ಚಂದ್ರ ಮತ್ತು ಸೂರ್ಯನ ಅಭಿಯಾನದ ಬಳಿಕ ಈಗ ಭಾರತ ಸಮುದ್ರಕ್ಕೆ ‘ಸಮುದ್ರ ನೌಕೆ’ ಕಳುಹಿಸಲಿದೆ !

ನವ ದೆಹಲಿ – ಚಂದ್ರ ಮತ್ತು ಸೂರ್ಯ ಅಭಿಯಾನವನ್ನು ಕೈಕೊಂಡ ಬಳಿಕ ಈಗ ಭಾರತ ಸಮುದ್ರ ಅಭಿಯಾನವನ್ನು ಕೈಕೊಳ್ಳಲಿದೆ. ಭೂ ವಿಜ್ಞಾನ ಸಚಿವಾಲಯದ ಸಚಿವರಾದ ಕಿರೇನ್ ರಿಜಿಜು ಅವರು ಸೆಪ್ಟೆಂಬರ್ 11 ರಂದು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ. ಇದಕ್ಕಾಗಿ ಚೆನ್ನೈನ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ’ಯಲ್ಲಿ ‘ಸಮುದ್ರ ನೌಕೆ’ಯನ್ನು ತಯಾರಿಸಲಾಗುತ್ತಿದೆ. ಈ ಸಮುದ್ರನೌಕೆಯ ಹೆಸರು ‘ಮತ್ಸ್ಯ 6000’.ಎಂದು ಇಡಲಾಗಿದೆ. ಈ ನೌಕೆಯ ವ್ಯಾಸವು 2.1 ಮೀಟರ ಇದ್ದು, ಇದು 12 ಗಂಟೆಗಳಿಗಾಗಿ 3 ವ್ಯಕ್ತಿಗಳನ್ನು ಸಮುದ್ರದ 6 ಸಾವಿರ ಮೀಟರ ಆಳದವರೆಗೆ ಸಾಗಿಸಬಲ್ಲದು. ಇದರಿಂದ ಅಲ್ಲಿರುವ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯನ್ನು ಅಧ್ಯಯನ ಮಾಡಲು, ಸಾಧ್ಯವಾಗುತ್ತದೆ. ಈ ಅಭಿಯಾನ 2026 ರ ವರೆಗೆ ಜಾರಿಗೊಳ್ಳಬಹುದು. ಇದಕ್ಕಾಗಿ ಸುಮಾರು 4 ಸಾವಿರದ 100 ಕೋಟಿ ವೆಚ್ಚವಾಗಲಿದೆ. ಸಮುದ್ರನೌಕೆಯ ಯಶಸ್ಸಿನ ಬಳಿಕ ಭಾರತವು ಅಮೇರಿಕಾ, ರಷ್ಯಾ, ಫ್ರಾನ್ಸ, ಜಪಾನ ಮತ್ತು ಚೀನಾದಂತಹ ದೇಶಗಳ ಪಟ್ಟಿಗೆ ಸೇರಲಿದೆ. ಈ ದೇಶಗಳು ಇಂತಹ ಅಭಿಯಾನಕ್ಕಾಗಿ ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿವೆ.

1. ರಿಜಿಜು ಇವರು, ಈ ಯೋಜನೆಯಿಂದ ಸಮುದ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಸಮುದ್ರದ ಆಳದಲ್ಲಿ ಏನು ಅಡಗಿದೆ ? ಎಂದು ಶೋಧಿಸಲಾಗುವುದು. ಇದರಿಂದ ಹಲವಾರು ಮಂದಿಗೆ ಉದ್ಯೋಗ ದೊರೆಯಲಿದೆ.

2. ಸಮುದ್ರದ ನೌಕೆಯ ಉದ್ದೇಶ ಸಮುದ್ರದ ಆಳವನ್ನು ಶೋಧಿಸಲು ಮತ್ತು ಅಪರೂಪದ ಖನಿಜಗಳನ್ನು ಹೊರತೆಗೆಯಲು ಜಲಾಂತರ್ಗಾಮಿ ಮೂಲಕ ವ್ಯಕ್ತಿಯನ್ನು ಕಳುಹಿಸುವುದಾಗಿದೆ. ಸಾಮಾನ್ಯವಾಗಿ ಜಲಾಂತರ್ಗಾಮಿ ನೌಕೆ 300 ರಿಂದ 400 ಮೀಟರ್ ವರೆಗೆ ಮಾತ್ರ ಹೋಗುತ್ತದೆ. ಅನಿಲ, ಕೋಬಾಲ್ಟ್ ಕ್ರಸ್ಟ್ನಂತಹ ಸಂಪನ್ಮೂಲಗಳನ್ನು ಶೋಧಿಸಲು ಕಳುಹಿಸಲಾಗುತ್ತಿದೆ. ಈ ಎಲ್ಲಾ ವಿಷಯಗಳು ಸಮುದ್ರದ 1 ಸಾವಿರದಿಂದ 5 ಸಾವಿರದ 500 ಮೀಟರ್ ಆಳದಲ್ಲಿ ಸಿಗುತ್ತವೆ.