ಚೀನಾ ಭಾರತದ ಗಡಿಯಲ್ಲಿ ಅನೇಕ ಕಾಮಗಾರಿಗಳು ಮಾಡಿವೆ ! – ಭಾರತೀಯ ಸೈನ್ಯದ ಗಡಿ ಮಾರ್ಗ ಸಂಘಟನೆಯ ಮಹಾಸಂಚಾಲಕ ಲೆಫ್ಟನಂಟ್ ಜನರಲ್ ರಾಜೀವ ಚೌದರಿ

ಭಾರತೀಯ ಸೈನ್ಯದ ಗಡಿ ಮಾರ್ಗ ಸಂಘಟನೆಯ ಮಹಾಸಂಚಾಲಕ ಲೆಫ್ಟನಂಟ್ ಜನರಲ್ ರಾಜೀವ ಚೌದರಿ ಇವರ ಮಾಹಿತಿ !

ನವ ದೆಹಲಿ – ಕಳೆದ ಮೂರು ವರ್ಷಗಳಲ್ಲಿ ಚೀನಾದಿಂದ ಭಾರತದ ಗಡಿಯಲ್ಲಿ ಅನೇಕ ಕಾಮಗಾರಿಗಳು ನಡೆಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾಗಿಂದ ೮ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ೩೦೦ ಯೋಜನೆಗಳನ್ನು ಪೂರ್ಣ ಮಾಡಿದೆ, ಎಂದು ಭಾರತೀಯ ಸೈನ್ಯದ ಗಡಿ ಮಾರ್ಗ ಸಂಘಟನೆಯ ಮಹಾಸಂಚಾಲಕ ಲೆಫ್ಟನಂಟ್ ಜನರಲ್ ರಾಜೀವ ಚೌದರಿ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಮಾಹಿತಿ ನೀಡಿದರು.

ಮುಂದಿನ 4-5 ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕುವೆವು !

ರಾಜೀವ ಚೌಧರಿ ಇವರು ಮಾತು ಮುಂದುವರೆಸುತ್ತಾ, ಭಾರತ ಸರಕಾರವು ಚೀನಾದ ಗಡಿಯಲ್ಲಿ ರಸ್ತೆ ಕಾಮಗಾರಿಗಾಗಿ ಆರ್ಥಿಕ ವ್ಯವಸ್ಥೆ ಮಾಡಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ನಾವು ಅಲ್ಲಿ ರಸ್ತೆಯ ೨೯೫ ಕಾಮಗಾರಿಗಳನ್ನು ನಡೆಸಿದ್ದೇವೆ. ಹಾಗೂ ಸೇತುವೆ, ಸುರಂಗ ಮತ್ತು ವಿಮಾನಗಾಗಿ ರನವೆ ತಯಾರಿಸಿದ್ದೇವೆ. ಮುಂದಿನ ನಾಲ್ಕು ತಿಂಗಳಲ್ಲಿ ನಮ್ಮ ೬೦ ಯೋಜನೆಗಳು ಪೂರ್ಣವಾಗುವುದು. ನಾವು ಜಗತ್ತಿನಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ರಸ್ತೆ ಕಾಮಗಾರಿ ನಡೆಸಿದ್ದೇವೆ. ಡೇಮಚೋಕ್ ಇಲ್ಲಿ ಸಮುದ್ರಮಟ್ಟದಿಂದ ೧೯ ಸಾವಿರ ಅಡಿ ಎತ್ತರದಲ್ಲಿ ರಸ್ತೆ ಸಿದ್ದಗೊಳಿಸಲಾಗಿದೆ. ನಮ್ಮ ಇಲಾಖೆ ಅತ್ಯಂತ ತ್ವರಿತ ಗತಿಯಲ್ಲಿ ಕಾರ್ಯ ನಡೆಸಿ ಸರಕಾರಕ್ಕೆ ಸಹಕಾರ ನೀಡುತ್ತಿದೆ. ಆದ್ದರಿಂದ ನಾವು ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕುವೆವು ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಸರಕಾರಗಿಂತಲೂ ಈಗಿನ ಸರಕಾರವು ಯೋಜನೆ ಪೂರ್ಣಗೊಳಿಸುವುದಕ್ಕೆ ಪ್ರೋತ್ಸಾಹಿಸುತ್ತದೆ !

ರಾಜೀವ ಚೌಧರಿ ಇವರು ಮಾತು ಮುಂದುವರೆಸಿ, ಹಿಂದಿನ ಕಾಂಗ್ರೆಸ್ ಸರಕಾರ ಪ್ರತ್ಯಕ್ಷ ಗಡಿರೇಖೆಯ ಹತ್ತಿರ ರಸ್ತೆ ತಯಾರಿಸುವುದರ ಬಗ್ಗೆ ಗೊಂಧಲ ಇತ್ತು. ೨೦೦೮ ರಲ್ಲಿ ಆಗಿನ ರಕ್ಷಣಾ ಸಚಿವ ಆಂಟನಿ ಇವರಿಗೆ, ಭಾರತವು ಚೀನಾದ ಗಡಿಯಲ್ಲಿ ರಸ್ತೆ ಸಿದ್ಧಗೊಳಿಸಿದರೆ ಚೀನ ಅದನ್ನು ಭಾರತದ ವಿರೋಧದಲ್ಲಿ ಉಪಯೋಗಿಸುವುದು’; ಎಂದು ಅನಿಸುತ್ತಿತ್ತು. ಆದರೆ ಇಂದಿನ ಸರಕಾರವು ಬೇರೆ ರೀತಿಯಲ್ಲಿ ಯೋಚನೆ ಮಾಡಿ ನಮಗೆ ಯೋಜನೆ ಪೂರ್ಣಗೊಳಿಸುವುದಕ್ಕಾಗಿ ಪ್ರೋತ್ಸಾಹ ನೀಡಿದೆ ಮತ್ತು ನೀಡುತ್ತಿದೆ. ಕಳೆದ ೬೦ ವರ್ಷಗಳಲ್ಲಿ ಇಲ್ಲಿ ಎರಡು ಸುರಂಗ ಮಾರ್ಗ ತಯಾರಿಸಲಾಗಿದೆ; ಆದರೆ ನಾವು ಕಳೆದ ಮೂರು ವರ್ಷದಲ್ಲಿ ೪ ಸುರಂಗ ಮಾರ್ಗ ತಯಾರಿಸಿದ್ದೇವೆ ಮತ್ತು ಈಗ ೧೦ ಸುರಂಗ ಮಾರ್ಗಗಳ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷಗಳವರೆಗೆ ಅವುಗಳು ಪೂರ್ಣಗೊಳ್ಳುವವು. ಅದರ ನಂತರ ಇನ್ನು ೮ ಸುರಂಗಗಳ ಯೋಜನೆ ಇದೆ. ಚಳಿಗಾಲದಲ್ಲಿ ಮಂಜು ಬೀಳುವುದರಿಂದ ರಸ್ತೆಗಳು ಮುಚ್ಚಿ ಹೋಗುತ್ತವೆ, ಆಗ ಈ ಸುರಂಗ ಮಾರ್ಗದ ಲಾಭ ಹೆಚ್ಚು ಆಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಚೀನಾಗೆ ತಕ್ಕ ಪ್ರತ್ಯುತ್ತರ ನೀಡುವುದಕ್ಕಾಗಿ ಭಾರತದಿಂದ ಕೂಡ ಅಷ್ಟೇ ಸಿದ್ಧತೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ !