ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆ ನಡೆಸುವಾಗ ಸ್ಕಂದ ಪುರಾಣದ ಆಧಾರ ನೀಡಿದರು. ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಆಗಿದ್ದರಿಂದ ಆಕೆ ಗರ್ಭಿಣಿಯಾದಳು. ಆಕೆ ಗರ್ಭಪಾತ ಮಾಡಿಕೊಳ್ಳಬೇಕೆಂದು ಆಕೆಯ ತಂದೆ ತಾಯಿಯ ಇಚ್ಛೆ ಇತ್ತು. ಈ ಕುರಿತು ನ್ಯಾಯಾಲಯವು ವಿಚಾರಣೆ ನಡೆಸುವಾಗ, ‘ಹುಡುಗಿಯ ತಾಯಿ ತಂದೆ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಡ ಹೇರಲು ಸಾಧ್ಯವಿಲ್ಲ;’ ಆದರೆ ಇದೇ ಸಮಯದಲ್ಲಿ ನ್ಯಾಯಾಲಯವು ಹುಡುಗಿಗೆ ಗರ್ಭಪಾತ ಮಾಡಿಸಿಕೊಳ್ಳುವ ಇಚ್ಛೆ ಇದ್ದರೆ ಆಗ ಆಕೆ ಗರ್ಭಪಾತ ಮಾಡಿಸಿಕೊಳ್ಳಬಹುದು’, ಎಂದು ತೀರ್ಪು ನೀಡಿತು. ನ್ಯಾಯಮೂರ್ತಿ ಸಮೀರ ದವೆ ಇವರು ಈ ಮೊಕದ್ದಮೆಯ ಕುರಿತು ವಿಚಾರಣೆ ಮಾಡುವ ಮೊದಲು ಮನುಸ್ಮೃತಿಯ ಉಲ್ಲೇಖ ಕೂಡ ಮಾಡಿದ್ದರು.
ನ್ಯಾಯಮೂರ್ತಿ ದವೆ ಇವರು, ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನ ಎಲ್ಲಕ್ಕಿಂತ ಮೇಲಿದೆ. ಸ್ಕಂದ ಪುರಾಣದಲ್ಲಿ, ‘ನಾಸ್ತಿ ಮಾತೃ ಸಮಾ ಛಾಯ ನಾಸ್ತಿ ಮಾತೃ ಸಮಾ ಗತಿಃ | ನಾಸ್ತಿ ಮಾತೃ ಸಮಂ ತ್ರಾಣಂ ನಾಸ್ತಿ ಮಾತೃ ಸಮಾ ಪ್ರಪಾ ||’ (ಸ್ಕಂದ ಪುರಾಣ, ಅಧ್ಯಾಯ ೬,೧೦೩ – ೧೦೪) (ಅರ್ಥ : ತಾಯಿಯಂತೆ ನೆರಳಿಲ್ಲ, ಆಧಾರ ಇಲ್ಲ, ತಾಯಿಯಂತೆ ಸಂರಕ್ಷಣೆ ಇಲ್ಲ, ತಾಯಿಯಂತೆ ಜೀವನ ದಾತ ಈ ಜಗತ್ತಿನಲ್ಲಿ ಬೇರಾರು ಇಲ್ಲ.) ಅಂದರೆ ತಾಯಿಯ ಹಾಗೆ ಯಾರು ಕೂಡ ಜೀವನ ನೀಡಲು ಸಾಧ್ಯವಿಲ್ಲ. ತಾಯಿಯ ಮಡಲಿನಲ್ಲಿರುವ ಸುರಕ್ಷತೆಯ ಭಾವ ಬೇರೆ ಯಾರು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
‘No Life Giver In World Like The Mother’: Gujarat HC Cites ‘Skand Purana’ While Allowing Minor Girl To Abort 17-Week Pregnancy | @ISparshUpadhyay #MedicalTerminationOfPregnancy #GujaratHighCourt #SkandaPurana #Mother https://t.co/GVcRPt84xk
— Live Law (@LiveLawIndia) September 11, 2023