ಉತ್ತರಪ್ರದೇಶ ಸರಕಾರ ಮಥೂರಾದಲ್ಲಿ ಇದೇ ಮೊದಲ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಭವ್ಯ ಶೋಭಾಯಾತ್ರೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶ ಸರಕಾರದಿಂದ ಮಥೂರಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇದೇ ಮೊದಲ ಬಾರಿ ಭವ್ಯ ಶೋಭಾಯತ್ರೆ ನಡೆಸಲಾಗುವುದು. ಸಪ್ಟೆಂಬರ್ ೭ ರಂದು ಜನ್ಮಾಷ್ಟಮಿ ಇದೆ. ಆ ದಿನದಂದು ೩ ಕಿಲೋಮೀಟರ್ ಉದ್ದದ ಶೋಭಾಯತ್ರೆ ಇರುವುದು. ಇದರಲ್ಲಿ ೫೦ ಲಕ್ಷ ಭಕ್ತರು ಸಹಭಾಗಿ ಆಗುವ ಸಾಧ್ಯತೆ ಇದೆ. ಬೆಳಿಗ್ಗೆ ೮ ಗಂಟೆಗೆ ಶ್ರೀ ಕೃಷ್ಣ ಜನ್ಮಾಸ್ತಾನಕ್ಕೆ ಪ್ರದಕ್ಷಿಣೆ ಆರಂಭ ಆಗುವುದು. ಶ್ರೀ ಕೃಷ್ಣ ಜನ್ಮ ಭೂಮಿ ಸೇವಾ ಟ್ರಸ್ಟಿನ ಗೋಪೇಶ್ವರ ಚತುರ್ವೇದಿ ಇವರು, ಶೋಭಾಯಾತ್ರೆಗಾಗಿ ಜಗತ್ತಿನಾದ್ಯಂತದಿಂದ ಹೂವುಗಳನ್ನು ತರಿಸಲಾಗಿದೆ. ಮಥೂರಾದ ೧೨ ಮಾರ್ಗಗಳು, ೧೮ ವೃತ್ತಗಳು ಮತ್ತು ದಡಗಳನ್ನು ಅಲಂಕರಿಸಲಾಗಿದೆ.