ಕುರ್ದ ಬಂಡುಕೋರರಿಂದ ಆತ್ಮಹುತಿ ದಾಳಿಯ ಸೇಡು ತೀರಿಸಿಕೊಳ್ಳಲು ಟರ್ಕಿಯಿಂದ ೨೦ ಸ್ಥಳಗಳಲ್ಲಿ ಬಾಂಬ್ ದಾಳಿ !

ಟರ್ಕಿಯ ದಕ್ಷಿಣ ಪೂರ್ವ ಪ್ರದೇಶ ತಮ್ಮದೆಂದು ಕುರ್ದ ಬಂಡುಕೋರರ ದಾವೆ !

ಅಂಕಾರ (ಟರ್ಕಿ) – ಟರ್ಕಿಯ ರಾಜಧಾನಿ ಅಂಕಾರದಲ್ಲಿ ಅಕ್ಟೋಬರ್ 1 ರಂದು ಕುರ್ದ ಬಂಡುಕೋರರಿಂದ ಸಚಿವಾಲಯದ ಹೊರಗೆ ನಡೆಸಿದ ಎರಡು ಆತ್ಮಹುತಿ ದಾಳಿಯ ನಂತರ ಟರ್ಕಿಯ ವಾಯು ಸೇನೆಯು ಸೇಡು ತೀರಿಸಿಕೊಳ್ಳಲು ಆರಂಭಿಸಿದೆ. ವಾಯು ಸೇನೆಯು ಇರಾಕಿನಲ್ಲಿನ ಕುರ್ದ ಬಂಡುಕೋರರ ಸ್ಥಳಗಳ ಮೇಲೆ ಬಾಂಬ್ ಸಿಡಿಸಲು ಆರಂಭಿಸಿದೆ. ಇಲ್ಲಿಯವರೆಗೆ ೨೦ ಸ್ಥಳದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಇದರಲ್ಲಿ ಅನೇಕ ಗುಹೆಗಳು, ಬಂಕರ್, ಗೋದಾಮಗಳ ಸಮಾವೇಶವಿದೆ. ಇದರಲ್ಲಿ ಅನೇಕ ಕುರ್ದ ಬಂಡುಕೋರರು ಹತರಾಗಿರುವುದೆಂದು ಹೇಳಲಾಗಿದೆ. ಟರ್ಕಿಯ ಆಂತರಿಕ ವಿಷಯಗಳು ಸಚಿವ ಅಲಿ ಯಾರಲಿಕಾಯ ಇವರು ಟರ್ಕಿಯ ಈ ಕ್ರಮದ ಬಗ್ಗೆ ಅನುಮೋದನೆ ನೀಡಿದ್ದಾರೆ. ಅಕ್ಟೋಬರ್ 1 ರಂದು ಕುರ್ದ ಬಂಡುಕೋರರು ನಡೆಸಿರುವ ದಾಳಿಯಲ್ಲಿ ಟರ್ಕಿಯ ಇಬ್ಬರೂ ಪೊಲೀಸರು ಗಾಯಗೊಂಡಿದ್ದರು. ಇದು ಟರ್ಕಿ ಇಸ್ಲಾಮಿಕ್ ಸ್ಟೇಟ್ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿತ್ತು ದಾಳಿ ನಡೆದಿದೆ. ಆದ್ದರಿಂದ ಈಗ ಯಾರಲಿಕಾಯ ಹೇಳಿರುವುದು ಎಲ್ಲಿಯವರೆಗೆ ಎಲ್ಲಾ ಕುರ್ದ ಬಂಡುಕೋರರು ಹತರಾಗುವುದಿಲ್ಲ ಅಲ್ಲಿಯವರೆಗೆ ಟರ್ಕಿ ಸುಮ್ಮನಿರುವುದಿಲ್ಲ ಎಂದು ಹೇಳಿದೆ.

ಟರ್ಕಿ ಮತ್ತು ಕುರ್ದ ಇವರಲ್ಲಿನ ಐತಿಹಾಸಿಕ ವಿವಾದ !

