ಕೋಟಿ ಕೋಟಿ ವಂದನೆಗಳು !
೧. ಮಹರ್ಷಿ ಭೃಗು ಇವರ ಮಾಹಿತಿ
ಶ್ರೀಕೃಷ್ಣನು ಭಗವದ್ಗೀತೆಯ ೧೦ ನೇ ಅಧ್ಯಾಯದಲ್ಲಿ, ‘ಮಹರ್ಷಿಗಳಲ್ಲಿ ಭೃಗು ನಾನಾಗಿದ್ದೇನೆ’, ಎಂದು ಹೇಳಿದ್ದಾನೆ. ಭೃಗು ಋಷಿಗಳು ಮತ್ತು ಅವರ ಭೃಗುಕುಲವನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಭೃಗು ಕುಲದಲ್ಲಿ ಮಹರ್ಷಿ ಚ್ಯವನ, ಮಹರ್ಷಿ ಔರ್ವ, ದೈತ್ಯಗುರು ಶುಕ್ರಾಚಾರ್ಯರು, ಪ್ರಮತಿ, ಮಹರ್ಷಿ ಜಮದಗ್ನಿ, ಭಗವಾನ ಪರಶುರಾಮ ಮುಂತಾದ ಮಹಾನ ತಪಸ್ವಿಗಳು ಆಗಿ ಹೋಗಿದ್ದಾರೆ. ಭೃಗು ಕುಲದ ಋಷಿಗಳನ್ನು ‘ಭಾರ್ಗವ’ ಎಂದು ಸಂಬೋಧಿಸಲಾಗುತ್ತದೆ. ಮೂಲ ಭಾರ್ಗವ, ಎಂದರೆ ಮಹರ್ಷಿ ಭೃಗು ಇವರು ಸ್ವಯಂಭುವ ಮನ್ವಂತರದ ಮನುವಿನ ಅಳಿಯನಾಗಿದ್ದರು. ಅವರು ಶಂಕರರ ಷಡಕ(ಪತ್ನಿಯ ಸಹೋದರಿಯ ಪತಿ) ಮತ್ತು ದಕ್ಷ ಪುತ್ರಿ ಸ್ವಾತಿಯ ಪತಿಯೂ ಆಗಿದ್ದರು.
ಋಗ್ವೇದದಲ್ಲಿ ೧೮ ಬಾರಿ ಮಹರ್ಷಿ ಭೃಗು ಇವರ ಗೌರವಪೂರ್ವಕ ಉಲ್ಲೇಖವು ಕಂಡುಬರುತ್ತದೆ. ಅವರು ‘ಸೂಕ್ತದ್ರಷ್ಟಾ’, ವೈದಿಕ ಋಷಿಗಳಾಗಿದ್ದು ಅವರ ಕೆಲವು ಸೂಕ್ತಗಳು ಋಗ್ವೇದದಲ್ಲಿವೆ. ಬ್ರಹ್ಮದೇವರ ಮಾನಸಪುತ್ರರಲ್ಲಿ ಭೃಗು ಇವರು ಒಬ್ಬರಾಗಿದ್ದಾರೆ. ‘ಭೃಗು ಮತ್ತು ಅಂಗೀರಸ ಇವರಿಬ್ಬರನ್ನು ಬ್ರಹ್ಮದೇವರು ಒಂದೇ ಸಲ ನಿರ್ಮಿಸಿದರು’, ಎಂಬ ಕಥೆ ಪುರಾಣದಲ್ಲಿದೆ.
೨. ನೀರಿನಿಂದ ವಿದ್ಯುತ್ ನಿರ್ಮಿತಿಯ ಸಂಶೋಧನೆ ಮಾಡಿದ ‘ಪ್ರಾಚೀನ ವಿಜ್ಞಾನಿ’ ಮಹರ್ಷಿ ಭೃಗು !
ಆಧುನಿಕ ಕಾಲದಲ್ಲಿ ಇಂದು ನೀರಿನಿಂದ ವಿದ್ಯುತ್ ನಿರ್ಮಿತಿಯನ್ನು ಮಾಡಲಾಗುತ್ತದೆ, ಸಾವಿರಾರು ವರ್ಷಗಳ ಹಿಂದೆಯೇ ಭೃಗು ಋಷಿಗಳು ಇದರ ಸಂಶೋಧನೆಯನ್ನು ಮಾಡಿದ್ದರು. ಆದುದರಿಂದ ಅವರನ್ನು ‘ಪ್ರಾಚೀನ ವಿಜ್ಞಾನಿ’ ಅಥವಾ ‘ಸಂಶೋಧಕ’ ಎಂದು ಹೇಳಬಹುದು. – ಸ್ವಾತಿ ಆಲೂರಕರ (ಆಧಾರ : ಮಾಸಿಕ ‘ಮನಶಕ್ತಿ’, ಆಗಸ್ಟ್ ೨೦೦೫)