಹೆಚ್ಚಿಸಲು ಹಾಗೂ ಈ ರೀತಿಯ ಕಠಿಣ ಪ್ರಸಂಗಗಳಲ್ಲಿಯೂ ಆನಂದದಿಂದಿರಲು ನಿಯಮಿತ ಸಾಧನೆಯನ್ನು ಮಾಡಬೇಕು. ಇದು ಕಾಲದ ಆವಶ್ಯಕತೆಯಾಗಿದೆ ಎಂಬುದನ್ನು ಅರಿತು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಸಂಯುಕ್ತವಾಗಿ ‘ಆನ್‌ಲೈನ್ ಸತ್ಸಂಗದ ಮಾಲಿಕೆಯನ್ನು ಆರಂಭಿಸಿದೆ. ಜನರು ಇದರ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಬೇಕು, ಎಂದು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಹೋಗಬಾರದು, ಎಂದು ಸರಕಾರ ಕರೆ ನೀಡಿದೆ ಆದ್ದರಿಂದ ಮನೆಯಲ್ಲೇ ಕುಳಿತರೂ ಅನೇಕರಿಗೆ ‘ಏನು ಮಾಡಬೇಕು, ಎಂಬುದು ತಿಳಿಯದಂತಾಗಿದೆ. ಮಕ್ಕಳನ್ನು ಹೊರಗೆ ಆಟವಾಡಲು ಬಿಡಲು ಆಗುವುದಿಲ್ಲ, ಅವರಿಗೆ ‘ಏನು ಕೊಡಬೇಕು ಈ ಪ್ರಶ್ನೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ‘ಆನ್‌ಲೈನ್ ಸತ್ಸಂಗದ ಮಾಲಿಕೆಯು ತಮ್ಮ ಕುಟುಂಬಕ್ಕಾಗಿ ಖಂಡಿತವಾಗಿಯೂ ಪೂರಕವಾಗಿರುವುದು. ಈ ಮಾಲಿಕೆಯಲ್ಲಿ ಮಕ್ಕಳಿಗಾಗಿ ‘ಬಾಲಸಂಸ್ಕಾರವರ್ಗ, ಈ ಭೀಕರ ಆಪತ್ಕಾಲದಲ್ಲಿ ಈಶ್ವರನ ಮೇಲಿನ ಶ್ರದ್ಧೆಯು ದೃಢವಾಗಿ ಈಶ್ವರನ ಬಗ್ಗೆ ಭಾವ ಹೆಚ್ಚಾಗಲು ‘ಭಾವಸತ್ಸಂಗ; ಅದೇರೀತಿ ಒಮ್ಮೆಲೆ ಬರುವ ಈ ರೀತಿಯ ಆಪತ್ಕಾಲದ ಬಗ್ಗೆ ‘ಧರ್ಮ ಏನು ಹೇಳುತ್ತದೆ ?, ಧರ್ಮಶಿಕ್ಷಣದ ಆವಶ್ಯಕತೆ ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ‘ಧರ್ಮಸಂವಾದ ಹೀಗೆ ಮೂರು ಕಾರ್ಯಕ್ರಮಗಳನ್ನು ಪ್ರತಿದಿನ ಆರಂಭಿಸಲಾಗಿದೆ.
ಈ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ಅದರ ಲಾಭವನ್ನು ಪಡೆದುಕೊಂಡು ‘ಲಾಕ್‌ಡೌನ್ನ ಕಾಲವನ್ನು ಸದುಪಯೋಗ ಪಡಿಸಿಕೊಳ್ಳಿ, ಎಂದೂ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಿದೆ.
‘ಆನ್‌ಲೈನ್ ಸತ್ಸಂಗದ ಸರಣಿ ಪ್ರಕ್ಷೇಪಣೆಯ ವಾರ ಮತ್ತು ಸಮಯ
೧. ಬಾಲಸಂಸ್ಕಾರ ವರ್ಗ – ಪ್ರತಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ ೧೧.೩೦ ರಿಂದ ೧೨.೧೫
೨. ಭಾವಸತ್ಸಂಗ – ಪ್ರತಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ ೨.೩೦ ಯಿಂದ ೩.೧೫
೩. ಧರ್ಮಸಂವಾದ – ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ ಸಂಜೆ ೪.೩೦ ರಿಂದ ೫.೧೫ (ಮರುಪ್ರಸಾರ ಕಾರ್ಯಕ್ರಮದ ಮರುದಿನ – ಸಂಜೆ ೪.೩೦ ರಿಂದ ೫.೧೫)
‘ಆನ್‌ಲೈನ್ ಸತ್ಸಂಗದ ಮಾಲಿಕೆಯನ್ನು ಎಲ್ಲಿ ವೀಕ್ಷಿಸಬಹುದು ?
bit.ly/ytHJS
www.FB.com/HJSBengaluru
https://www.sanatan.org/kannada