ಛತ್ತೀಸ್ ಗಡ್ ನ ಭಾಜಪದ ಮಾಜಿ ಮುಖ್ಯಮಂತ್ರಿ ರಮಣ ಸಿಂಹ ಮತ್ತು ವಕ್ತಾರ ಸಂಬಿತ ಪಾತ್ರ ಇವರ ವಿರುದ್ಧದ ದೂರು ರದ್ದಗೊಳಿಸಿ ! – ಛತ್ತೀಸ್ ಗಡ ಉಚ್ಚ ನ್ಯಾಯಾಲಯ

  • ಛತ್ತೀಸ್ ಗಡ ಉಚ್ಚ ನ್ಯಾಯಾಲಯದ ಆದೇಶ !

  • ಕಾಂಗ್ರೆಸ್ ನ ಸರಕಾರ ವಿರೋಧಿ ತಥಾಕಥಿತ ‘ಟೂಲಕಿಟ್’ ಪ್ರಕರಣದಲ್ಲಿ ಅರ್ಜಿ ದಾಖಲಿಸಲಾಗಿತ್ತು !

(ಟೂಲಕಿಟ್ ಎಂದರೆ ಯಾವುದಾದರೂ ಹೇಳಿಕೆ ಎಲ್ಲಾ ಕಡೆಗೆ ಪ್ರಸಾರ ಮಾಡುವುದಕ್ಕಾಗಿ ನಡೆಸಲಾಗುವ ವ್ಯಾಪಕ ಯೋಜನೆ !)

ಬಿಲಾಸಪುರ (ಛತ್ತೀಸ್ ಗಡ) – ಛತ್ತೀಸ್ ಗಡ ಉಚ್ಚ ನ್ಯಾಯಾಲಯವು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ರಮಣ ಸಿಂಹ ಹಾಗೂ ಭಾಜಪದ ರಾಷ್ಟ್ರೀಯ ವಕ್ತಾರ ಸಂಬಿದ ಪಾತ್ರಾ ಇವರ ವಿರುದ್ಧ ದಾಖಲಿಸಲಾಗಿರುವ ಆರೋಪ ರದ್ದು ಗೊಳಿಸುವಂತೆ ಆದೇಶ ನೀಡಿದೆ. ನ್ಯಾಯಾಲಯ, ಈ ಪ್ರಕರಣದಲ್ಲಿ ಇಬ್ಬರ ವಿರೋಧದಲ್ಲಿ ಯಾವುದೇ ಅಪರಾಧಿ ಪ್ರಕರಣ ನಿರ್ಮಾಣವಾಗುವುದಿಲ್ಲ. ಮೇ ೨೦೨೧ ರಲ್ಲಿ ಕಾಂಗ್ರೆಸ್ ಇಬ್ಬರ ವಿರುದ್ಧ ದೂರು ದಾಖಲಿಸಿತ್ತು.

ಏನು ಈ ಪ್ರಕರಣ ?

ರಮಣ ಸಿಂಹ ಮತ್ತು ಸಂಬಿತ ಪಾತ್ರಾ ಇವರು ಮೇ ೧೮, ೨೦೨೧ ರಂದು ಟ್ವೀಟರ್ ಮೂಲಕ ಕಾಂಗ್ರೆಸ್ಸಿನ ಹೆಸರಿನ ‘ಟೂಲಕಿಟ್’ ಪ್ರಸಾರ ಮಾಡಿತ್ತು. ಕೊರೊನಾ ಮಹಾಮಾರಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಯಾವ ರೀತಿ ಕೃತಿ ಮಾಡುವುದು, ಇದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಈ ‘ಟೂಲಕಿಟ್’ ಪ್ರಸಾರ ಮಾಡಿದೆ ಎಂದು ಇಬ್ಬರೂ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದರು. ಟ್ವೀಟ್ ಗೆ ಈ ಟೂಲ್ ಕಿಟ್ ಕೂಡ ಜೋಡಿಸಲಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ನ ಯುವ ಶಾಖೆಯಿಂದ ಇವರಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಅಪರಾಧ ದಾಖಲಿಸಿಕೊಂಡಿದ್ದರು.