ತಮಿಳುನಾಡಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಗೆ ನಿಷೇಧ ಖಾಯಂ !

ಸರ್ವೋಚ್ಚ ನ್ಯಾಯಾಲಯದ ಆದೇಶ !

ನವ ದೆಹಲಿ – ತಮಿಳುನಾಡುವಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಯ ಮೇಲಿನ ನಿಷೇಧ ಮುಂದುವರೆಯಲಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿತು. ಮದ್ರಾಸ್ ಉಚ್ಚ ನ್ಯಾಯಾಲಯವು ಈ ಹಿಂದೆ ಇದನ್ನು ನಿಷೇಧಿಸಿತ್ತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿಯ ಕುರಿತು ವಿಚಾರಣೆ ಮಾಡುವಾಗ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ಇದೇ ಸಮಯದಲ್ಲಿ ನ್ಯಾಯಾಲಯವು, ‘ನೈಸರ್ಗಿಕ ಮಣ್ಣಿನಿಂದ ತಯಾರಿಸಲಾದ ಮೂರ್ತಿಗಳನ್ನು ಬಳಸಬಹುದು’, ಎಂದು ಸಹ ಸ್ಪಷ್ಟಪಡಿಸಿತು.

೧. ಮೂರ್ತಿಕಾರರ ನ್ಯಾಯವಾದಿ ಶ್ಯಾಮ ದಿವಾಣ ಇವರು ಯುಕ್ತಿವಾದ ಮಾಡುವಾಗ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಗಳನ್ನು ಅನೇಕ ವರ್ಷಗಳಿಂದ ತಯಾರಿಸಲಾಗುತ್ತಿದೆ. ಇದಕ್ಕಾಗಿ ಮೂರ್ತಿಕಾರರು ಸಾಲ ತೆಗೆಯುತ್ತಾರೆ. ಆದುದರಿಂದ ದಯವಿಟ್ಟು ಈ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದ್ದರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಶ್ರೀ ಗಣೇಶಮೂರ್ತಿಗಳ ತಯಾರಿಕೆಯ ಮೇಲಲ್ಲ ಆದರೆ ಅವುಗಳ ವಿಸರ್ಜನೆಯನ್ನು ನಿಷೇಧಿಸಿದೆ.

೨. ಸರಕಾರಿ ನ್ಯಾಯವಾದಿ ಅಮಿತ ಆನಂದ ತಿವಾರಿ ಇವರು ನ್ಯಾಯವಾದಿ ದಿವಾಣಿ ಇವರ ಯುಕ್ತಿವಾದದ ನಂತರ ಪ್ರತಿವಾದ ಮಾಡುವಾಗ, ಮಂಡಳಿಯ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಶ್ರೀ ಗಣೇಶ ಮೂರ್ತಿಗಳ ತಯಾರಿಕೆಯ ಮೇಲೆಯೂ ನಿಷೇಧವಿದೆ. ಮಂಡಳಿಯ ನಿಯಮಗಳಿಗನುಸಾರ ಪರಿಸರಸ್ನೇಹಿ ಮೂರ್ತಿಗಳನ್ನೂ ಕೃತಕ ನೀರಿನ ತೊಟ್ಟಿಗಳಲ್ಲಿ ವಿಸರ್ಜಿಸಬೇಕು’, ಎಂದು ಹೇಳಿದರು.