`ದೇವರ ಫೋನ್ ಬಂದಾಗ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಗಬಹುದು ? ಎಂಬುದನ್ನು ಹೇಳುವೆನು !’(ಅಂತೆ) – ಫಾರೂಖ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಜಮ್ಮು-ಕಾಶ್ಮೀರ

ಮುಂಬಯಿ – ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳನ್ನು ಗೆಲ್ಲುವೆವು ? ಎಂಬುದರ ಬಗ್ಗೆ ಭಾಜಪವು ಯಾವಾಗಲೂ ಹೇಳಿಕೆ ನೀಡುತ್ತಿರುತ್ತದೆ. ಅದು ಎಷ್ಟು ಕ್ಷೇತ್ರಗಳನ್ನು ಗೆಲ್ಲುವುದು? ಎಂಬುದರ ಬಗ್ಗೆ ಅವರಿಗೆ ದೇವರಿಂದ ಮಾಹಿತಿ ದೊರೆತಿರಬಹುದು. ನಮಗೆ ಇಲ್ಲಿಯವರೆಗೂ ದೇವರ ಕರೆ ಬಂದಿಲ್ಲ. ದೇವರ ಫೋನ್ ಬಂದ ತಕ್ಷಣ ತಿಳಿಸುತ್ತೇವೆ, ಎಂಬ ಹೇಳಿಕೆಯನ್ನು `ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್’ನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಖ ಅಬ್ದುಲ್ಲಾರವರು ನೀಡಿದ್ದಾರೆ. ಪ್ರಗತಿಪರರು ಹಾಗೂ ಜಾತ್ಯಾತೀತವಾದಿ ಪಕ್ಷಗಳ ಸಂಘಟನೆಯಾದ `ಇಂಡಿಯಾ’ ಮೈತ್ರಿಕೂಟದ ಸಭೆಗಾಗಿ ಫಾರೂಖ ಅಬ್ದುಲ್ಲಾರವರು ಮುಂಬೈಗೆ ಬಂದಿದ್ದರು. ಈ ಸಮಯದಲ್ಲಿ ಭಾಜಪವು ಲೋಕಸಭಾ ಚುನಾವಣೆಯಲ್ಲಿ 300 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಬಗ್ಗೆ ಪತ್ರಕರ್ತರು ವಿಚಾರಿಸಿದಾಗ ಅಬ್ದುಲ್ಲಾರವರು ಮೇಲಿನ ಹೇಳಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಫಾರೂಖ ಅಬ್ದುಲ್ಲಾರವರು ಮಾತನಾಡುತ್ತ `ನಾವು ದೇಶವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಇದು ನಮ್ಮೆಲ್ಲರ ದೇಶವಾಗಿದೆ. ಏಕತೆ ಮತ್ತು ಅನೇಕತೆಯು ಮಹತ್ವದ್ದಾಗಿದೆ. ಅನೇಕತೆಯು ಬಲಿಷ್ಟವಾಗಿದ್ದರೆ ಏಕತೆಯು ಸದೃಢವಾಗುವುದು. ಭಾರತದ ಸಮಸ್ಯೆಯನ್ನು ದೂರಗೊಳಿಸಲು ನಮಗೆಲ್ಲರಿಗೂ ಅನೇಕತೆಯನ್ನು ಬಲಿಷ್ಟಗೊಳಿಸಬೇಕಿದೆ’ ಎಂದು ಹೇಳಿದರು. (ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಫಾರೂಖ ಅಬ್ದುಲ್ಲಾರವರು ದೇಶವನ್ನು ಉಳಿಸುವ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ದೇವರೊಂದಿಗೆ ಮಾತನಾಡಲು ಭಕ್ತರಾಗಬೇಕಾಗುತ್ತದೆ. ದೇವರ ಬಗ್ಗೆ ಹಾಸ್ಯಕರವಾಗಿ ಮಾತನಾಡುವ ಅಬ್ದುಲ್ಲಾರವರು ತಮ್ಮ ಶ್ರದ್ಧಾಸ್ಥಾನಗಳ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಧೈರ್ಯ ತೋರಿಸುವರೇ ?