‘೧೪.೧೧.೨೦೨೨ ರಂದು ನಾನು ಒಂದು ಸೇವೆಯ ಸಂದರ್ಭದಲ್ಲಿ ಮಾತನಾಡಲು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಳಿ ಹೋಗಿದ್ದೆನು. ನಮ್ಮ ಮಾತುಗಳು ಮುಗಿದ ನಂತರ ಅವರು ನನಗೆ, ”ಕಾಳಜಿ ಮಾಡಬೇಡ. ಈಗ ಚೆನ್ನಾಗಿ ಸೇವೆಯನ್ನು ಮಾಡು. ‘ಪರಮೇಶ್ವರನ ಆರತಿ’ !’’ ಎಂದು ಹೇಳಿದರು. ಆಗ ನನಗೆ ತುಂಬಾ ಆಶ್ಚರ್ಯವೆನಿಸಿತು ಮತ್ತು ಆನಂದವೂ ಆಯಿತು. ನನಗೆ ಯಾವಾಗಲೂ ನನ್ನ ಹೆಸರನ್ನು ‘ಪರಮೇಶ್ವರನ ಆರತಿ’, ಎಂದು ಬರೆಯುವ ರೂಢಿಯಿದೆ. ನನಗೆ ಮನಸ್ಸಿನಲ್ಲಿಯೂ ‘ಪರಾತ್ಪರ ಗುರು ಡಾ. ಆಠವಲೆಯವರು ಪರಮೇಶ್ವರರಾಗಿದ್ದಾರೆ ಮತ್ತು ನಾನು ಆ ಪರಮೇಶ್ವರನವಳಾಗಿದ್ದೇನೆ’, ಹೀಗೆಯೇ ಅನಿಸುತ್ತಿರುತ್ತದೆ; ಆದರೆ ಇದನ್ನು ನಾನು ಎಂದಿಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಹೇಳಿರಲಿಲ್ಲ, ಆದರೂ ಅವರು ತುಂಬಾ ಪ್ರೀತಿಯಿಂದ ಹಾಗೆ ಹೇಳಿರುವುದರಿಂದ ನನಗೆ ‘ನನ್ನ ಅಂತರ್ಮನಸ್ಸಿನಲ್ಲಿನ ಭಾವ ಅವರ ಚರಣ ಗಳಿಗೆ ತಲುಪಿತು’, ಎಂದು ಅನಿಸಿತು ಮತ್ತು ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿಬಂದಿತು. ನಂತರವೂ ನನ್ನಿಂದ ಅವರ ಧ್ವನಿಯಲ್ಲಿನ ‘ಪರಮೇಶ್ವರನ ಆರತಿ’, ಈ ಶಬ್ದಗಳ ಆಲಂಬನೆಯಾಗಿ ನನ್ನ ಮನಸ್ಸಿಗೆ ರೋಮಾಂಚನವಾಯಿತು. ಆ ಸಮಯದಲ್ಲಿ ನನಗೆ ಒಂದು ಬೇರೆಯೇ ಉತ್ಸಾಹದ ಅರಿವಾಗುತ್ತಿತ್ತು.
ನನಗೆ ‘ನಮ್ಮ ಎಲ್ಲ ಸಂತರು ಈಶ್ವರಸ್ವರೂಪರಾಗಿದ್ದಾರೆ ಮತ್ತು ಈ ಎಲ್ಲರನ್ನು ಸಿದ್ಧಗೊಳಿಸಿದ ಪರಾತ್ಪರ ಗುರು ಡಾಕ್ಟರರು ಪರಮೇಶ್ವರ ಸ್ವರೂಪರಾಗಿದ್ದಾರೆ’, ಎಂದು ಅನಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಾಯಿಯಿಂದ ‘ಪರಮೇಶ್ವರನ ಆರತಿ’ ಈ ಶಬ್ದಗಳನ್ನು ಕೇಳಿದಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಈಶ್ವರಸ್ವರೂಪ ಮತ್ತು ಪರಾತ್ಪರ ಗುರು ಡಾಕ್ಟರರು ಪರಮೇಶ್ವರ ಸ್ವರೂಪ ಆಗಿದ್ದಾರೆ ಎಂಬುದು ಮತ್ತೊಮ್ಮೆ ಅನುಭವಕ್ಕೆ ಬಂತು. ‘ಹೇ ಗುರುದೇವಾ, ‘ಪರಮೇಶ್ವರನ ಆರತಿ’, ಇವು ಕೇವಲ ಶಬ್ದಗಳಾಗಿರದೇ ನೀವು ಆ ಶಬ್ದಗಳನ್ನು ಸಗುಣದಲ್ಲಿ ಸಾಕಾರ ಮಾಡಿದ್ದೀರಿ ಮತ್ತು ನನಗೆ ಈ ಅನುಭೂತಿಯನ್ನು ನೀಡಿದಿರಿ, ಇದರ ಬಗ್ಗೆ ನಾನು ತಮ್ಮ ಚರಣಗಳಲ್ಲಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’ (ಆರತಿ ಇದು ಹೋಮಿಯೋಪಥಿ ವೈದ್ಯೆ ಡಾ. ಆರತಿ ತಿವಾರಿ ಇವಳ ಹೆಸರಾಗಿದೆ. ಅವರು ತಮ್ಮ ಹೆಸರನ್ನು ಪರಮೇಶ್ವರನ (ಪ.ಪೂ. ಡಾಕ್ಟರರ) ಆರತಿ ಎಂದು ಬರೆಯುತ್ತಾರೆ. – ಸಂಪಾದಕರು)
– ಹೋಮಿಯೋಪಥಿ ಡಾ. (ಸುಶ್ರೀ) ಆರತಿ ತಿವಾರಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೧೧.೨೦೨೨)