ಕೆನಡಾದಲ್ಲಿ ವರ್ಷದಾದ್ಯಂತ ೧೫ ಭಾರತವಿರೋಧಿ ಘಟನೆಗಳು ನಡೆದರೂ ಒಬ್ಬರನ್ನೂ ಬಂಧಿಸಿಲ್ಲ ! – ಕೆನಡಾದ ಭಾರತೀಯ ನಾಗರೀಕರಿಂದ ಟೀಕೆ

ಕೆನಡಾದ ಭಾರತೀಯ ಮೂಲದ ನಾಗರೀಕರಿಂದ ಟ್ರುಡೊ ಸರಕಾರದ ಮೇಲೆ ಟೀಕೆ

ಟೊರಾಂಟೊ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊರವರು ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರರವರ ಹತ್ಯೆಯಲ್ಲಿ ಭಾರತದ ಕೈವಾಡವಿರುವುದಾಗಿ ನೀಡಿದ್ದ ಹೇಳಿಕೆಯ ಕುರಿತು ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ವಂಶದ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತೀಯ ಮೂಲದ ನಾಗರೀಕರು, ಟ್ರುಡೊರವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಕೆನಡಾದಲ್ಲಿ ವರ್ಷದಾದ್ಯಂತ ೧೫ ಭಾರತವಿರೋಧಿ ಘಟನೆಗಳು ನಡೆದಿವೆ. ಇದರಲ್ಲಿ ೯ ಭಾರತವಿರೋಧಿ ಸಭೆಗಳು, ಖಾಲಿಸ್ತಾನವನ್ನು ಬೆಂಬಲಿಸಿ ೨ ಕಡೆಗಳಲ್ಲಿ ಜನಾಭಿಪ್ರಾಯ ಪಡೆದುಕೊಂಡಿರುವ ಘಟನೆ ಹಾಗೂ ೪ ದೇವಸ್ಥಾನಗಳ ಮೇಲಿನ ದಾಳಿಗಳು ಸೇರಿವೆ. ಟ್ರುಡೊ ಸರಕಾರವು ಒಂದೇ ಒಂದು ಪ್ರಕರಣದಲ್ಲಿಯೂ ಯಾರನ್ನೂ ಬಂಧಿಸಿಲ್ಲ.

೧. ಕೆನಡಾದಲ್ಲಿನ ಬ್ರೆಮ್ಪಟನ್ ನಗರದ ನಿವಾಸಿ ಅಕ್ಷಯ ಗರ್ಗರವರು ಮಾತನಾಡುತ್ತ, ಟ್ರುಡೊರವರು ಭಾರತದ ಮೇಲೆ ಆರೋಪ ಮಾಡಿದ್ದಾರೆ. ಆದರೆ ತಮ್ಮ ಸರಕಾರದ ಕೆಲಸವನ್ನು ನೋಡಿಲ್ಲ, ಎಂದು ಹೇಳಿದ್ದಾರೆ.

೨. ಇಟೋಬಿಕೊಕ್ ನ ನಿವಾಸಿ ಅಶ್ವಿನಿ ಶರ್ಮಾರವರು ಮಾತನಾಡುತ್ತ, ಇಲ್ಲಿ ಭಾರತದ ವಿರುದ್ಧ ನಡೆದ ಘಟನೆಗಳ ವಿಡಿಯೋಗಳನ್ನು ಪೊಲೀಸರಿಗೆ ಒಪ್ಪಿಸಲಾಗುತ್ತದೆ, ಆದರೆ ಪೊಲೀಸರಿಗೆ ಒಬ್ಬ ಆರೋಪಿಯೂ ಸಿಗುತ್ತಿಲ್ಲ. ಈಗ ಖಾಲಿಸ್ತಾನಿ ನಿಜ್ಜರನ ಹತ್ಯೆಯಾದ ೩ ತಿಂಗಳಲ್ಲಿಯೇ ಕೆನಡಾಗೆ ದೊಡ್ಡ ಸಾಕ್ಷಿಗಳು ದೊರೆತಿದೆ. ಇದು ಹೇಗೆ ಸಾಧ್ಯ ?

೩. ಒಂಟಾರಿಯೋದಲ್ಲಿನ ಓರ್ವ ಸಿಖ್ಖ ಯುವಕನು ಮಾತನಾಡುತ್ತ, ಕೆಲವು ಜನರಿಂದಾಗಿ ನಮ್ಮ ಸಂಪೂರ್ಣ ಸಮಾಜಕ್ಕೆ ಅವಮಾನವಾಗುತ್ತದೆ. ಇಲ್ಲಿನ ಟ್ರುಡೊ ಸರಕಾರವು ನಿಷ್ಕ್ರಿಯವಾಗಿದೆ. ಪ್ರಧಾನಮಂತ್ರಿ ಟ್ರುಡೊರವರು ದುರ್ಬಲ ನಾಯಕರಾಗಿದ್ದಾರೆ. ಅವರ ಪ್ರಸಿದ್ಧಿಯ ಸೂಚ್ಯಂಕವು ಕೇವಲ ಶೇ. ೩೦ ರಷ್ಟಿದೆ. ಖಾಲಿಸ್ತಾನ ಬೆಂಬಲಿಗ ಜಗಮಿತ ಧಾಲೀವಾಲರವರ ಪಕ್ಷದ ಬೆಂಬಲದಿಂದಾಗಿ ಅವರು ಸರಕಾರ ನಡೆಸುತ್ತಿದ್ದಾರೆ. ಖಾಲಿಸ್ತಾನಿಗಳನ್ನು ಸಂತೋಷಪಡಿಸುತ್ತ ತಮ್ಮ ಕುರ್ಚಿಯನ್ನು ಉಳುಸಿಕೊಳ್ಳುತ್ತಿದ್ದಾರೆ, ಎಂದು ಹೇಳಿದನು.

ಸಂಪಾದಕೀಯ ನಿಲುವು

ಇದರಿಂದ ಟ್ರುಡೊ ಸರಕಾರದ ಕಾರ್ಯಕ್ಷಮತೆ ಹಾಗೂ ಭಾರತದ್ವೇಷ ಗಮನಕ್ಕೆ ಬರುತ್ತದೆ ! ಇಂತಹ ಸರಕಾರವು ಭಾರತವನ್ನು ಆರೋಪಿಸಿ ಜಗತ್ತಿನೆದರು ನಗೆಪಾಟ್ಲಿಗಿಡಾಗುತ್ತಿದೆ !