ಕರ್ಣಾವತಿ (ಗುಜರಾತ್) ಶಾಲೆಯು ಹಿಂದೂ ಮಕ್ಕಳಿಂದ ನಮಾಜ್ ಮಾಡಿಸಿಕೊಂಡರು !

  • ಕುರ್ತಾ-ಪೈಜಾಮ ಮತ್ತು ಗೋಲು ಟೋಪಿ ಧರಿಸಲು ಅನಿವಾರ್ಯಪಡಿಸಲಾಯಿತು !

  • ಈದ್ ದಿನದಂದು ‘ಸಾಂಸ್ಕೃತಿಕ ಕಾರ್ಯಕ್ರಮ’ ಹೆಸರಿನಲ್ಲಿ ಆಯೋಜನೆ !

  • ಪೋಷಕರು ಆಕ್ರೋಶಗೊಂಡು ಪ್ರತಿಭಟಿಸಿದ ನಂತರ ಶಾಲೆಯಿಂದ ಕ್ಷಮೆಯಾಚನೆ !

ಕರ್ಣಾವತಿ (ಗುಜರಾತ್) – ಇಲ್ಲಿನ ಶಾಲೆಯೊಂದು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂ ಮಕ್ಕಳಿಂದ ನಮಾಜ್ ಮಾಡಿಸಿಕೊಂಡರು. ಈ ಹುಡುಗರಿಗೆ ಗೋಲು ಟೋಪಿ ಮತ್ತು ಕುರ್ತಾ-ಪೈಜಾಮಾಗಳನ್ನು ಧರಿಸಲು ಸಹ ಕೇಳಲಾಗಿತ್ತು. ಈ ಕಾರ್ಯಕ್ರಮದ ವಿಡಿಯೋ ಪ್ರಸಾರವಾದ ನಂತರ ಆಕ್ರೋಶಗೊಂಡ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು.

ಈ ಕುರಿತು ಸಿಕ್ಕಿರುವ ಮಾಹಿತಿ ಪ್ರಕಾರ, ಸೆಪ್ಟೆಂಬರ್ 29ರಂದು ಕರ್ಣಾವತಿಯ ಘಟಲೊಡಿಯಾದಲ್ಲಿರುವ ‘ಕಲೋರೆಕ್ಸ್ ಸ್ಕೂಲ್’ನಲ್ಲಿ ಈದ್ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಪುಟ್ಟ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ನ ಬಟ್ಟೆ ತೊಡಿಸಲಾಗಿದೆ. ಈ ಸಮಯದಲ್ಲಿ ಅವರಿಗೆ ನಮಾಜ್ ಮಾಡುವುದು ಕಲಿಸಲಾಯಿತು. ಮಕ್ಕಳ ಪಾಲಕರ ಅನುಮತಿ ಪಡೆಯದೇ ಇಡೀ ಕಾರ್ಯಕ್ರಮ ನಡೆಸಲಾಗಿದೆ. ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಮತ್ತು ಪೋಷಕರು ಶಾಲೆಯಲ್ಲಿ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ರಾಜೀನಾಮೆಗೆ ಒತ್ತಾಯಿಸಿದರು. ಮಕ್ಕಳ ಪೋಷಕರು ತಮ್ಮ ಮಕ್ಕಳ ಹೆಸರನ್ನು ಶಾಲೆಯಿಂದ ಹಿಂಪಡೆಯಲು ಯೋಚಿಸಿದ್ದಾರೆ. ಈ ಸಂಬಂಧ ಕರ್ಣಾವತಿ ಜಿಲ್ಲಾ ಶಿಕ್ಷಣಾಧಿಕಾರಿ ರೋಹಿತ್ ಚೌಧರಿ ಅವರು ಶಾಲೆಗೆ ನೋಟಿಸ್ ಕಳುಹಿಸಿ ಸ್ಪಷ್ಟಿಕರಣ ಕೇಳಿದ್ದಾರೆ. ಹೆಚ್ಚುತ್ತಿರುವ ವಿರೋಧದಿಂದ ಈ ವಿಷಯದಲ್ಲಿ ಶಾಲೆಯು ಲಿಖಿತ ಕ್ಷಮೆಯಾಚಿಸಿದೆ.

ಸಂಪಾದಕೀಯ ನಿಲುವು

ಇದೇ ರೀತಿ, ಶಾಲೆಯಲ್ಲಿ ಮುಸ್ಲಿಂ ಅಥವಾ ಕ್ರೈಸ್ತ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡುವಂತೆ ಹೇಳಿದ್ದರೆ, ದೇಶಾದ್ಯಂತ ‘ಶಿಕ್ಷಣದ ಕೇಸರಿಕರಣ’, ‘ಪ್ರಜಾಪ್ರಭುತ್ವದ ಕೊಲೆ’, ‘ಅಲ್ಪಸಂಖ್ಯಾತರ ಮೇಲೆ ವಿಪತ್ತು’ ಎಂದು ಕೂಗಿ ಶಾಲೆಯನ್ನು ಮುಚ್ಚುವ ಬೆದರಿಕೆ ಹಾಕಲಾಗುತ್ತಿತ್ತು !