ಬೆಂಗಳೂರು : ಹಿಂದಿನ ಸರಕಾರಗಳಿಗೆ ಇಸ್ರೋದ ಮೇಲೆ ನಂಬಿಕೆ ಇರಲಿಲ್ಲ ಎಂದು ‘ಇಸ್ರೋ’ದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ದಾವೆ ಮಾಡಿದ್ದಾರೆ. ನಂಬಿ ನಾರಾಯಣನ್ ಅವರ ಸಂದರ್ಶನದ ವಿಡಿಯೋ ಪ್ರಸಾರವಾಗಿದೆ. ಅಲ್ಲದೆ, ಹಿಂದಿನ ಸರಕಾರಗಳ ವಾರ್ಷಿಕ ಆಯ-ವ್ಯಯದಲ್ಲಿ ‘ಇಸ್ರೋ’ಗೆ ತುಂಬಾ ಸೀಮಿತವಾಗಿ ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದ್ದವು ಎಂದು ನಂಬಿ ನಾರಾಯಣನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ರಾಜಕೀಯ ಪಕ್ಷಗಳು ಚಂದ್ರಯಾನ-3 ಮಿಷನ್ ನ ಯಶಸ್ಸಿನ ಶ್ರೇಯಸ್ಸನ್ನು ಪಡೆಯಲು ಪ್ರಯತ್ನಿಸುತ್ತಿವೆ ಮತ್ತು ಅದರ ಬಗ್ಗೆ ನೀವು ಏನು ಹೇಳುತ್ತೀರಿ ?’ ಎಂದು ನಂಬಿ ನಾರಾಯಣನ್ ಅವರನ್ನು ಪ್ರಶ್ನಿಸಲಾಗಿತ್ತು. ಆ ಬಗ್ಗೆ ಮಾತನಾಡುವಾಗ ಅವರು ಈ ದಾವೆ ಮಾಡಿದ್ದಾರೆ.
Former Isro scientist #NambiNarayanan said that the previous Congress government did not have faith in India’s space agency for a long timehttps://t.co/DnJgIUfmEK
— IndiaToday (@IndiaToday) August 27, 2023
ರಾಷ್ಟ್ರೀಯ ಯೋಜನೆಯ ಶ್ರೇಯಸ್ಸು ಪ್ರಧಾನಿಯವರಿಗೆ ಸಲ್ಲದಿದ್ದರೆ ಯಾರಿಗೆ ?
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚಂದ್ರಯಾನ-3 ಮಿಷನ್ನ ಯಶಸ್ಸಿನ ಶ್ರೇಯಸ್ಸು ಸಿಕ್ಕಿರುವುದನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿರುವ ವಿರೋಧಿಗಳ ಪ್ರಯತ್ನದ ಬಗ್ಗೆ ಮಾತನಾಡಿದ ನಂಬಿ ನಾರಾಯಣನ್ ಇವರು, ‘ಆಂದೋಲನದ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಇಸ್ರೋ ಅಧ್ಯಕ್ಷ ಎಸ್. ಸೋಮನಾಥರಿಗೆ ಮತ್ತು ಪ್ರಧಾನಮಂತ್ರಿಯವರಿಗೂ ಸಲ್ಲುತ್ತದೆ. ಕೆಲವರಿಗೆ ಪ್ರಧಾನಮಂತ್ರಿಯವರು ಇಷ್ಟವಾಗದಿದ್ದರೂ, ಅದರರ್ಥ ಅದರ ಶ್ರೇಯಸ್ಸು ಅವರಿಗೆ ಸಲ್ಲುವುದಿಲ್ಲ ಎಂದಾಗುವುದಿಲ್ಲ. ರಾಷ್ಟ್ರೀಯ ಯೋಜನೆಯ ಶ್ರೇಯಸ್ಸನ್ನು ಪ್ರಧಾನಿಯವರಿಗೆ ಕೊಡದಿದ್ದರೆ ಬೇರೆ ಯಾರಿಗೆ ಕೊಡುತ್ತಾರೆ ? ಎಂದು ಪ್ರಶ್ನಿಸಿದರು.