ತಪ್ಪಿತಸ್ಥ ನಾಯಕರನ್ನು ಚುನಾವಣೆಗೆ ಸ್ಪರ್ಧಿಸಲು ಶಾಶ್ವತವಾಗಿ ನಿಷೇಧಿಸಿ ! – ನ್ಯಾಯಮಿತ್ರ ವಿಜಯ ಹಂಸರಿಯ

ನ್ಯಾಯಮಿತ್ರ ವಿಜಯ ಹಂಸರಿಯ ಇವರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಶಿಫಾರಸ್ಸು

ವಿಜಯ ಹಂಸರಿಯಾ

ನವದೆಹಲಿ – ತಪ್ಪಿತಸ್ಥ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಶ್ವತವಾಗಿ ನಿಷೇಧ ಹೇರುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ನ್ಯಾಯಮಿತ್ರ (ಆಮೀಕಸ್ ಕ್ಯೂರಿ) ವಿಜಯ ಹಂಸರಿಯ ಇವರು ತಮ್ಮ ೧೯ ನೆಯ ವರದಿ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದರು. ಈ ವರದಿಯಲ್ಲಿ ಅವರು ‘ತಪ್ಪಿತಸ್ಥ ನಾಯಕರಿಗೆ ಚುನಾವಣೆಯ ಸ್ಪರ್ಧೆಯ ಕುರಿತು ೬ ವರ್ಷದ ನಿಷೇಧದ ಬದಲು ಶಾಶ್ವತವಾಗಿ ನಿಷೇಧ ಹೇರಬೇಕು ಎಂದೂ ಕೂಡ ಶಿಫಾರಸು ಮಾಡಿದ್ದಾರೆ. ಹಂಸರಿಯಾ ಇವರು ತಮ್ಮ ವರದಿಯಲ್ಲಿ, ‘ಕೇಂದ್ರ ದಕ್ಷತಾ ಆಯೋಗ ಕಾನೂನು ೨೦೦೩’ ಮತ್ತು ‘ಲೋಕಪಾಲ ಮತ್ತು ಲೋಕಾಯುಕ್ತ ಕಾನೂನು ೨೦೧೩’ ಈ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರಾಗಿ ಕಂಡು ಬಂದರೆ ಸಂಬಂಧಿತ ನಾಯಕರಿಗೆ ಕೇವಲ ಆರು ವರ್ಷಗಳ ಕಾಲ ಅನರ್ಹರು ಎಂದು ನಿಶ್ಚಯಿಸಲಾಗುತ್ತದೆ. ಈ ಶಿಕ್ಷೆ ಅತಿಹೆಚ್ಚು ಇದೆ. ಇದರಲ್ಲಿ ಬದಲಾವಣೆ ಮಾಡಿ ಅವರನ್ನು ಅನರ್ಹರೆಂದು ಶಾಶ್ವತವಾಗಿ ನಿಷೇಧಿಸಬೇಕು.
ಈ ಪ್ರಕರಣದಲ್ಲಿ ಸೆಪ್ಟೆಂಬರ್ ೧೫ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದು, ವಿಜಯ ಹಂಸರಿಯ ಇವರ ಶಿಫಾರಸಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು.

ದೇಶಾದ್ಯಂತ ಶಾಸಕರು ಮತ್ತು ಸಂಸದರ ಮೇಲಿನ ಮೊಕ್ಕದ್ದಮೆಯ ಸಂಖ್ಯೆಯಲ್ಲಿ ಹೆಚ್ಚಳ !

ದೇಶಾದ್ಯಂತದ ಶಾಸಕರು ಮತ್ತು ಸಂಸದರ ಬಾಕಿ ಇರುವ ಮೊಕದ್ದಮೆಯ ಸಂಖ್ಯೆ ಹೆಚ್ಚಾಗಿದೆ. ನವಂಬರ್ ೨೦೨೨ ವರೆಗೆ ದೇಶದಲ್ಲಿನ ಶಾಸಕರು ಮತ್ತು ಸಂಸದರ ವಿರುದ್ಧ ಬಾಕಿ ಇರುವ ಮೊಕದ್ದಮೆಯ ಸಂಖ್ಯೆ ೫ ಸಾವಿರದ ೧೭೫ ಇದೆ ಈ 2018 ರಲ್ಲಿ ಈ ಸಂಖ್ಯೆ ೪ ಸಾವಿರದ ೧೨೨ ರಷ್ಟು ಇತ್ತು.

ಸಂಪಾದಕೀಯ ನಿಲುವು

ಹೀಗೆ ಶಿಫಾರಸ್ಸು ಏಕೆ ಮಾಡಬೇಕಾಗುತ್ತದೆ ? ನಿಜವೆಂದರೆ ಸರಕಾರವೇ ಈ ರೀತಿ ನಿಷೇಧ ಹೇರಬೇಕು !

ಅಪರಾಧಿ ಜನಪ್ರತಿನಿಧಿಗಳು ಜನರಿಗೆ ಎಂದಾದರು ಕಾನೂನು ರೀತಿಯ ಆಡಳಿತ ನೀಡುವರೆ ? ಇಂತಹವರಿಗೆ ಚುನಾವಣೆ ಸ್ಪರ್ಧೆಯ ಅವಕಾಶ ನೀಡುವುದು ಎಂದರೆ ಸಮಾಜದಲ್ಲಿ ಅರಾಜಕತೆ ಪಸರಿಸಲು ಅನುಮತಿ ನೀಡುವ ಹಾಗೆ ? ಇದು ಪ್ರಜಾಪ್ರಭುತ್ವದ ವೈಫಲ್ಯ !