ನಮ್ಮ ವೃತ್ತಿಯು ಪ್ರಗತಿ ಆಗುವುದು ಅಥವಾ ಅಧೋಗತಿ ಆಗುವುದು ? ಎಂಬುದು ನಮ್ಮ ಪ್ರಾಮಾಣಿಕತೆಯ ಮೇಲೆ ಆಧರಿಸಿದೆ ! – ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರಿಂದ ನ್ಯಾಯವಾದಿಗಳಿಗೆ ಸಲಹೆ !

ಮುಂಬಯಿ – ನಾವು ಎಲ್ಲರನ್ನೂ ಮೂರ್ಖರನ್ನಾಗಿಸಬಹುದು, ಆದರೆ ನಮ್ಮನ್ನೇ ಮೂರ್ಖರಾಗಿಸಲು ಸಾಧ್ಯವಿಲ್ಲ. ನಮ್ಮ ವೃತ್ತಿಯ ಪ್ರಗತಿ ಆಗುವುದು ಅಥವಾ ಅಧೋಗತಿ ಆಗುವುದು ? ಇದು ನಮ್ಮ ಪ್ರಾಮಾಣಿಕತೆಯನ್ನು ಹೇಗೆ ಕಾಯ್ದುಕೊಳ್ಳುತ್ತೇವೆ ಎಂಬುದರ ಮೇಲೆ ಆಧರಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಧನಂಜಯ ಚಂದ್ರಚೂಡರವರು ಮುಂಬಯಿ ಉಚ್ಚ ನ್ಯಾಯಾಲಯದ ಔರಂಗಾಬಾದ ವಿಭಾಗೀಯ ಪೀಠ ಹಾಗೂ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡರವರು ಮಾತು ಮುಂದುವರೆಸಿ,

೧. ಪ್ರಾಮಾಣಿಕತೆಯು ಈ ವೃತ್ತಿಯ ಮುಖ್ಯ ಆಧಾರ ಸ್ತಂಭವಾಗಿದೆ. ನಾವೆಲ್ಲರೂ ನಮ್ಮ ವಿವೇಕದೊಂದಿಗೆ ಮಲಗುತ್ತೇವೆ. ಪ್ರತಿದಿನ ರಾತ್ರಿ ವಿವೇಕವು ನಾವು ಪ್ರಾಮಾಣಿಕತೆಯಿಂದ ಬದುಕೋಣವೇ ಅಥವಾ ಸ್ವತಃ ನಾಶ ಮಾಡಿಕೊಳ್ಳೋಣವೇ ಎಂದು ಕೇಳುತ್ತದೆ.

೨. ನ್ಯಾಯಧೀಶ ಹಾಗೂ ನ್ಯಾಯವಾದಿಗಳು ಪರಸ್ಪರರನ್ನು ಗೌರವಿಸಬೇಕು. ಇದರಿಂದ ಪರಸ್ಪರರ ಬಗ್ಗೆ ಗೌರವ ಸಿಗುತ್ತದೆ. ಇಬ್ಬರಿಗೂ ನಾವು ನ್ಯಾಯದ ಒಂದೇ ಚೌಕದ ಭಾಗವಾಗಿದ್ದೇವೆ ಎಂದು ಅನಿಸಿದಾಗ ಪರಸ್ಪರ ಗೌರವ ನೀಡಲು ಸಾಧ್ಯವಾಗುತ್ತದೆ, ಎಂದು ಹೇಳಿದರು.