ಸೈನ್ಯದಳದ ಅಗ್ನಿವೀರ ಸೇರ್ಪಡೆಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ !

ಶೇ. ೫೦ ರಷ್ಟು ಸೈನಿಕರು ೪ ವರ್ಷಗಳ ನಂತರ ಖಾಯಂ

ನವ ದೆಹಲಿ – ಭಾರತ ಸರಕಾರದಿಂದ ಕಳೆದ ವರ್ಷ ಸಶಸ್ತ್ರದಳದಲ್ಲಿ ಸೇರಿಸಿಕೊಳ್ಳಲು ‘ಅಗ್ನಿವೀರ’ ಹೆಸರಿನ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಈ ಯೋಜನೆಗೆ ಆಗ ಬಹಳ ವಿರೋಧವಾಗಿತ್ತು. ಈ ವಿರೋಧವನ್ನು ಲೆಕ್ಕಿಸದೆ ಸರಕಾರದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ಮೊದಲನೆಯ ತಂಡ ಸೇರ್ಪಡೆಯಾಗಿ ಈಗ ಒಂದು ವರ್ಷ ಆಗಿದ್ದು ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ ಎಂದು ವರಿಷ್ಠ ಸೂತ್ರಗಳಿಂದ ಮಾಹಿತಿ ದೊರೆತಿದೆ. ‘ಇದರ ಅಡಿಯಲ್ಲಿ ಈ ಯೋಜನೆಯಿಂದ ಸೇರ್ಪಡೆಯಾಗಿರುವ ಯುವಕರಲ್ಲಿ ಶೇ. ೫೦ ರಷ್ಟು ಯುವಕರನ್ನು ಖಾಯಂಗೊಳಿಸಲಾಗುವುದೆಂದು ಹೇಳಲಾಗುತ್ತಿದೆ. ಮೂಲ ಯೋಜನೆ ಪ್ರಕಾರ ಈ ಶೇಕಡವಾರು ಕೇವಲ ೨೫ ರಷ್ಟು ಆಗಿತ್ತು. ಹಾಗೂ ಉಳಿದಿರುವ ಶೇಕಡ ೭೫ ಯುವಕರಿಗೆ ಒಂದು ನಿರ್ದಿಷ್ಟ ಧನ ನೀಡಿ ನಿವೃತ್ತ ಗೊಳಿಸುವವರಿದ್ದರು. ಏನಾದರೂ ಈ ಬದಲಾವಣೆ ಕಾರ್ಯರೂಪಕ್ಕೆ ಬಂದರೆ ಶೇಕಡ ೫೦ ರಷ್ಟು ಯುವಕರನ್ನು ಖಾಯಂಗೊಳಿಸಲಾಗುವುದು ಹಾಗೂ ಉಳಿದಿರುವ ಶೇಕಡ ೫೦ ರಷ್ಟು ಜನರಿಗೆ ನಿವೃತ್ತ ಗೊಳಿಸಲಾಗುವುದು.

೧. ಈ ಯೋಜನೆ ನೌಕಾದಳ, ವಾಯುದಳ ಮತ್ತು ಭೂದಳ ಈ ಮೂರು ದಳಕ್ಕಾಗಿ ಆಗಿದ್ದು ಇದರ ಸಂದರ್ಭದಲ್ಲಿ ಸರಕಾರವು ಈಗ ಅಧಿಕೃತವಾಗಿ ಯಾವುದು ಘೋಷಿಸಿಲ್ಲ. ಆದರೆ ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯಲ್ಲಿನ ಅಧಿಕಾರಿಗಳ ಮೊದಲ ಸಭೆ ಆಗಿರುವುದರ ಬಗ್ಗೆ ಮಾಹಿತಿ ದೊರೆತಿದೆ.

೨. ನೌಕಾದಳ ಮತ್ತು ವಾಯುದಳ ಇದರಲ್ಲಿ ಹೆಚ್ಚಿನ ಸೈನಿಕರು ತಾಂತ್ರಿಕ ಕೆಲಸ ಮಾಡುತ್ತಿರುತ್ತಾರೆ. ಸೈನ್ಯದಲ್ಲಿ ಕೂಡ ಸೈನಿಕರಿಗೆ ಅನೇಕ ಇಲಾಖೆಯಲ್ಲಿ ತಾಂತ್ರಿಕ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಶೇಕಡ ೫೦ ಸೇರ್ಪಡೆ ಆಗಿರುವ ಸೈನಿಕರಿಗೆ ಖಾಯಂ ಗೊಳಿಸಲು ಸರಕಾರ ಯೋಚನೆ ಮಾಡುತ್ತಿದೆ.

೩. ಮೊದಲನೆಯ ತಂಡ ಸೇರ್ಪಡೆ ಆಗಿ ಒಂದು ವರ್ಷ ಪೂರ್ಣವಾಗಿದೆ. ಆದ್ದರಿಂದ ಸರಕಾರ ಬೇಗನೆ ಇದರ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.