ಶ್ರಾದ್ಧವಿಧಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಟೀಕಿಸುವ ಭಾರತೀಯ ಪ್ರಗತಿ(ಅಧೋಗತಿ) ಪರರು ಮತ್ತು ಜಾತ್ಯತೀತರಿಗೆ ತಪರಾಕಿ !
ಗಯಾ (ಬಿಹಾರ) – ಇಲ್ಲಿ ಉಕ್ರೇನ್ ನ ಓರ್ವ ಯುವತಿಯು ಉಕ್ರೇನ್ ಮತ್ತು ರಷ್ಯಾದ ನಡುವೆ ನಡೆದಿರುವ ಯುದ್ಧದಲ್ಲಿ ಹತರಾಗಿರುವ ಎರಡು ದೇಶದ ಸೈನಿಕರು ಮತ್ತು ನಾಗರಿಕರಿಗಾಗಿ ಪಿಂಡದಾನ ಮಾಡಿದರು. ಉಲಿಯ ಜಿಟೋಮರಸ ಸ್ಕೈ ಎಂದು ಆ ಯುವತಿಯ ಹೆಸರಾಗಿದೆ. ಸ್ಕೈ ಇವರು ಇಲ್ಲಿಯ ಫಲ್ಗು ನದಿಯ ದಡದಲ್ಲಿರುವ ದೇವಘಟ್ಟದಲ್ಲಿ ಪಿಂಡದಾನ ಮಾಡಿದರು
ಸ್ಕೈ ಇವರ ಜೊತೆ ಪತ್ರಕರ್ತರು ಚರ್ಚಿಸಿದಾಗ ಅವರು, ಈ ಯುದ್ಧದಲ್ಲಿ ನನ್ನ ತಂದೆ ತಾಯಿ ಹತರಾದರು. ಅದರ ಜೊತೆಗೆ ಈ ಯುದ್ಧದಲ್ಲಿ ಹುತಾತ್ಮರಾಗಿರುವ ಸೈನಿಕರು ಮತ್ತು ಸಾಮಾನ್ಯ ನಾಗರಿಕರ ಆತ್ಮಕ್ಕೆ ಶಾಂತಿ ದೊರೆಯಲಿ ಅದಕ್ಕಾಗಿ ನಾನು ಇಲ್ಲಿ ಪಿಂಡದಾನ ಮಾಡುವುದಕ್ಕಾಗಿ ಬಂದಿದ್ದೇನೆ ಎಂದು ಹೇಳಿದರು. ಜಗತ್ತಿನಲ್ಲಿ ಎಲ್ಲಾದರೂ ಮೋಕ್ಷ ಭೂಮಿ ಇದ್ದರೆ ಅದು ಗಯಾದಲ್ಲಿಯೇ ಇದೆ. ನಾನು ಎರಡನೆಯ ಬಾರಿ ಗಯಾದಲ್ಲಿ ಪಿಂಡದಾನ ಮಾಡುತ್ತಿದ್ದೇನೆ. ಹಿಂದಿನ ವೇಳೆ ನಾನು ಯಾವಾಗ ಇಲ್ಲಿ ಬಂದಿದ್ದೆ ಆಗ ನನಗೆ ಶಾಂತಿ ಲಭಿಸಿತ್ತು. ಎರಡು ದೇಶದಲ್ಲಿ ಶಾಂತಿ ನೆಲಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ.
ಸಂಪಾದಕೀಯ ನಿಲುವುವಿಜ್ಞಾನವಾದಿ ಪಶ್ಚಿಮಾತ್ಯರಿಗೆ ಯಾವಾಗ ಹಿಂದೂ ಧರ್ಮದಲ್ಲಿನ ವಿಧಿಗಳ ಬಗ್ಗೆ ವಿಶ್ವಾಸ ನಿರ್ಮಾಣವಾಗುತ್ತದೆ ಮತ್ತು ಅವರು ಇದರ ಸಂದರ್ಭದಲ್ಲಿನ ಕೃತಿಗಳು ಮಾಡುವರೋ ಆಗ ಭಾರತದಲ್ಲಿನ ಪ್ರಗತಿ(ಅಧೋಗತಿ) ಪರರು ಅನುಕರಣೆ ಮಾಡುವರು ! |