ಸಮಾನತೆಯ ಹಕ್ಕನ್ನು ನೀಡದ ಧರ್ಮವು ರೋಗದಂತೆ ! – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ

ಉದಯನಿಧಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯಿಂದ ಪರೋಕ್ಷವಾಗಿ ಹಿಂದೂ ಧರ್ಮದ ಮೇಲೆ ಟೀಕೆ !

ಬೆಂಗಳೂರು – ನನ್ನ ಅಭಿಪ್ರಾಯದಲ್ಲಿ ಯಾವ ಧರ್ಮವು ನಿಮಗೆ ಸಮಾನ ಹಕ್ಕುಗಳನ್ನು ನೀಡುವುದಿಲ್ಲ, ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳುವುದಿಲ್ಲ, ಆ ಧರ್ಮವು ಒಂದು ಕಾಯಿಲೆಯಂತೆ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡುತ್ತಿದ್ದರು.

(ಸೌಜನ್ಯ – NewsFirst Kannada)

ಸಂಪಾದಕೀಯ ನಿಲುವು

ಉದಯನಿಧಿ ಸ್ಟಾಲಿನ್ ಇವರು ಹಿಂದೂ ಧರ್ಮದಲ್ಲಿರುವ ವರ್ಣವ್ಯವಸ್ಥೆಯ ಕಾರಣದಿಂದ ಸನಾತನ ಧರ್ಮವನ್ನು ಕೊನೆಗಾಣಿಸುವ ಕುರಿತು ನೀಡಿರುವ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅವರ ಪ್ರತಿಕ್ರಿಯೆ ಹಿಂದೂ ಧರ್ಮಕ್ಕೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ. ಇಸ್ಲಾಂನಲ್ಲಿ ಮಹಿಳೆಯರನ್ನು ಸಮಾನತೆಯಿಂದ ನಡೆಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿರುವಾಗ ಖರ್ಗೆಯವರು ಇಸ್ಲಾಂ ಧರ್ಮದ ಹೆಸರಿನಲ್ಲಿ ಹಾಗೆ ಹೇಳುವ ಧೈರ್ಯ ಮಾಡಲಾರರು. ಹಾಗೆ ಮಾಡಿದರೆ ಏನಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ !

ಇಸ್ಲಾಂನಲ್ಲಿ ಹಲವು ಜಾತಿಗಳಿವೆ. ಶಿಯಾ ಮತ್ತು ಸುನ್ನಿ ಇವರ ವಿವಾದಗಳು ಬೀದಿ, ಪಟ್ಟಣ, ನಗರ, ರಾಜ್ಯ ಮತ್ತು ದೇಶಗಳಲ್ಲಿ ನಡೆಯುತ್ತಿರುತ್ತವೆ. ಅಹ್ಮದಿಯಾ ಮುಸ್ಲಿಮರನ್ನು ಮುಸ್ಲಿಂ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಅಸಮಾನತೆ ಇರುವಾಗ ಒಬ್ಬನೇ ಒಬ್ಬ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು, ನಾಸ್ತಿಕರು ಬಾಯಿ ತೆರೆಯುವುದಿಲ್ಲ ಅಥವಾ ಅದನ್ನು ಕೊನೆಗೊಳಿಸುವ ಭಾಷೆ ಆಡುವುದಿಲ್ಲ ಎಂಬುದನ್ನು ಗಮನಿಸಿರಿ !