ತಿರುಪತಿ (ಆಂಧ್ರಪ್ರದೇಶ) – `ಇಸ್ರೋ’ ವಿಜ್ಞಾನಿಗಳು ಸೂರ್ಯನ ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಿರುವ ‘ಆದಿತ್ಯ ಎಲ್-1’ ನ ಉಪಗ್ರಹದ ಪ್ರತಿಕೃತಿಯನ್ನು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಪಿಸಿದ್ದಾರೆ. ಇಸ್ರೋ ವಿಜ್ಞಾನಿಗಳು ಯಾವಾಗಲೂ ತಮ್ಮ ಬಾಹ್ಯಾಕಾಶ ಯಾನಗಳನ್ನು ಮತ್ತು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಮೊದಲು ಆಯಾ ಉಪಗ್ರಹಗಳ ಪ್ರತಿಕೃತಿಯನ್ನು ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಅರ್ಪಿಸುತ್ತಿರುತ್ತಾರೆ. ‘ಚಂದ್ರಯಾನ-3’ ಉಡಾವಣೆ ಸಂದರ್ಭದಲ್ಲಿಯೂ ಅವರು ಪ್ರತಿಕೃತಿಯನ್ನು ಅರ್ಪಿಸಿದ್ದರು.
(ಸೌಜನ್ಯ : TOI)
ಸಂಪಾದಕರ ನಿಲುವು* ಇಸ್ರೋ ವಿಜ್ಞಾನಿಗಳು ವಿಜ್ಞಾನಿಗಳಾಗಿದ್ದರೂ, ಅವರು ಆಸ್ತಿಕರಾಗಿದ್ದಾರೆ. “ವಿಜ್ಞಾನವಾದಿಯಾಗಿದ್ದಾನೆ ಅಂದರೆ ವ್ಯಕ್ತಿ ನಾಸ್ತಿಕನಾಗಿರಬೇಕು” ಎಂಬ ವಿಚಾರಧಾರೆಯನ್ನು ಭಾರತದಲ್ಲಿರುವ ಕಪಟಿ ನಾಸ್ತಿಕರು ಮತ್ತು ಪ್ರಗತಿ(ಅಧೋ)ಪರರು ನಿರ್ಮಾಣ ಮಾಡಿದ್ದಾರೆ. ಅದು ಹೇಗೆ ಸುಳ್ಳಾಗಿದೆ ? ಎನ್ನುವುದು ಇಸ್ರೋ ವಿಜ್ಞಾನಿಗಳ ಕಾರ್ಯವೈಖರಿಯಿಂದ ಅರಿವಾಗುತ್ತದೆ ! |