‘ವಿಭಜನೆಯ ಸಮಯದಲ್ಲಿ ನೀವು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ ?’,ಎಂದು ಮುಸಲ್ಮಾನ ವಿಧ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಶಿಕ್ಷಕನ ಬಂಧನ !

ನವ ದೆಹಲಿ_- ಇಲ್ಲಿಯ ಗಾಂಧಿನಗರದ ಸರ್ವೋದಯ ಬಾಲ ವಿದ್ಯಾಲಯದ ಶಾಲೆಯಲ್ಲಿ ಹೇಮಾ ಗುಲಾಟಿ ಎಂಬ ಶಿಕ್ಷಕನು ೪ ಮುಸಲ್ಮಾನ ವಿದ್ಯಾರ್ಥಿಗಳಿಗೆ ‘ವಿಭಜನೆಯ ಸಮುದಲ್ಲಿ ನೀವು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ ?’ ಎಂದು ಪ್ರಶ್ನೆ ಕೇಳಿದಕ್ಕೆ ಅವರನ್ನು ಬಂಧಿಸಲಾಗಿದೆ. ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿಯ ಪೊಷಕರು ಪೊಲೀಸರಿಗೆ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸಂಪಾದಕರ ನಿಲುವು

* ಇಂತಹ ಪ್ರಶ್ನೆ ಕೇಳುವುದರಲ್ಲಿ ಆಕ್ಷೇಪಾರ್ಹ ಏನಿದೆ ? ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗಿತ್ತು. ಆಗ ‘ಮುಸಲ್ಮಾನರು ಪಾಕಿಸ್ತಾನ ಮತ್ತು ಹಿಂದೂಗಳಿಗೆ ಭಾರತ’, ಹೀಗೆ ಅಧಿಕೃತವಾಗಿ ನಿರ್ಧರಿಸಲಾಗಿತ್ತು. ನಂತರ ಗಾಂಧಿ ಮತ್ತು ನೆಹರು ಅವರ ಮನವಿಯ ನಂತರ ಮುಸ್ಲೀಮರು ಭಾರತದಲ್ಲಿ ಉಳಿದುಕೊಂಡರು. ಇದು ಇತಿಹಾಸವಾಗಿದೆ. ಹೀಗೆ ಶಾಲೆಯಲ್ಲಿನ ಮುಸಲ್ಮಾನರಿಗೆ ಯಾರಾದರೂ ಪ್ರಶ್ನೆ ಕೇಳಿದರೆ ತಪ್ಪೇನು ?