ಬಿಹಾರ ನಂತರ ಈಗ ಜಾರ್ಖಂಡ ಸರಕಾರ ಕೂಡ ಜಾತಿವಾರು ಜನಗಣತಿ ಜಾರಿಗೊಳಿಸುವ ಸಾಧ್ಯತೆ !

ರಾಂಚಿ (ಜಾರ್ಖಂಡ್ ) – ಬಿಹಾರ ಸರಕಾರವು ಜಾತಿವಾರು ಜನಗಣತಿಯ ಅಂಕಿಅಂಶಗಳನ್ನು ಬಹಿರಂಗಪಡಿಸಿದ ನಂತರ ಈಗ ಜಾರ್ಖಂಡ ರಾಜ್ಯದಲ್ಲಿಯೂ ಈ ದಿಶೆಯತ್ತ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಲಾಗಿದೆ. ಜಾರ್ಖಂಡಿನ ಮುಖ್ಯಮಂತ್ರಿ ಹೇಮಂತ ಸೋರೆನ್ ಇವರು ಈ ಮಸೂದೆ ವಿಧಾನಸಭೆಯಲ್ಲಿ ಮಂಡಿಸಬಹುದೆಂದು ಕೆಲವು ರಾಜಕೀಯ ನಾಯಕರು ಹೇಳುತ್ತಿದ್ದಾರೆ.

`ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್’ ಈ ರಾಜಕೀಯ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಸುದೇಶ ಮಹತೋ ಇವರು ಇಂತಹ ಜನಗಣತಿಯ ಬೇಡಿಕೆ ಸಲ್ಲಿಸಿದ್ದು ಜಾರ್ಖಂಡ್ ಸರಕಾರ ಮತ್ತು ಕಾಂಗ್ರೆಸ್‌ ಈ ಜನಗಣತಿ ಜಾರಿಗೊಳಿಸಿ ತೋರಿಸಬೇಕೆಂದು ಕರೆ ನೀಡಿದ್ದಾರೆ.

ಇನ್ನೊಂದೆಡೆ ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಐ.ಪಿ.ಸಿಂಹ ಇವರು ಟ್ವಿಟರ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಾ, ಜಾರ್ಖಂಡ್ ಸರಕಾರವು ಜಾತಿವಾರು ಜನಗಣತಿಯ ನಿರ್ಣಯ ತೆಗೆದುಕೊಂಡಿದ್ದು ಆದಷ್ಟು ಬೇಗನೆ ಕ್ಯಾಬಿನೆಟ್.ನಲ್ಲಿ ಇದರ ಸಂದರ್ಭದಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಲಾಗುವುದು’, ಎಂದು ಹೇಳಿದ್ದಾರೆ.

ಜಾರ್ಖಂಡದಲ್ಲಿ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಮಂತ್ರಿ ಹೇಮಂತ ಸೋರೆನ ಇವರು ೨೦೨೧ ರಲ್ಲಿ ಗೃಹಸಚಿವ ಅಮಿತ ಶಾಹ ಇವರನ್ನು ಭೇಟಿಯಾಗಿ ಜಾತಿವಾರು ಜನಗಣತಿಗೆ ಬೇಡಿಕೆ ಸಲ್ಲಿಸಿದ್ದರು ಹಾಗೂ ವಿಧಾನಸಭೆಯಲ್ಲಿ ಕೂಡ ಅದನ್ನು ಜಾರಿಗೊಳಿಸುವ ಮಾಹಿತಿಯನ್ನೂ ಸರಕಾರವು ಈ ಮೊದಲೇ ನೀಡಿತ್ತು.

ಸಂಪಾದಕೀಯ ನಿಲುವು

ಈ ರೀತಿಯ ಜನಗಣತಿ ಮೂಲಕ ಹಿಂದೂಗಳಲ್ಲಿ ಒಡಕುಂಟು ಮಾಡುವ ಕುಟಿಲ ಸಂಚನ್ನು ರೂಪಿಸಿದ್ದಾರೆ. ಹಿಂದೂಗಳ ವಿರೋಧದಲ್ಲಿ ಹಿಂದೂದ್ವೇಷಿ ರಾಜಕೀಯ ಪಕ್ಷಗಳ ಈ ಷಡ್ಯಂತ್ರವನ್ನು ವಿಫಲಗೊಳಿಸುವುದಕ್ಕಾಗಿ ಪ್ರಭಾವಿ ಹಿಂದೂ ಸಂಘಟನೆಯೇ ಏಕೈಕ ಪರ್ಯಾಯವಾಗಿದೆ !