ಮುಂಬಯಿ – ತೆಲಗಿ ಹಗರಣದಲ್ಲಿ ಛಗನ್ ಭುಜಬಲ್ ಅವರ ರಾಜೀನಾಮೆಯನ್ನು ನಾನು ತೆಗೆದುಕೊಳ್ಳದಿದ್ದರೆ, ಅವರನ್ನು ಬಂಧಿಸಲಾಗುತ್ತಿತ್ತು. ರಾಜೀನಾಮೆ ಪತ್ರವನ್ನು ಪಡೆದು ನಾನು ಅವರನ್ನು ಬಂಧನದಿಂದ ಕಾಪಾಡಿದ್ದೇನೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶರದ ಪವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಹಳ ಸದ್ದು ಮಾಡಿದ್ದ ತೆಲಗಿ ನಕಲಿ ಸ್ಟಾಂಪ್ ಹಗರಣದ ಪ್ರಕರಣದಲ್ಲಿ ಆಗಿನ ಗೃಹ ಸಚಿವ ಛಗನ್ ಭುಜಬಲ್ ಅವರ ಹೆಸರು ಕೇಳಿ ಬಂದಾಗ, ಶರದ ಪವಾರ ಅವರು ಭುಜಬಲ್ ಅವರನ್ನು ಸಚಿವ ಹುದ್ದೆಗೆ ರಾಜೀನಾಮೆ ನೀಡುವಂತೆ ಹೇಳಿದ್ದರು. ಶರದ ಪವಾರ ಅವರ ಆದೇಶದ ಮೇರೆಗೆ ಭುಜಬಲ್ ಇವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕೆಲವು ದಿನಗಳ ಹಿಂದೆ, ಬೀಡ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ, ಛಗನ್ ಭುಜಬಲ್ ಇವರು ಶರದ ಪವಾರ ಅವರನ್ನು ‘ನೀವು ಡಿಸೆಂಬರ್ 23, 2003 ರಂದು ಗೃಹ ಸಚಿವ ಸ್ಥಾನದ ನನ್ನ ರಾಜೀನಾಮೆಯನ್ನು ಅಂಗೀಕರಿಸಿದ್ದಿರಿ. ನನ್ನಿಂದ ಏನು ತಪ್ಪಾಗಿತ್ತು ? 1992-93 ಮತ್ತು 94 ರಲ್ಲಿ, ಖೈರನಾರ ನಿಮ್ಮ ಮೇಲೆಯೂ ಆರೋಪ ಮಾಡಿದ್ದರು; ಆದರೆ ಯಾರೂ ನಿಮ್ಮ ರಾಜೀನಾಮೆ ಕೇಳಲಿಲ್ಲ. ಹಾಗಿರುವಾಗ ನನ್ನ ರಾಜೀನಾಮೆ ಪತ್ರವನ್ನು ಏಕೆ ತೆಗೆದುಕೊಂಡರು?’ ಎಂದು ಪ್ರಶ್ನಿಸಿದ್ದರು. ಈ ಕುರಿತು ಪತ್ರಕರ್ತರು ಕೇಳಿದಾಗ ಶರದ ಪವಾರ ಮೇಲಿನ ಹೇಳಿಕೆ ನೀಡಿದ್ದಾರೆ.
#NCP founder #SharadPawar responded to Chhagan Bhujbal’s remarks and asked party workers not to get distractedhttps://t.co/Igpf8tV4FQ
— Hindustan Times (@htTweets) August 30, 2023
ಸಂಪಾದಕರ ನಿಲುವು* ಹಗರಣಗಳಲ್ಲಿ ಸಹಕಾರಿಗಳನ್ನು ರಕ್ಷಿಸುವ ನಾಯಕರು ಪಕ್ಷ ವಿಭಜನೆಯಾದಾಗ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರಿಂದ ಈ ನಾಯಕರು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಕಂಡುಬರುತ್ತದೆ. ಆದ್ದರಿಂದ ಈ ಪ್ರಕರಣಗಳನ್ನು ಸರಕಾರವು ಹೊಸದಾಗಿ ತನಿಖೆ ನಡೆಸಿ ಭ್ರಷ್ಟರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಸಾರ್ವಜನಿಕರೂ ಸರಕಾರದ ಮೇಲೆ ನ್ಯಾಯಸಮ್ಮತವಾಗಿ ಒತ್ತಡ ಹೇರಬೇಕು ! |