ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕನ ಬಂಧನ

ಆರೋಪಿಗೆ ಸಹಾಯ ಮಾಡಲು 5 ಕೋಟಿ ಲಂಚ ಸ್ವೀಕಾರ !


ನವ ದೆಹಲಿ – ದೆಹಲಿಯ ಮದ್ಯ ನೀತಿ ಪ್ರಕರಣದ ಆರೋಪಿಗೆ ಸಹಾಯ ಮಾಡಲು ಆರೋಪಿಯಿಂದ 5 ಕೋಟಿ ರೂಪಾಯಿ ಲಂಚ ಸ್ವೀಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಜಾರಿ ನಿರ್ದೇಶನಾಲಯದ (‘ಇಡಿ’) ಸಹಾಯಕ ನಿರ್ದೇಶಕ ಮತ್ತು ಇತರ ಆರು ಮಂದಿಯನ್ನು ಬಂಧಿಸಿದೆ. ಸಹಾಯಕ ನಿರ್ದೇಶಕ ಪವನ್ ಖತ್ರಿ, ನಿತೇಶ್ ಕೊಹರ್ (ಅಪರ ವಿಭಾಗದ ಸಹಾಯಕ), ದೀಪಕ ಸಾಂಗವಾನ (ಏರ್ ಇಂಡಿಯಾ ಉದ್ಯೋಗಿ), ಅಮನದೀಪ್ ಸಿಂಗ್ ಧಲ್ಲ, ಬಿರೇಂದರ್ ಪಾಲ್ ಸಿಂಗ್, ಪ್ರವೀಣ ಕುಮಾರ ವತ್ಸ (ಚಾರ್ಟರ್ಡ್ ಅಕೌಂಟೆಂಟ್) ಮತ್ತು ವಿಕ್ರಮಾದಿತ್ಯ (‘ಕ್ಲಾರಿಡ್ಜಸ್ ಹೊಟೇಲ್ಸ್ ಎಂಡ್ ರೆಸಾರ್ಟ್ಸ್’ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಸೇರಿದ್ದಾರೆ. ಈ ಪ್ರಕರಣದಲ್ಲಿ ಇಡಿ 52 ಕೋಟಿ 24 ಲಕ್ಷ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಸಂಪಾದಕಯ ನಿಲುವು

ತನಿಖಾ ವ್ಯವಸ್ಥೆಯಲ್ಲಿನ ಇಂತಹ ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು ! ಇಂತಹವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಸಮಾಜದಲ್ಲಿ ಜನರು ಉಗಿಯುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು !