‘ಇಸ್ರೋ’ನ ‘ಸಾಫ್ಟವೇರ್’ ಮೇಲೆ ಪ್ರತಿ ದಿನ ನೂರಕ್ಕೂ ಹೆಚ್ಚು ಸಯಬರ್ ದಾಳಿಗಳು ಆಗುತ್ತಿರುತ್ತವೆ !

ಕೊಚ್ಚಿ (ಕೇರಳ) – ಇಸ್ರೋದ ಮೇಲೆ ಪ್ರತಿದಿನ ನೂರಕ್ಕೂ ಹೆಚ್ಚು ಸೈಬರ್ ದಾಳಿಗಳು ಆಗುತ್ತಿವೆ, ಎಂದು ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥರವರು ಇಲ್ಲಿ ನಡೆದ ಅಂತರಾಷ್ಟ್ರೀಯ ಸೈಬರ್ ಪರಿಷತ್ತಿನಲ್ಲಿ ಹೇಳಿದರು.

ನಮ್ಮ ಸೈಬರ್ ರಕ್ಷಣೆ ಸುಸಜ್ಜಿತ !

ಸೋಮನಾಥರವರು ಮಾತು ಮುಂದುವರೆಸುತ್ತಾ, ರಾಕೆಟ್ ತಂತ್ರಜ್ಞಾನವು ಸೈಬರ್ ದಾಳಿಗೆ ಒಳಗಾಗುವ ಸಾಧ್ಯತೆಗಳು ತುಂಬಾ ಇವೆ. ಕಾರಣ ಇದರಲ್ಲಿ ಸುಧಾರಿತ ಸಾಫ್ಟವೇರ್ ಹಾಗೂ ಚಿಪ್ಸ್ ಗಳನ್ನು ಬಳಸಲಾಗುತ್ತಿದೆ. ಈ ಮೋಸ ಎಷ್ಟೇ ದೊಡ್ಡದಾಗಿದ್ದರೂ ದಾಳಿಗಳಿಂದ ಇಸ್ರೋ ಸುರಕ್ಷಿತವಾಗಿದೆ. ನಮ್ಮ ವ್ಯವಸ್ಥೆಯು ಸುರಕ್ಷಿತ ಸುಸಜ್ಜಿತವಾಗಿದೆ. ಇದರಲ್ಲಿ ಯಾವುದೇ ಪ್ರಕಾರದ ದಾಳಿ ಮಾಡಲು ಬರುವುದಿಲ್ಲ. ಸಾಮಾನ್ಯ ಜನರ ದೈನಂದಿನ ಜೀವನದಲ್ಲಿ ಸಹಾಯ ಮಾಡುವ ಅನೇಕ ಉಪಗ್ರಹಗಳಿವೆ. ಇವೆಲ್ಲವನ್ನು ವಿವಿಧ ರೀತಿಯ ಸಾಫ್ಟವೇರ್ ಗಳು ನಿಯಂತ್ರಿಸುತ್ತವೆ. ಇವೆಲ್ಲವನ್ನೂ ರಕ್ಷಿಸಲು ಸೈಬರ್ ಭದ್ರತೆ ಬಹಳ ಮಹತ್ವದ್ದಾಗಿದೆ. AI ಯೆಂತಹ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧದ ಸವಾಲುಗಳನ್ನು ಎದುರಿಸಬಹುದು. ಇದಕ್ಕಾಗಿ ಉತ್ತಮ ಸಂಶೋಧನೆ ಮತ್ತು ಕಠಿಣ ಪರಿಶ್ರಮ ಮಾಡಬೇಕಾಗುವುದು ಎಂದು ಹೇಳಿದರು.