ಹಿಂದೂ ಮಹಾಸಾಗರದಲ್ಲಿ ಚೀನಾದ ಸವಾಲನ್ನು ಎದುರಿಸಲು ಭಾರತೀಯ ನೌಕಾಪಡೆಯಿಂದ ಪ್ರಯತ್ನ !

  • 2035ರ ವೇಳೆಗೆ ಯುದ್ಧನೌಕೆಗಳ ಸಂಖ್ಯೆ 175 ಆಗಲಿದೆ.

  • ಚೀನಾದ ಬಳಿ ಪ್ರಸ್ತುತ 355 ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಇದೆ.

ನವದೆಹಲಿ – ಭಾರತೀಯ ನೌಕಾಪಡೆಯು ತನ್ನ ಬಲವನ್ನು ವೇಗವಾಗಿ ಹೆಚ್ಚಿಸುತ್ತಿದೆ. 68 ಹೊಸ ಯುದ್ಧನೌಕೆಗಳನ್ನು ಖರೀದಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಹಿಂದಿ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸವಾಲುಳೇ ಇದಕ್ಕೆ ಕಾರಣವಾಗಿದೆ. ಇದಕ್ಕಾಗಿ ಭಾರತ 2035ರ ವೇಳೆಗೆ ತನ್ನ ಯುದ್ಧನೌಕೆಗಳ ಸಂಖ್ಯೆಯನ್ನು 175ಕ್ಕೆ ಏರಿಸಲು ಪ್ರಯತ್ನಿಸುತ್ತಿದ್ದು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗುವುದು.

1. ನೌಕಾಪಡೆಯು ಪ್ರಸ್ತುತ 143 ವಿಮಾನಗಳು, 130 ಹೆಲಿಕಾಪ್ಟರ್‌ಗಳು ಮತ್ತು 132 ಯುದ್ಧನೌಕೆಗಳನ್ನು ಹೊಂದಿದೆ. ಈಗ ಹೊಸ ತಲೆಮಾರಿನ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಇತರ ಹಡಗುಗಳ ಖರೀದಿಯನ್ನು ಅನುಮತಿಸಲಾಗಿದೆ.

2. ಚೀನಾ ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾ ನೆಲೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಆಫ್ರಿಕಾದ ಜಿಬೌಟಿ, ಪಾಕಿಸ್ತಾನದ ಕರಾಚಿ ಮತ್ತು ಗ್ವಾದರ್ ಮತ್ತು ಕಾಂಬೋಡಿಯಾದ ಮುರಿ ಬಂದರಿನಲ್ಲಿ ನೆಲೆಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ, ಚೀನಾವು ವಿಶ್ವದ ಅತಿದೊಡ್ಡ ನೌಕಾಪಡೆಯನ್ನು ಹೊಂದಿದೆ. ಅದರ ಬಳಿ 355 ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಇದೆ. ಇದು ಕೂಡ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಚೀನಾ 150 ಹೊಸ ಯುದ್ಧನೌಕೆಗಳನ್ನು ಹೆಚ್ಚಿಸಿದೆ. ಮುಂದಿನ 5-6 ವರ್ಷಗಳಲ್ಲಿ ಯುದ್ಧನೌಕೆಗಳ ಸಂಖ್ಯೆಯನ್ನು 555 ಕ್ಕೆ ಹೆಚ್ಚಿಸುವ ಗುರಿಯನ್ನು ಚೀನಾ ಹೊಂದಿದೆ.