ತೆಲುಗು ಚಲನಚಿತ್ರ ‘ರಝಾಕಾರ’ನ ಸಣ್ಣ ಜಾಹೀರಾತ್(ಟೀಸರ್) ಬಿಡುಗಡೆ !

  • ರಝಾಕರರಿಂದ ಹಿಂದೂಗಳ ಮೇಲೆ ನಡೆಸಿರುವ ದೌರ್ಜನ್ಯದ ನೈಜ ಚಿತ್ರಣ !

  • ಜಾಹೀರಾತು ಪ್ರದರ್ಶನದ ಸಮಯದಲ್ಲಿ ಪ್ರಖರ ಹಿಂದುತ್ವನಿಷ್ಟ ಸಂಸದ ಟಿ. ರಾಜ ಸಿಂಹ ಉಪಸ್ಥಿತಿ !

ಮುಂಬಯಿ – ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ. ಇದರಲ್ಲಿ ನಿಜಾಮರ ಆಡಳಿತ ಕಾಲದಲ್ಲಿ ‘ರಝಾಕರ’ ಹೆಸರಿನ ಸೈನ್ಯ ಕಾಸಿಮ್ ರಿಝವಿ ಇವನು ಸಿದ್ಧಗೊಳಿಸಿದ್ದನು. ಈ ಸೈನ್ಯವು ಹಿಂದುಗಳ ಮೇಲೆ ಮಿತಿಮೀರಿದ ದೌರ್ಜನ್ಯ ನಡೆಸಲಾಯಿತು. ಅದರ ಮಾಹಿತಿ ಈ ಚಲನಚಿತ್ರದಲ್ಲಿ ನೀಡಲಾಗಿದೆ. ವಿಶೇಷವೆಂದರೆ ಹೈದರಾಬಾದಿನ ಸಂಸ್ಥಾನ ಪೊಲೀಸ ಕ್ರಮ ಕೈಗೊಂಡು ಭಾರತದಲ್ಲಿ ವಿಲೀನಗೊಳಿಸಿದ ನಂತರ ರಝಾಕರ ಸೈನ್ಯ ‘ಮಜಲೀಸ್ ಏ ಇತ್ತಹಾದುಲ್ ಮುಸಲಮಿನ’ ಎಂದರೆ ಎಂ.ಐ.ಎಂ. ಈ ಪಕ್ಷದಲ್ಲಿ ರೂಪಾಂತರಗೊಂಡಿತು. ‘ರಝಾಕಾರ’ ಚಲನಚಿತ್ರ ‘ಸಮರವೀರ ಕ್ರಿಯೇಶನ್’ ಈ ಕಂಪನಿಯಿಂದ ನಿರ್ಮಿಸಲಾಗಿದೆ. ಇದರ ಜಾಹೀರಾತು ಪ್ರದರ್ಶನ ಸಮಯದಲ್ಲಿ ಭಾಗ್ಯನಗರದಲ್ಲಿನ ಹಿಂದುತ್ವನಿಷ್ಠ ಸಂಸದ ಟಿ ರಾಜಸಿಂಹ ಉಪಸ್ಥಿತರಿದ್ದರು.

(ಸೌಜನ್ಯ – Sri Venkateswara Movies)

ಚಲನಚಿತ್ರದಲ್ಲಿ ರಝಾಕರರಿಂದ ಹಿಂದುಗಳ ಮೇಲೆ ನಡೆದಿರುವ ದೌರ್ಜನ್ಯದ ಚಿತ್ರಣ

೧. ಕಾಸಿಮ ರಿಝವಿ ಯಾವಾಗಲೂ ಸೈನ್ಯಾಧಿಕಾರಿಯ ಸಮವಸ್ತ್ರದಲ್ಲಿಯೇ ಇರುತ್ತಿದ್ದನು. ರಿಝವಿ ಪ್ರತಿಯೊಂದು ಮನೆಯ ಮೇಲೆ ಇಸ್ಲಾಮಿ ಬಾವುಟ ಹಾರಿಸುವ ಆದೇಶ ನೀಡಿದ್ದ.

೨. ರಿಝವಿ ಇವನು ಬ್ರಾಹ್ಮಣರ ಜನಿವಾರವನ್ನು ಕತ್ತರಿಸುವುದು ತೋರಿಸಲಾಗಿದೆ.

೩. ನಿಝಾಮ, ‘ಭಾರತ ಮೊದಲಿನಿಂದಲೂ ಅನೇಕ ಸಮಸ್ಯೆಗಳಿಂದ ಕೂಡಿದೆ, ಇಂತಹ ಸ್ಥಿತಿಯಲ್ಲಿ ಹೈದರಾಬಾದ್ ಇಸ್ಲಾಮ ರಾಜ್ಯವೇ ಆಗಿರುತ್ತದೆ. ನಾಲ್ಕು ದಿಕ್ಕಿನಿಂದ ಮಸೀದಿ ಕಟ್ಟಬೇಕು. ಜನಿವಾರವನ್ನು ಕತ್ತರಿಸಿ ಅವರನ್ನು ಸುಟ್ಟು ಹಾಕಬೇಕು.

