ಅಗಸ ವೃತ್ತಿಯ (ಬಟ್ಟೆ ತೊಳೆಯುವ) ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ತೆಲಂಗಾಣ ಸರಕಾರದ ಆದೇಶ!

ಭಾಗ್ಯನಗರ – ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇತ್ತೀಚೆಗೆ, ಬಟ್ಟೆ ತೊಳೆಯುವ ಕೆಲಸ ಮಾಡುವ ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಆದೇಶ ನೀಡಿದ್ದಾರೆ. ಇದಕ್ಕೂ ಮೊದಲು ಬಟ್ಟೆ ತೊಳೆಯುವ ಕೆಲಸ ಮಾಡುವ ಹಿಂದುಳಿದ ವರ್ಗಗಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತಿತ್ತು. ‘ತೆಲಂಗಾಣ ಸರಕಾರ ಹಿಂದೂ ‘ರಜಕ್’ ಸಮುದಾಯದ ವ್ಯವಹಾರವನ್ನು ನಾಶಪಡಿಸುತ್ತಿದೆ’, ಎಂದು ಭಾಜಪ ಆರೋಪಿಸಿದೆ. ಭಾಗ್ಯನಗರದ ಸಂಸದ ಹಾಗೂ ಎಂ.ಐ.ಎಂ. ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಈ ಬೇಡಿಕೆಯನ್ನು ಮುಂದಿಟ್ಟಿದ್ದರು.

ತೆಲಂಗಾಣದಲ್ಲಿ ಹಿಂದೂಗಳಿಗೆ ಗುರಿಯಾಗಿಸಲಾಗುತ್ತಿದೆ ! – ಭಾಜಪ

ತೆಲಂಗಾಣದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಭಾಜಪದ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ. ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಬಂಡಿ ಸಂಜಯ ಕುಮಾರ ಕೂಡ ಸರಕಾರದ ಆದೇಶವನ್ನು ಖಂಡಿಸಿದ್ದಾರೆ. ‘ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಹಿಂದೂ ‘ರಜಕ್’ ಸಮಾಜದ ವ್ಯಾಪಾರವನ್ನು ನಾಶ ಮಾಡುತ್ತಿದ್ದಾರೆ’, ಎಂದು ಕುಮಾರ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಮರ ಮತಗಳಿಗಾಗಿ ಭಾರತ ರಾಷ್ಟ್ರ ಸಮಿತಿ ಸರಕಾರವು ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ !