ಶ್ರೀರಾಮಚರಿತಮಾನಸದಲ್ಲಿ ‘ಪೊಟ್ಯಾಶಿಯಮ್ ಸೈನೈಡ್’ (ವಿಷ) ಇದೆಯಂತೆ ! – ಬಿಹಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ

ಬಿಹಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ ಇವರ ವಿವಾದಾತ್ಮಕ ಹೇಳಿಕೆ !

(ಪೊಟ್ಯಾಸಿಯಮ್ ಸೈನೈಡ್ ಒಂದು ರೀತಿಯ ವಿಷವಾಗಿದೆ. ಇದನ್ನು ನಾಲಿಗೆಯ ಮೇಲೆ ಇಟ್ಟ ತಕ್ಷಣ ಮನುಷ್ಯ ಸಾಯುತ್ತಾನೆ)

ಪಾಟಲಿಪುತ್ರ (ಬಿಹಾರ) – ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳದ ಬಿಹಾರ ಸರಕಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ ಅವರು ಶ್ರೀರಾಮಚರಿತಮಾನಸ ಗ್ರಂಥದ ತುಲನೆಯನ್ನು ‘ಪೊಟ್ಯಾಷಿಯಂ ಸೈನೈಡ್’ ಈ ವಿಷಕ್ಕೆ ಹೋಲಿಸಿದ್ದಾರೆ. ಅವರು ‘ಹಿಂದಿ ದಿನ’ದ ನಿಮಿತ್ತ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಚಂದ್ರಶೇಖರ ಅವರು ಈ ಹಿಂದೆಯೂ ಶ್ರೀ ರಾಮಚರಿತಮಾನಸ ಗ್ರಂಥವನ್ನು ಟೀಕಿಸಿದ್ದರು, ಹಾಗೆಯೇ ಒಂದು ಕಾರ್ಯಕ್ರಮದಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಅವರನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಹೇಳಿದ್ದರು.

ಪ್ರೊ. ಚಂದ್ರಶೇಖರ ಇವರು ಮಾತನಾಡಿ, ಶ್ರೀರಾಮಚರಿತಮಾನಸದಲ್ಲಿ ‘ಪೊಟ್ಯಾಶಿಯಂ ಸೈನೈಡ್’ ಇದ್ದು, ಎಲ್ಲಿಯವರೆಗೆ ಶ್ರೀರಾಮಚರಿತಮಾನ ಇರುವುದೋ, ಅಲ್ಲಿಯವರೆಗೂ ಅದನ್ನು ವಿರೋಧಿಸುತ್ತಲೇ ಇರುತ್ತೇನೆ ಎಂದು ಹೇಳಿದರು. ಒಂದು ವೇಳೆ ನೀವು 55 ಬಗೆಯ ಮೃಷ್ಟಾನವನ್ನು ಬಡಿಸಿ, ಅದರಲ್ಲಿ ಸ್ವಲ್ಪ ‘ಪೊಟ್ಯಾಸಿಯಮ್ ಸೈನೈಡ್’ ಸೇರಿಸಿದರೆ ತಿನ್ನಲು ಸಾಧ್ಯವೇ ? ನನ್ನ ಹೇಳಿಕೆಗಾಗಿ ನನ್ನ ನಾಲಿಗೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗುವುದು. ನನ್ನ ನಾಲಿಗೆ ಕೋಟಿ ರೂಪಾಯಿಯಾದರೆ ನನ್ನ ಗಂಟಲು ಎಷ್ಟು ಕೋಟಿ ರೂಪಾಯಿಯದ್ದಾಗಿದೆ ? ಎಂದು ಹೇಳಿದರು.

