ರಾಜ್ಯ ಸಭೆಯಲ್ಲೂ ಮಹಿಳಾ ಮೀಸಲಾತಿ ಮಸೂದೆಗೆ ಅಂಗಿಕಾರ

ನವ ದೆಹಲಿ – ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ‘ನಾರಿ ಶಕ್ತಿ ವಂದನ್’ ಈ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಯಿತು. ಸೆಪ್ಟೆಂಬರ್ 21 ರಂದು, ರಾಜ್ಯಸಭೆಯಲ್ಲಿ ದಿನವಿಡಿ ಮೀಸಲಾತಿಯ ಚರ್ಚೆಯಾದ ನಂತರ ತಡರಾತ್ರಿ ಅದನ್ನು ಒಮ್ಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮಸೂದೆಯ ಪರವಾಗಿ 215 ಮತಗಳು ಚಲಾವಣೆಯಾಗಿದ್ದು, ವಿರೋಧವಾಗಿ ಒಂದೇ ಒಂದು ಮತವೂ ಚಲಾವಣೆಯಾಗಲಿಲ್ಲ. ವಿರೋಧ ಪಕ್ಷದಿಂದ ಮಸೂದೆಗೆ 9 ತಿದ್ದುಪಡಿಗಳನ್ನು ಸೂಚಿಸಲಾಯಿತು; ಆದರೆ ಅವುಗಳನ್ನು ಸ್ವೀಕರಿಸಲಿಲ್ಲ. ಇದೀಗ ದೇಶದ ಅರ್ಧದಷ್ಟು ರಾಜ್ಯಗಳ ಪೈಕಿ ಕೆಲವೇ ರಾಜ್ಯಗಳ ವಿಧಾನಸಭೆಗಳಲ್ಲಿ ಅನುಮೋದನೆ ಪಡೆದ ನಂತರ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಲಾಗುವುದು. ನಂತರ ಮಸೂದೆಯನ್ನು ಕಾಯ್ದೆಯಾಗಿ ಪರಿವರ್ತಿಸಲಾಗುವು.