ಕಾಲೇಜಿನಲ್ಲಿ ಹರಿದ ಜೀನ್ಸ್ ಮತ್ತು ಆಕ್ಷೇಪಾರ್ಹ ಉಡುಪು ಧರಿಸುವುದಿಲ್ಲ ! – ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರತಿಜ್ಞಾ ಪತ್ರ

ಕೋಲಕಾತಾದಲ್ಲಿನ ಆಚಾರ್ಯ ಜಗದೀಶಚಂದ್ರ ಬೋಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಬರೆಸಿಕೊಂಡಿರುವ ಪ್ರತಿಜ್ಞಾ ಪತ್ರ !

ಕೋಲಕಾತಾ (ಬಂಗಾಲ) – ಕೊಲಕಾತಾದ ಆಚಾರ್ಯ ಜಗದೀಶಚಂದ್ರ ಬೋಸ್ ಕಾಲೇಜಿನ ಮೊದಲನೇ ವರ್ಷದ ಪಠ್ಯಕ್ರಮಕ್ಕಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅವರ ಪ್ರವೇಶ ಅರ್ಜಿಯ ಜೊತೆಗೆ ಒಂದು ಪ್ರತಿಜ್ಞಾಪತ್ರ ಕೂಡ ನೀಡಲಾಗಿದೆ. ಇದರಲ್ಲಿ ‘ಆಚಾರ್ಯ ಜಗದೀಶಚಂದ್ರ ಬೋಸ್ ಕಾಲೇಜಿನಲ್ಲಿ ಪ್ರವೇಶ ಪಡೆದ ನಂತರ ನಾನು ಕಾಲೇಜಿನ ಪರಿಸರದಲ್ಲಿ ಹರಿದಿರುವ ಅಥವಾ ಹಾಗೆ ಹೊಲಿದಿರುವ ಜೀನ್ಸ್ ಎಂದಿಗೂ ಧರಿಸುವದಿಲ್ಲ. ಆಕ್ಷೇಪಾರ್ಹ ಉಡುಪು ಧರಿಸುವುದಿಲ್ಲ. ಕಾಲೇಜಿನ ಪರಿಸರದಲ್ಲಿ ನಾನು ನಿಯಮದ ಪ್ರಕಾರ ಅನುಮತಿ ಇರುವ ಉಡುಪು ಧರಿಸುತ್ತೇನೆ’, ಹೀಗೆ ನಮೂದಿಸಲಾಗಿದೆ. ಈ ಪ್ರತಿಜ್ಞಾಪತ್ರದ ಮೇಲೆ ವಿದ್ಯಾರ್ಥಿಗಳ ಸಹಿ ಮಾಡಿ ಪ್ರವೇಶ ಅರ್ಜಿಯ ಜೊತೆಗೆ ಜೋಡಿಸುವುದು ಕಡ್ಡಾಯವಾಗಿದೆ.

ನಿಯಮಗಳ ಪಾಲನೆ ಮಾಡಲೇಬೇಕಾಗುವುದು ! – ಪ್ರಾಚಾರ್ಯರು

ಈ ವಿಷಯದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪೂರ್ಣಚಂದ್ರ ಮೈತಿ ಇವರು, ಕಳೆದ ವರ್ಷ ಕೂಡ ನಾವು ಈ ರೀತಿಯ ಮಾರ್ಗದರ್ಶಕ ಸೂಚನೆಯ ಸುತ್ತೋಲೆ ಹೊರಡಿಸಿದ್ದೆವು; ಆದರೂ ಕೆಲವು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹರಿದ ಜೀನ್ಸ್ ಧರಿಸಿ ಬರುವುದು ಕಾಣುತ್ತಿತ್ತು. ಆದ್ದರಿಂದಲೇ ಈ ವರ್ಷ ನಾವು ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಈ ಪ್ರತಿಜ್ಞಾಪತ್ರ ಬರೆಸಿಕೊಳ್ಳುತ್ತಿದ್ದೇವೆ. ಕಾಲೇಜಿನ ಹೊರಗೆ ವಿದ್ಯಾರ್ಥಿಗಳು ತಮಗೆ ಬೇಕಾದ ಹಾಗೆ ಉಡುಪು ಧರಿಸಲಿ. ಕಾಲೇಜಿನ ಪರಿಸರದಲ್ಲಿ ಅವರು ಶಿಸ್ತು ಮತ್ತು ನಿಯಮದ ಪಾಲನೆ ಮಾಡಲೇಬೇಕಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬೋಸ್ ಕಾಲೇಜಿನಿಂದ ಶ್ಲಾಘನೀಯ ನಿರ್ಣಯ ! ಇಂತಹ ನಿರ್ಣಯ ಪ್ರತಿಯೊಂದು ಕಾಲೇಜು ತೆಗೆದುಕೊಳ್ಳಬೇಕು ! ಇದಕ್ಕಾಗಿ ಪೋಷಕರು ಆಗ್ರಹದ ನಿಲುವು ತಾಳಬೇಕು !