ಪ್ರೊ. ಚಂದ್ರಶೇಖರ್ ಗೆ ಸಮಸ್ಯೆಯಿದ್ದರೆ, ಅವರು ಮತಾಂತರಗೊಳ್ಳಲಿ ! – ಭಾಜಪ

ಭಾಜಪ ವಕ್ತಾರ ನೀರಜ್ ಕುಮಾರ್ ಇವರು ಪ್ರೊ. ಚಂದ್ರಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಪ್ರೊ. ಚಂದ್ರಶೇಖರ್ ಅವರು ಶ್ರೀರಾಮಚರಿತಮಾನಸದ ಬಗ್ಗೆ ನಿರಂತರವಾಗಿ ವಿಷಕಾರುತ್ತಿದ್ದಾರೆ. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕೇಳಿಸುತ್ತಿಲ್ಲವೇ ? ನಿತೀಶ್ ಕುಮಾರ್ ನಿರಂತರವಾಗಿ ಸನಾತನ ಧರ್ಮವನ್ನು ಅಪಮಾನ ಮಾಡುತ್ತಿದ್ದಾರೆ. ಅವರ ಸಚಿವರಿಗೆ ಸನಾತನ ಧರ್ಮದ ವಿಷಯದಲ್ಲಿ ಸಮಸ್ಯೆಯಿದ್ದರೆ ಅವರು ಮತಾಂತರಗೊಳ್ಳಬೇಕು ಎಂದು ಹೇಳಿದರು.

ಜನತಾ ದಳ (ಸಂಯುಕ್ತ) ಪಕ್ಷದ ಪ್ರೊ. ಚಂದ್ರಶೇಖರ ಇವರ ಹೇಳಿಕೆಯಿಂದ ದೂರ !

ಆಡಳಿತಾರೂಢ ಜನತಾದಳ(ಸಂಯುಕ್ತ) ತನ್ನ ಸರಕಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾ ದಳದ ಶಾಸಕ ಪ್ರೊ. ಚಂದ್ರಶೇಖರ ಇವರ ಶ್ರೀರಾಮಚರಿತಮಾನಸ ವಿಷಯದ ಹೇಳಿಕೆಯಿಂದ ದೂರ ಸರಿದಿದ್ದಾರೆ. ಪಕ್ಷದ ವಕ್ತಾರ ಅಭಿಷೇಕ ಝಾ ಮಾತನಾಡಿ, ಯಾರಿಗೆ ಶ್ರೀರಾಮಚರಿತಮಾನಸದಲ್ಲಿ ಪೊಟ್ಯಾಸಿಯಮ್ ಸೈನೈಡ್ ಕಾಣುತ್ತದೆ ಅವರು ತಮ್ಮ ವಿಚಾರವನ್ನು ತಮ್ಮ ವರೆಗೆ ಇಟ್ಟುಕೊಳ್ಳಬೇಕು ಮತ್ತು ಅದನ್ನು ಪಕ್ಷ ಅಥವಾ ‘ಇಂಡಿಯಾ’ ಒಕ್ಕೂಟಕ್ಕೆ ಹೇರಲು ಪ್ರಯತ್ನಿಸಬಾರದು ಎಂದು ಹೇಳಿದರು. ನಾವು ಎಲ್ಲಾ ಧರ್ಮಗಳನ್ನು ಮತ್ತು ಧಾರ್ಮಿಕ ಗ್ರಂಥಗಳನ್ನು ಗೌರವಿಸುತ್ತೇವೆ. ಕೆಲವರು ಮಾಧ್ಯಮಗಳಲ್ಲಿ ಮಿಂಚಲು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿ ಬೇರೆ ಧರ್ಮದವರ ಧರ್ಮಗ್ರಂಥಗಳನ್ನು ಅಪಮಾನಿಸುವ ಧೈರ್ಯವನ್ನು ಪ್ರೊ. ಚಂದ್ರಶೇಖರ್ ಮಾಡುವುದಿಲ್ಲ; ಏಕೆಂದರೆ ಇದರ ಪರಿಣಾಮ ಏನಾಗಬಹುದು ಎಂದು ಅವರಿಗೆ ತಿಳಿದಿದೆ !