ಮಣಿಪುರ ವಿಧಾನಸಭೆಯ ಒಂದು ದಿನದ ಕಲಾಪ ಅನಿರ್ಧಿಷ್ಟ ಕಾಲದವರೆಗೆ ಮುಂದೂಡಿಕೆ !

ವಿರೊಧ ಪಕ್ಷಗಳಿಂದ ೫ ದಿನಗಳ ಕಾಲ ಅಧಿವೇಶನ ನಡೆಸಲು ಆಗ್ರಹ !

ಇಂಫಾಲ (ಮಣಿಪುರ) – ಮಣಿಪುರ ವಿಧಾನಸಭೆಯ ಒಂದು ದಿನದ ಅಧಿವೆಶನವನ್ನು ಆಗಸ್ಟ ೨೯ ರಂದು ಕರೆಯಲಾಯಿತು; ಆದರೆ ಕಾರ್ಯಕಲಾಪಗಳು ಆರಂಭವಾದ ಕೊಡಲೇ ಗಲಾಟೆ ಆರಂಭವಾಗಿದ್ದರಿಂದ ಅನಿರ್ದಿಷ್ಟ ಕಾಲದ ವರೆಗೆ ಸ್ಥಗಿತಗೊಳಿಸಲಾಯಿತು. ೩ ತಿಂಗಳ ನಂತರ ಈ ವಿಧಾನಸಭೆಯ ಅಧಿವೇಶನಕರೆಯಲಾಗಿತ್ತು. ಕಾಂಗ್ರೆಸ್ ಶಾಸಕರು ೫ ದಿನಗಳಕಾಲ ಅಧಿವೇಶನ ನಡೆಸಬೇಕೆಂದು ಒತ್ತಾಯಿಸಿದ್ದರು. ‘ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಚಾರದ ಬಗ್ಗೆ ಚರ್ಚಿಸಲು ಒಂದು ದಿನ ಸಾಕಾಗುವುದಿಲ್ಲ’, ಎಂದರು. ಈ ಹಿಂದೆ ರಾಜ್ಯದಲ್ಲಿನ ಕುಕಿ-ಜೋಮಿ ಸಮುದಾಯದ ೧೦ ಶಾಸಕರು ಈ ಅಧಿವೇಶನವನ್ನು ಬಹಿಷ್ಕರಿಸಿದ್ದರು. ಇದರಲ್ಲಿ ಇಬ್ಬರು ಸಚಿವರೂ ಸೇರಿದ್ದಾರೆ.