ಮೊದಲನೆಯ ವಿಶ್ವ ಯುದ್ಧದ ಮೊದಲು ಸಿರಿಯಾ, ಇರಾಕ್, ಇರಾನ್, ಟರ್ಕಿ ಮತ್ತು ಆರ್ಮಿನಿಯ ಇವುಗಳಂತಹ ದೇಶ ‘ಆಟೋಮನ್’ ಅಂದರೆ ‘ಉಸ್ಮಾನಿಯ ಸಲ್ತನತ’ ಇದರ ಭಾಗವಾಗಿತ್ತು. ವಿಶ್ವ ಯುದ್ಧದಲ್ಲಿ ಟರ್ಕಿ ಪರಭಗೊಂಡ ನಂತರ ಎಲ್ಲಾ ದೇಶ ಬೇರೆಬೇರೆಯಾದವು. ಈ ದೇಶದಲ್ಲಿ ಕುರ್ದ ಜನಸಂಖ್ಯೆ ಸುಮಾರು ೩ ಕೋಟಿಯಷ್ಟು ಇದೆ. ಈ ಜನರು ತಮಗಾಗಿ ಸ್ವತಂತ್ರ ಕುರ್ದಿಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದರು. ಟರ್ಕಿಯ ಕೆಲವು ಪ್ರದೇಶದಲ್ಲಿ ಅವರು ತಮ್ಮ ಅಧಿಕಾರ ಇದೆ ಎಂದು ಹೇಳುತ್ತಿದ್ದರು. ಇದರಿಂದ ಅವರಲ್ಲಿ ಮತ್ತು ಟರ್ಕಿಯ ನಡುವೆ ಸಂಘರ್ಷ ಆರಂಭವಾಯಿತು. ಟರ್ಕಿಯಲ್ಲಿ ‘ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ’ ಕುರ್ದ್ ಬಂಡುಕೋರರ ಎಲ್ಲಕ್ಕಿಂತ ದೊಡ್ಡ ಸಂಘಟನೆ ಆಗಿದ್ದು ಅವರು ಗೊರಿಲ್ಲಾ ಯುದ್ಧದ ಮೂಲಕ ಟರ್ಕಿ ಜೊತೆ ಯುದ್ಧ ಮಾಡುತ್ತಾರೆ. ಕುರ್ದಾನ ಇರಾಕದಲ್ಲಿನ ಉತ್ತರ ಪಶ್ಚಿಮ ಪ್ರದೇಶದಲ್ಲಿ ಸ್ವತಂತ್ರ ರಾಜ ದೊರೆತಿದ್ದು ಅವರಿಗೆ ಟರ್ಕಿಯ ದಕ್ಷಿಣ ಪೂರ್ವ ಪ್ರದೇಶದಲ್ಲಿ ಸ್ವಾತಂತ್ರ್ಯಬೇಕಿದೆ. ಸಿರಿಯಾದ ಉತ್ತರ ಪಶ್ಚಿಮ ಪ್ರದೇಶದಲ್ಲಿ ಕೂಡ ಅವರ ವರ್ಚಸ್ಸು ಇದೆ.

ಸಂಪಾದಕೀಯ ನಿಲುವು

ಯಾವಾಗ ಯಾವಾಗ ಟರ್ಕಿ ಕಾಶ್ಮೀರದ ಕುರಿತು ಪಾಕಿಸ್ತಾನದ ಪರವಹಿಸುತ್ತದೆ ಆಗ ಅದಕ್ಕೆ ತಲೆನೋವು ಆಗಿರುವ ಕುರ್ದ ಜನರ ದುಃಖ ಮತ್ತು ಅವರ ಬೇಡಿಕೆಯ ಕುರ್ದಿಸ್ತಾನದ ಬಗ್ಗೆ ಭಾರತ ಧ್ವನಿ ಎತ್ತಿದರೆ ತಪ್ಪೇನಿದೆ ?