ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಖಲಿಸ್ತಾನದ ಸೂತ್ರವನ್ನು ಮುಂದಿಟ್ಟಿತು ! – ‘ರಾ’ದ ಮಾಜಿ ಅಧಿಕಾರಿ ಜಿ. ಬಿ. ಎಸ್. ಸಿದ್ದು

‘ರಾ’ದ ಮಾಜಿ ಅಧಿಕಾರಿ ಜಿ. ಬಿ. ಎಸ್. ಸಿದ್ದು ಇವರಿಂದ ಗಂಭೀರ ಆರೋಪ !

`ರಾ’ನ ಮಾಜಿ ನಿರ್ದೇಶಕ ಜಿ.ಬಿ.ಎಸ್. ಸಿದ್ಧೂ

ನವ ದೆಹಲಿ – ಪಂಜಾಬ್ ನ ಹಿಂದುಗಳನ್ನು ಹೆದರಿಸಲು ಕಾಂಗ್ರೆಸ್ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆ ಇವನನ್ನು ಮುಂದಿಟ್ಟರು. ಖಲಿಸ್ತಾನದ ಸೂತ್ರ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕಾಗಿ ಮುಂದೆ ತಂದರು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ, ಸಂಜಯ ಗಾಂಧಿ, ಗ್ಯಾನಿ ಝೈಲಸಿಂಗ ಮತ್ತು ಕಮಲನಾಥ ಇವರು ಭಿಂದ್ರನ್ವಾಲೆಗೆ ಹಣ ಪೂರೈಸುತ್ತಿದ್ದರು, ಎಂದು ಭಾರತದ ಗೂಡಾಚಾರ ಸಂಸ್ಥೆ ‘ರಾ’ ದ(‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ನ) ಮಾಜಿ ಅಧಿಕಾರಿ ಜಿ.ಬಿ.ಎಸ್.ಸಿದ್ದು ಇವರು ಎ.ಎನ್.ಐ. ವಾರ್ತಾ ವಾಹಿನಿಯ ಸಂದರ್ಶನದಲ್ಲಿ ಮಾಹಿತಿ ನೀಡಿದರು. ಖಲಿಸ್ತಾನದ ವಿಷಯದಿಂದ ಭಾರತ ಮತ್ತು ಕೆನಡಾದಲ್ಲಿ ವಿವಾದ ನಿರ್ಮಾಣವಾಗಿರುವುದರಿಂದ ಸಿದ್ದು ಇವರ ಸಂದರ್ಶನ ನಡೆಸಲಾಯಿಗಿತ್ತು.

ಜಿ.ಬಿ.ಎಸ್. ಸಿದ್ದು ಇವರು ಸಂದರ್ಶನದಲ್ಲಿ ಮಂಡಿಸಿರುವ ಅಂಶಗಳು

ಅಕಾಲಿ ದಳ ಮತ್ತು ಜನತಾ ಪಾರ್ಟಿ ಇವರ ಮೈತ್ರಿಯನ್ನು ಬೇರ್ಪಡಿಸುವದಕ್ಕಾಗಿ ಕಾಂಗ್ರೆಸ್ಸಿಗರು ಪ್ರಯತ್ನ ಮಾಡಿದ್ದರು !

ತುರ್ತು ಪರಿಸ್ಥಿತಿಯಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಇವರು ಸೋಲು ಅನುಭವಿಸಿದ್ದರು. ಅದರ ನಂತರ ಗ್ಯಾನಿ ಝೈಲಸಿಂಗ್ ಇವರು ಪಂಜಾಬ್ ನ ಆಕಾಲಿ ದಳ ಮತ್ತು ಜನತಾ ಪಾರ್ಟಿಯ ಮೈತ್ರಿಯಲ್ಲಿ ವಿವಾದ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದರು. ಇದರ ಅಂತರ್ಗತ ಸಿಖ್ಖರ ಓರ್ವ ದೊಡ್ಡ ಸಂತರನ್ನು ಮುಂದೆ ತರುವ ಪ್ರಯತ್ನ ಮಾಡಲಾಗಿತ್ತು. ಈ ಸಂತರು ಕಾಂಗ್ರೆಸ್ಸಿನ ಹೇಳಿಕೆಯ ಪ್ರಕಾರ ಅಕಾಲಿ ದಳದ ನೀತಿಗಳನ್ನು ಟೀಕಿಸುತ್ತಿದ್ದರು. ಇದರ ಬಗ್ಗೆ ಜನತಾ ಪಾರ್ಟಿ ಕೂಡ ಏನಾದರೂ ಮಾತನಾಡುವುದು. ಇದರಿಂದ ಅವರಲ್ಲಿನ ಮೈತ್ರಿಯಲ್ಲಿ ವಿವಾದ ಉಂಟಾಗಿ ಕೊನೆಗೊಳಿಸುವುದು, ಹೀಗೆ ಕಾಂಗ್ರೆಸ್ಸಿನ ಷಡ್ಯಂತ್ರವಾಗಿತ್ತು.

