’ಪ್ರಜ್ಞಾನ್” ರೋವರ್ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ಪ್ರಯಾಣಿಸಿದೆ !

ಬೆಂಗಳೂರು – ‘ಚಂದ್ರಯಾನ-3’ರ ‘ಪ್ರಜ್ಞಾನ್’ ರೋವರ್ ಚಂದ್ರನ ಮೇಲೆ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಪ್ರಸ್ತುತ ‘ಪ್ರಜ್ಞಾನ್’ ವಿಕ್ರಮ್ ಲ್ಯಾಂಡರ್ ನಿಂದ (ಶಿವಶಕ್ತಿ ಪಾಯಿಂಟ್) ೧೦೦ ಮೀಟರ್ ದೂರದಲ್ಲಿದೆ. ಇದರ ಛಾಯಾಚಿತ್ರವನ್ನು ‘ಇಸ್ರೋ’ ಪ್ರಸಾರ ಮಾಡಿದೆ ಚಂದ್ರನ ಮೇಲೆ ಇಬ್ಬರ ಅಸ್ತಿತ್ವ ಇನ್ನೂ ೪ ದಿನಗಳಿದೆ. ಆನಂತರ ಈ ಪ್ರದೇಶದಲ್ಲಿ ಸೂರ್ಯಾಸ್ತವಾಗಿ ಕತ್ತಲೆ ಮತ್ತು ಭಯಂಕರ ಚಳಿ ಬರಲಿದೆ. ಇಲ್ಲಿಯ ತಾಪಮಾನವು ಮೈನೆಸ್ ೨೦೩ ಡಿಗ್ರಿ ಸೆಲ್ಷಿಯಸ್ ಕಡಿಮೆಯಾಗುವುದು. ಹಾಗಾಗಿ ಆ ಅವಧಿಯಲ್ಲಿ ‘ವಿಕ್ರಮ್’ ಮತ್ತು ‘ಪ್ರಜ್ಞಾನ್’ ನಿಷ್ಕ್ರಿಯವಾಗುವುದು; ಏಕೆಂದರೆ ಅವು ಸೌರ ಶಕ್ತಿಯ ಮೇಲೆ ಕಾರ್ಯ ಮಾಡುತ್ತವೆ.