ಗೋರಕ್ಷಕ ಮೋನು ಮಾನೇಸರರವರು ಪ್ರಚೋದನಕಾರಿ ಹೇಳಿಕೆಯನ್ನೇ ನೀಡಿಲ್ಲ !- ಪೊಲೀಸ ಆಯುಕ್ತೆ ಮಮತಾ ಸಿಂಹ

ನೂಹ(ಹರಿಯಾಣ)ನಲ್ಲಿನ ಹಿಂಸಾಚಾರದ ಪ್ರಕರಣ.

ಹರಿಯಾಣದ ಹೆಚ್ಚುವರಿ ಪೊಲೀಸ ಆಯುಕ್ತೆ ಮಮತಾ ಸಿಂಹರವರು ನೀಡಿದ ಮಾಹಿತಿ !

ಎಡದಿಂದ  ಹಿಂದುತ್ವನಿಷ್ಠ ಕಾರ್ಯಕರ್ತ ಮೋನು ಮಾನೇಸರ, ಪೊಲೀಸ ಆಯುಕ್ತೆ ಮಮತಾ ಸಿಂಹ ಮತ್ತು ಬಿಟ್ಟು ಬಜರಂಗಿ

ನೂಹ (ಹರಿಯಾಣ) – ಇಲ್ಲಿ ಜುಲೈ 31 ರಂದು ನಡೆದ ಹಿಂಸಾಚಾರಕ್ಕೆ ಹಿಂದುತ್ವನಿಷ್ಠ ಕಾರ್ಯಕರ್ತ ಮೋನು ಮಾನೇಸರರನ್ನು ಹೊಣೆಯಾಗಿಸಲಾಗುತ್ತಿದೆ. `ಅವರು “ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ವಿಷಯವನ್ನು ಪ್ರಸಾರ ಮಾಡಿದ್ದರಿಂದ ಹಿಂಸೆ ಭುಗಿಲೆದ್ದಿತು” ಎಂದು ಅವರನ್ನು ಆರೋಪಿಸಲಾಗುತ್ತಿದೆ. ಈ ಸಮಯದಲ್ಲಿಯೇ ನೂಹನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಮಮತಾ ಸಿಂಹರವರು ನೂಹನಲ್ಲಿ ನಡೆದ ಹಿಂಸಾಚಾರದಲ್ಲಿ ಗೋರಕ್ಷಕರಾದ ಮೋನು ಮಾನೇಸರ ಹಾಗೂ ಬಿಟ್ಟು ಬಜರಂಗಿಯವರ ಯಾವುದೇ ಪಾತ್ರವಿರಲಿಲ್ಲ ಎಂದು ಹೇಳಿದ್ದಾರೆ. ಬಿಟ್ಟು ಬಜರಂಗಿಯ ಬಂಧನವು ನೂಹನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಆಗಿಲ್ಲ. ಮಮತಾ ಸಿಂಗರವರು ಹಿಂಸಾಚಾರದ ಸಂದರ್ಭದಲ್ಲಿ ನಲ್ಹಡ ದೇವಸ್ಥಾನದಲ್ಲಿ ಸಿಲುಕಿದ್ದ ಹಿಂದೂಗಳನ್ನು ಮತಾಂಧ ಮುಸಲ್ಮಾನರ ಗುಂಪಿನಿಂದ ರಕ್ಷಿಸಿದ್ದರು.

ಮಮತಾ ಸಿಂಹರವರು ಮುಂದುವರಿದು, ಜುಲೈ 31 ರ ಮೊದಲು ಮೋನು ಮಾನೇಸರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವ ಧ್ವನಿಮುದ್ರಣವನ್ನು ಕೇಳಿದೆ, ಅದರಲ್ಲಿ ಅವನು ಕೇವಲ ‘ನಾನು ಯಾತ್ರೆಯಲ್ಲಿ ಭಾಗವಹಿಸಲು ಬರುತ್ತಿದ್ದೇನೆ, ನೀವೂ ಇದರಲ್ಲಿ ಭಾಗವಹಿಸಿ’ ಎಂದು ಹೇಳಿದ್ದಾನೆ. ಇದು ಪ್ರಚೋದನಕಾರಿ ಹೇಳಿಕೆಯಾಗಲು ಸಾಧ್ಯವೇ ಇಲ್ಲ, ಎಂದು ಹೇಳಿದರು.

ಬಿಟ್ಟು ಬಜರಂಗಿಯವರ ಬಂಧನದ ಕುರಿತು ಸಿಂಹರವರು ಮಾತನಾಡುತ್ತಾ, ಆತನನ್ನು ಹಿಂಸಾಚಾರಕ್ಕಾಗಿ ಬಂಧಿಸಿಲ್ಲ. ಇದು ಬೇರೆಯೇ ಸಂಗತಿಯಾಗಿದೆ. ಫರಿದಾಬಾದ್ ಪೊಲೀಸರು ಪ್ರಚೋದನಕಾರಿ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಮತ್ತೊಂದೆಡೆ, ನೂಹ್ ಪೊಲೀಸರು ಅವನನ್ನು ಬಂಧಿಸಲು ಕಾರಣವೇನೆಂದರೆ ಅವನು ಹೆಚ್ಚುವರಿ ಪೊಲೀಸ್ ಆಯುಕ್ತರೊಂದಿಗೆ ಜಗಳ ಮಾಡಿದ್ದನು, ಎಂದು ಹೇಳಿದ್ದಾರೆ.