ಕಾಂಗ್ರೆಸ್ ನಿಂದ ಭಿಂದ್ರನ್ವಾಲೆ ಇವರನ್ನು ಎದುರು ತಂದರು !

ಇದರ ಸಂದರ್ಭದಲ್ಲಿ ಗ್ಯಾನಿ ಝೈಲ ಸಿಂಗ, ಸಂಜಯ ಗಾಂಧಿ, ಇಂದಿರಾ ಗಾಂಧಿ ಮತ್ತು ಕಮಲನಾಥ ಇವರು ಕೆಲಸ ಮಾಡುತ್ತಿದ್ದರು. ಇದೆಲ್ಲವನ್ನು ಇಂದಿರಾಗಾಂಧಿ ಇವರ ಅಕ್ಬರ್ ರೋಡ್ ಕಾರ್ಯಾಲಯದಲ್ಲಿ ಮತ್ತು ೧ ಸಫದರಜಂಗ ಇಲ್ಲಿಯ ನಿವಾಸ ಸ್ಥಾನದಲ್ಲಿ ನಡೆಸುತ್ತಿದ್ದರು. ಈ ಜನರು ಭಿಂದ್ರನ್ವಾಲೆ ಇವನನ್ನು ಮುಂದೆ ತಂದರು. ಅವನನ್ನು ಖಲಿಸ್ತಾನಗಳ ಜೊತೆಗೆ ಸೇರಿಸುವ ಯೋಜನೆಗಳನ್ನು ನಡೆಸುತ್ತಿದ್ದರು. ಅವರ ಉದ್ದೇಶ ಭಿಂದ್ರನ್ವಾಲೆ ಇವನನ್ನು ಬಳಸಿಕೊಂಡು ಹಿಂದುಗಳನ್ನು ಹೆದರಿಸುವುದಾಗಿತ್ತು. ಅದೇ ಸಮಯದಲ್ಲಿ ಖಲಿಸ್ತಾನದ ಅಂಶ ನಿರ್ಮಾಣವಾಯಿತು, ಅದು ಈ ಮೊದಲು ಅಸ್ತಿತ್ವದಲ್ಲಿ ಇರಲಿಲ್ಲ. ‘ದೇಶದ ಅಖಂಡತೆಗೆ ಅಪಾಯ ನಿರ್ಮಾಣವಾಗಿದೆ ಮತ್ತು ಇದರ ಆಧಾರದಲ್ಲಿ ರಾಜಕೀಯ ಲಾಭ ಪಡೆಯುವುದು’, ಇದು ಇವರೆಲ್ಲರ ಖಲಿಸ್ತಾನಿಗಳ ಅಂಶ ನಿರ್ಮಾಣ ಮಾಡುವುದರ ಹಿಂದಿನ ಯೋಜನೆ ಆಗಿತ್ತು.

ಕಾಂಗ್ರೆಸ್ಸಿಗರೇ ಭಿಂದ್ರನ್ವಾಲೆ ಇವನನ್ನು ಹುಡುಕಿ ಬೆಳೆಸಿದರು !

