‘ಸನಾತನ ಧರ್ಮವು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆಯಂತೆ !’ – ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು

ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು ಅವರ ವಿಚಿತ್ರ ಶೋಧ !

ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು

ಚೆನ್ನೈ – ಸನಾತನ ಧರ್ಮವು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆ ಎಂದು ತಮಿಳುನಾಡು ವಿಧಾನಸಭಾ ಸ್ಪೀಕರ್ ಅಪ್ಪಾವು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಧಾನಸಭಾಧ್ಯಕ್ಷರು, 1795 ರಲ್ಲಿ ಬ್ರಿಟಿಷರು ಎಲ್ಲರಿಗೂ ಭೂಮಿಯ ಮಾಲೀಕತ್ವದ ಹಕ್ಕನ್ನು ನೀಡಿದ್ದರು. ಆ ಕಾಲದಲ್ಲಿ ಶೂದ್ರರಿಗೆ ಭೂಮಿ ಹೊಂದುವ ಹಕ್ಕು ಇರಲಿಲ್ಲ. ಲಾರ್ಡ್ ಮೆಕಾಲೆ ಅವರು 1835 ರಲ್ಲಿ ಎಲ್ಲರಿಗೂ ಶಿಕ್ಷಣವನ್ನು ಒದಗಿಸಿದರು ಎಂದು ಅವರು ಹೇಳಿದರು. (ಬ್ರಿಟಿಷರು 1795 ರಲ್ಲಿ ಶೂದ್ರರು ಸೇರಿದಂತೆ ಎಲ್ಲರಿಗೂ ಮಾಲೀಕತ್ವದ ಹಕ್ಕುಗಳನ್ನು ನೀಡಿದ್ದರು ಎಂದಾದರೆ, 1947 ರವರೆಗೆ ಅಂದರೆ 150 ವರ್ಷಗಳವರೆಗೆ ಶೂದ್ರರು ಏಕೆ ಭೂಮಿಯನ್ನು ಹೊಂದಿರಲಿಲ್ಲ ? 1835 ರಲ್ಲಿ ಲಾರ್ಡ್ ಮೆಕಾಲೆ ಎಲ್ಲರಿಗೂ ಶಿಕ್ಷಣ ಒದಗಿಸಿದರು ಎಂಬ ಅವರ ಹೇಳಿಕೆಯು ಸುಳ್ಳು; ಏಕೆಂದರೆ ಮೆಕಾಲೆ ಭಾರತೀಯರನ್ನು ಬ್ರಿಟಿಷರ ಗುಲಾಮರನ್ನಾಗಿ ಮಾಡಲು ಬಯಸಿದ್ದರು ಮತ್ತು ಅದಕ್ಕಾಗಿ ಅವರು ಭಾರತದಲ್ಲಿ ಚಾಲ್ತಿಯಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ನಿಲ್ಲಿಸಿ ಭಾರತೀಯರನ್ನು ಗುಮಾಸ್ತರಾಗುವ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಬಯಸಿದ್ದರು. ಇದರಿಂದಾಗಿರುವ ಹಾನಿಯನ್ನು ಭಾರತ ಇನ್ನೂ ಅನುಭವಿಸುತ್ತಿದೆ ! – ಸಂಪಾದಕರು)

ಅಪ್ಪಾವು ಮಾತನ್ನು ಮುಂದುವರಿಸಿ, ‘ಜಾತಿಯನ್ನು ಉಪಯೋಗಿಸಿ ನಮ್ಮಲ್ಲಿ ತಾರತಮ್ಯ ಮಾಡಲಾಗಿದೆ. ನಮ್ಮನ್ನು ದೂರವಿಡಲಾಗಿದೆ ಮತ್ತು ಯಾವುದೇ ಹಕ್ಕುಗಳನ್ನು ನೀಡಲಾಗಿಲ್ಲ. ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳಲಾಯಿತು. ಪೆರಿಯಾರ್, ಕರುಣಾನಿಧಿ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಸರಕಾರ ರಾಜ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ವಿಧಾನಸಭಾ ಅಧ್ಯಕ್ಷರು ಹೇಳಿದ್ದಾರೆ.