ಪಂಜಾಬ್ ನ ಕಾಂಗ್ರೆಸ್ ಶಾಸಕ ಸುಖಪಾಲ ಸಿಂಹ ಖೈರಾ ಇವರಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನ

ಚಂಡಿಗಡ – ಇಲ್ಲಿಯ ಕಾಂಗ್ರೆಸ್ ನ ಶಾಸಕ ಸುಖಪಾಲ ಸಿಂಹ ಖೈರಾ ಇವರನ್ನು ಮಾದಕ ವಸ್ತುಗಳ ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಪಂಜಾಬ್ ನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಇವರು ಈ ಕ್ರಮವನ್ನು ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಖೈರಾನ ಫೇಸ್ಬುಕ್ ಖಾತೆಯಲ್ಲಿ ಒಂದು ವಿಡಿಯೋ ಪ್ರಸಾರ ಮಾಡಲಾಗಿದೆ. ಇದರಲ್ಲಿ ಅವರು ಪೊಲೀಸರ ಜೊತೆಗೆ ವಾದ ಮಾಡುತ್ತಿರುವುದು ಕಾಣುತ್ತಿದೆ. ಖೈರಾ ಪೊಲೀಸರ ಬಳಿ ವಾರೆಂಟ್ ಕೇಳುತ್ತಿದ್ದಾರೆ ಮತ್ತು ಬಂಧನದ ಕಾರಣ ಕೇಳುವುದು ಕಾಣುತ್ತಿದೆ. ಇದರ ಬಗ್ಗೆ ಪೊಲೀಸ್ ಅಧಿಕಾರಿ ಅವರಿಗೆ, ‘ಮಾದಕ ವಸ್ತುಗಳ ಹಳೆಯ ಪ್ರಕರಣದಲ್ಲಿ ನಿಮ್ಮನ್ನು ಬಂದೆಸಲಾಗುತ್ತಿದೆ’, ಎಂದು ಹೇಳುವುದು ಕಾಣುತ್ತಿದೆ. ಅದಕ್ಕೆ ಖೈರಾ ವಿರೋಧಿಸುತ್ತಾ, ‘ರಾಜಕೀಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’, ಎಂದು ಹೇಳುತ್ತಾ ವಿರೋಧಿಸುತ್ತಿದ್ದಾರೆ.

ಮಾರ್ಚ್ ೨೦೧೫ ರಲ್ಲಿ ಜಲಾಲಾಬಾದ ಇಲ್ಲಿ ಖೈರಾ ಸಹಿತ ೯ ಜನರ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಮಾದಕ ವಸ್ತುಗಳ ಪ್ರಕರಣದಲ್ಲಿನ ಆರೋಪಿ ಮತ್ತು ನಕಲಿ ಪಾಸ್ಪೋರ್ಟ್ ತಯಾರಿಸುವವರಿಗೆ ಬೆಂಬಲ ನೀಡುತ್ತಿರುವ ಆರೋಪ ಇವರ ಮೇಲೆ ಇತ್ತು. ಈ ಪ್ರಕರಣದಲ್ಲಿ ಅವರ ವಿಚಾರಣೆ ಕೂಡ ನಡೆದಿತ್ತು. ಹಾಗೂ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಈ ಪ್ರಕರಣದ ವಿಚಾರಣೆ ಮುಂದುವರೆದಿದೆ. (೨೦೧೫ ರ ಪ್ರಕರಣದಲ್ಲಿ ಪೊಲೀಸರು ಆಗಲೇ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳದಿರುವುದು, ಅವರ ಕಾರ್ಯಕ್ಷಮತೆ ಇದರಿಂದ ತಿಳಿಯುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ ಶಾಸಕ ಏನು ಮಾಡುತ್ತಾರೆ, ಇದೇ ಇದರಿಂದ ತಿಳಿಯುತ್ತದೆ !