೪. ಈ ಜಾಹಿರಾತಿನಲ್ಲಿ ರಝಾಕರರ ಸೈನ್ಯ ಕುದುರೆ ಮೇಲೆ ಕುಳಿತು ಹಿಂದುಗಳ ಶಿರಶ್ಚೇಧ ಮಾಡುತ್ತಿದ್ದಾರೆ. ಖಡ್ಗದಿಂದ ಹಿಂದುಗಳನ್ನು ಕೊಲ್ಲುತ್ತಿದ್ದಾರೆ. ಗುಂಡು ಹಾರಿಸುತ್ತಿದ್ದಾರೆ. ಹಿಂದೂ ಪುರುಷರನ್ನು ಹಿಡಿದು ಅವರ ಮೀಸೆಗಳನ್ನು ಕತ್ತರಿಸುತ್ತಿದ್ದಾರೆ. ಅವರಿಗೆ ಇಸ್ಲಾಮಿ ಟೋಪಿ ಹಾಕಲಾಗುತ್ತದೆ. ಬ್ರಾಹ್ಮಣರ ಜುಟ್ಟು ಕತ್ತರಿಸಲಾಗುತ್ತಿದೆ. ಶಾಲೆಯ ಪಠ್ಯಕ್ರಮದಿಂದ ಸಂಸ್ಕೃತ, ತೆಲುಗು, ಕನ್ನಡ ಮತ್ತು ಮರಾಠಿ ಭಾಷೆ ತೆಗೆದು ಅರಬಿ ಕಲಿಸುವ ಆದೇಶ ನೀಡಲಾಗುತ್ತಿದೆ.

೫. ರಝಾಕಾರ, ‘ಈ ಕಾಫಿರರು ಇಸ್ಲಾಂ ಸ್ವೀಕರಿಸದೆ ಇದ್ದರೆ ಅವರನ್ನು ಕೊಲ್ಲಿರಿ’, ಎಂದು ಹೇಳುತ್ತಾನೆ.

೬ ಒಂದು ಪ್ರಸಂಗದಲ್ಲಿ ರಝಾಕರನು ಅರ್ಚಕರ ಪೂಜೆಯ ಕಳಸದಲ್ಲಿ ಉಗಳಿರುವುದು ತೋರಿಸಲಾಗಿದೆ.

೭. ಹಿಂದುಗಳಿಗೆ ಕಟ್ಟಿ ಎಳೆದುಕೊಂಡು ಒಯ್ಶಲಾಗುತ್ತಿದೆ.

೮. ನೂರಾರು ಹಿಂದುಗಳನ್ನು ಕೊಂದು ಅವರ ಶವಗಳನ್ನು ಮರದ ಮೇಲೆ ತೂಗು ಹಾಕಲಾಗಿದೆ.

೯. ಹಿಂದೂ ಮಹಿಳೆಯ ಎದುರು ಅವರ ಪತಿ ಮತ್ತು ಮಕ್ಕಳನ್ನು ಕೆರೆಗೆ ಎಸೆಯಲಾಗಿದೆ.

೧೦. ಹಿಂದುಗಳ ಹತ್ಯೆಯ ಸಮಯದಲ್ಲಿ ಅಲ್ಲಾಹು ಅಕ್ಬರ್ (ಅಲ್ಲ ಮಹಾನನಾಗಿದ್ದಾನೆ) ಹೀಗೆ ಘೋಷಣೆ ನೀಡಲಾಗುತ್ತಿದೆ.

೧೧. ಹಿಂದೂ ಮಹಿಳೆ, ಹುಡುಗಿಯರ ಮೇಲೆ ಬಲಾತ್ಕಾರ ಮಾಡಲಾಗುತ್ತಿದೆ. ಹಿಂದೂಗಳನ್ನು ಸುಡಲಾಗುತ್ತಿದೆ ಅವರ ಮನೆಗಳು ಸುಡಲಾಗುತ್ತಿದೆ.

‘ಮಜಲೀಸ್ ಬಚಾವೋ ತಹರಿಕ’ ಈ ಸಂಘಟನೆಯಿಂದ ಚಲನಚಿತ್ರ ನಿಷೇಧಿಸುವಂತೆ ಒತ್ತಾಯ

ರಜಾಕರ ಚಲನಚಿತ್ರದ ಸಣ್ಣ ಜಾಹಿರಾತು ಪ್ರದರ್ಶನ ನಡೆಸಲಾದ ನಂತರ ತೆಲಂಗಾಣದಲ್ಲಿನ ‘ಮಜಲೀಸ್ ಬಚಾವೋ ತಹರಿಕ’ (ಎಂ.ಬಿ .ಟಿ.) ಈ ಸಂಘಟನೆಯ ವಕ್ತಾರ ಅಮಜದ್ ಉಲ್ಲಾಹ ಖಾನ್ ಇವರು, ಈ ಚಲನಚಿತ್ರದಲ್ಲಿ ವಿಕೃತ ಇತಿಹಾಸ ತೋರಿಸಲಾಗಿದೆ. ಸಂಪೂರ್ಣ ಚಲನಚಿತ್ರ ಕಾಲ್ಪನಿಕವಾಗಿ ನಿರ್ಮಿಸಲಾಗಿದೆ. ಈ ಚಲನಚಿತ್ರದ ಮಾಧ್ಯಮದಿಂದ ಜನರಲ್ಲಿ ದ್ವೇಷ ಅಪಸರಿಸಲಾಗುತ್ತಿದೆ. ಈ ಚಲನಚಿತ್ರ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಚಲನಚಿತ್ರ ಯಾವಾಗ ಪ್ರದರ್ಶಿಸಲಾಗುವುದೆಂದು ಸ್ಪಷ್ಟಪಡಿಸಲಾಗಿಲ್ಲ; ಆದರೆ ಈ ಚಲನಚಿತ್ರ ತೆಲುಗು ಸಹಿತ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರದರ್ಶಿಸಲಾಗುವುದೆಂದು ಹೇಳಲಾಗುತ್ತಿದೆ.