ಚಂದ್ರನ ಭೂಮಿಯ ತಾಪಮಾನ ಅಳೆದ ‘ಚಂದ್ರಯಾನ 3’

ಬೆಂಗಳೂರು – ‘ಚಂದ್ರಯಾನ 3’ ಅಭಿಯಾನದ ಅಡಿಯಲ್ಲಿ ಚಂದ್ರನ ಮೇಲೆ ಇಳಿದಿರುವ ‘ವಿಕ್ರಂ’ ಲ್ಯಾಂಡರ್ ನಿಂದ ಹೊರ ಬಂದ ‘ಪ್ರಜ್ಞಾನ್’ ರೋವರ್ ಈಗ ಛಾಯ ಚಿತ್ರಗಳು ಕಳುಹಿಸಲು ಆರಂಭವಾಗಿದೆ. ಇಲ್ಲಿಯವರೆಗೆ ಅದು ೧೦ ಛಾಯಾ ಚಿತ್ರಗಳು ಕಳುಹಿಸಿದೆ. ‘ವಿಕ್ರಂ’ ಲ್ಯಾಡರ್ ಚಂದ್ರನ ಭೂಮಿಯಲ್ಲಿನ ತಾಪಮಾನದ ನೋಂದಣಿ ಕೂಡ ಕಳುಹಿಸಿದೆ, ಎಂದು ಇಸ್ರೋದಿಂದ ಮಾಹಿತಿ ನೀಡಲಾಯಿತು. ಚಂದ್ರನ ದಕ್ಷಿಣ ದ್ರುವದ ಈ ರೀತಿಯ ಮಾಹಿತಿ ಪಡೆಯುವ ಭಾರತ ಜಗತ್ತಿನ ಮೊದಲ ದೇಶವಾಗಿದೆ.

೧. ‘ವಿಕ್ರಂ’ ಲ್ಯಾಂಡರ್ ಮೇಲೆ ಅಳವಡಿಸಲಾದ ಚಂದ್ರನ ಮೇಲಿನ ಭೂಮಿಯ ತಾಪಮಾನ ಅಳೆಯುವ ಯಂತ್ರ ‘ಚಸ್ಟಿ’ಯು ಅಳೆದಿರುವ ತಾಪಮಾನದ ಪ್ರಕಾರ ಭೂಮಿಯ ೮ ಸೆಂಟಿಮೀಟರ್ ಕೆಳಗೆ ಮೈನಸ್ ೧೦ ಮತ್ತು ಭೂಮಿಯ ೨ ಸೆಂಟಿಮೀಟರ್ ಮೇಲೆ ೫೦ ಡಿಗ್ರಿ ಸೆಲ್ಸಿಯಸ್ ತಾಪಮಾನ ತೋರಿಸುತ್ತಿದೆ. ಇದರಿಂದ ಚಂದ್ರನ ಭೂಮಿ ತಾಪಮಾನ ಸ್ಥಿರವಾಗಿ ಇಡಲು ಸಾಧ್ಯವಿಲ್ಲದಿರುವುದು ತಿಳಿದು ಬರುತ್ತದೆ.

೨. ಇಸ್ರೋದಿಂದ ಈ ತಾಪಮಾನದ ಒಂದು ರೇಖಾಚಿತ್ರ ಪ್ರಸಾರ ಮಾಡಲಾಗಿದೆ. ಇಸ್ರೋ, ಚಂದ್ರನ ಭೂಮಿಯ ತಾಪಮಾನದಲ್ಲಿ ವ್ಯತ್ಯಾಸವಿರುವುದು ಗಮನಕ್ಕೆ ಬರುತ್ತದೆ. ಚಂದ್ರನ ದಕ್ಷಿಣ ಧ್ರುವದ ಇದೇ ಮೊದಲಬಾರಿ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಅದರ ವಿಸ್ತೃತ ಅಧ್ಯಯನ ನಡೆಸಲಾಗುವುದು ಎಂದು ಹೇಳಿದೆ.