ಬ್ರಿಟನ್ ನಲ್ಲಿ ಭಾರತದ ಮಾಜಿ ಉನ್ನತ ಅಧಿಕಾರಿ ಮತ್ತು ಪ್ರಸಿದ್ಧ ಲೇಖಕ ಕುಲದೀಪ ನಯ್ಯರ್ ಇವರು ‘ಬಿಯಾಂಡ್ ದಿ ಲೈನ್’ ಈ ಪುಸ್ತಕದ ಆಧಾರ ನೀಡುತ್ತಾ ಸಿದ್ದು ಇವರು, ಅವರು (ಕುಲದೀಪ ನಯ್ಯರ್) ಭಿಂದ್ರನ್ವಾಲೆಯ ಸಂದರ್ಭದಲ್ಲಿ ಕಮಲನಾಥ ಇವರ ಜೊತೆಗೆ ಚರ್ಚಿಸಿದ್ದರು. ಆಗ ಕಮಲನಾಥ ಇವರು, ‘ನಮ್ಮ ಮಾತು ಕೇಳಬೇಕು ಮತ್ತು ಅದೇ ರೀತಿ ಕೆಲಸ ಮಾಡುವಂತಹ ಓರ್ವ ಉನ್ನತ ಮಟ್ಟದ ಮತ್ತು ಕಠೋರವಾದ ಸಂತನನ್ನು ಹುಡುಕುತ್ತಿದ್ದೇವೆ. ಅದಕ್ಕಾಗಿ ಕಮಲನಾಥ ಇವರು ಇಬ್ಬರೂ ಸಂತರ ಸಂದರ್ಶನ ನಡೆಸಿದ್ದರು. ಒಬ್ಬ ಸಂತರು ಅತ್ಯಂತ ನಮ್ರವಾಗಿದ್ದರು ಹಾಗೂ ಇನ್ನೊಬ್ಬ ಎಂದರೆ ಭಿಂದ್ರನ್ವಾಲೆ ಕಾಂಗ್ರೆಸ್ಸಿಗೆ ತಕ್ಕಂತೆ ಇದ್ದರು, ಎಂದು ಹೇಳಿದರು.

ಕಮಲನಾಥ್ ಇವರು, ‘ನಾವು ಭಿಂದ್ರನ್ವಾಲೆನಿಗೆ ಹಣ ನೀಡುತ್ತಿದ್ದೆವು !

ಕಮಲನಾಥ ಇವರು ಕುಲದೀಪ ನಯ್ಯರ್ ಇವರಿಗೆ, ‘ಅವರು, ಸಂಜಯ ಗಾಂಧಿ ಮತ್ತು ಅವರ ತಂಡದಲ್ಲಿನ ಜನರು ಬಿಂದ್ರನ್ವಾಲೆಗೆ ಹಣ ನೀಡುತ್ತಿದ್ದರು’, ಅಂದರೆ ಕಮಲನಾಥ ಮತ್ತು ಸಂಜಯ ಗಾಂಧಿ ಅಷ್ಟೇ ಅಲ್ಲದೆ, ಗ್ಯಾನಿ ಝೈಲ ಸಿಂಗ ಮತ್ತು ಇಂದಿರಾ ಗಾಂಧಿ ಕೂಡ ಹಣ ನೀಡುವ ಷಡ್ಯಂತ್ರದಲ್ಲಿ ಸಹಭಾಗಿದ್ದರು. ಕಾಂಗ್ರೆಸ್ಸೇ ಭಿಂದ್ರನ್ವಾಲೆಯನ್ನು ಜನರ ಮುಂದೆ ತರುತ್ತಿದ್ದರು.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ಸಿಗರು ಭಿಂದ್ರನ್ವಾಲೆಯನ್ನು ಬಳಸುತ್ತಿದ್ದರು !

ಭಿಂದ್ರನ್ವಾಲೆ ಇವನು ಎಂದು ಖಲಿಸ್ತಾನಕ್ಕಾಗಿ ಆಗ್ರಹಿಸಿರಲಿಲ್ಲ. ಅವನು ಕೇವಲ, ‘ಇಂದಿರಾ ಗಾಂಧಿ ಏನಾದರೂ ನನ್ನ ಮಡಿಲಿಗೆ ಖಲಿಸ್ತಾನ ಹಾಕಿದರೆ ಆಗ ನಾನು ನಿರಾಕರಿಸುವುದಿಲ್ಲ ಎಂದು ಹೇಳಿದನು. ಭಿಂದ್ರನ್ವಾಲೆ ಇವನ ಉಪಯೋಗ ಧಾರ್ಮಿಕ ಉಪದೇಶಕ್ಕಾಗಿ ಮಾಡದೆ ಕೇವಲ ರಾಜಕೀಯ ಲಾಭ ಪಡೆಯುವುದಕ್ಕಾಗಿ ಮಾಡಲಾಯಿತು.

ಸಂಪಾದಕೀಯ ನಿಲುವು

ಯಾವ ಕಾಂಗ್ರೆಸ್ಸಿಗರು ಖಲಿಸ್ತಾನದ ಭೂತ ನಿರ್ಮಿಸಿದರೋ, ಅವರೇ ಇಂದಿರಾಗಾಂಧಿಯವರ ಹತ್ಯೆಗೆ ಕಾರಣರಾದರು ! ಅಂದರೆ ‘ಮಾಡಿದ್ದುಣ್ಣೊ ಮಹಾರಾಯಾ’ ಎಂಬುದು ಗಮನಕ್ಕೆ ಬರುತ್ತದೆ !