ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ಕಾನೂನು !
ನವ ದೆಹಲಿ – ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ನಿಯಮಗಳನ್ನು ಕಠಿಣಗೊಳಿಸಿದ್ದು ಯಾವುದೇ ಡಾಕ್ಟರ್ ಔಷಧ ತಯಾರಿಕೆ ಕಂಪನಿಯ ಜೊತೆಗೆ ಅಥವಾ ಆ ಕಂಪನಿಯಿಂದ ಪ್ರಾಯೋಜಿಸಿರುವ ಸಭೆಗಳಿಗೆ, ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಡಾಕ್ಟರರು ಏನಾದರು ಇವುಗಳಲ್ಲಿ ಸಹಭಾಗಿ ಆದರೆ, ಅವರ ಅನುಮತಿ (ಲೈಸೆನ್ಸ್) ೩ ತಿಂಗಳಿಗಾಗಿ ರದ್ದುಪಡಿಸಲಾಗುವುದು.
ವೈದ್ಯರು ಜನರಿಕ್ ಔಷಧ ಬರೆಯುವುದು ಕಡ್ಡಾಯ, ತಪ್ಪಿದರೆ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗ#Doctor #Generic #drug #fine #NMChttps://t.co/diLEsvKejD
— Vijayavani (@VVani4U) August 12, 2023
೧. ಆಯೋಗವು ಕಲಂ ೩೫ ರ ಪ್ರಕಾರ ಡಾಕ್ಟರ್ ಅಥವಾ ಅವರ ಕುಟುಂಬದವರು ಔಷಧ ನಿರ್ಮಾಣ ಮಾಡುವ ಕಂಪನಿಯಿಂದ ಅಥವಾ ಅವರ ಪ್ರತಿನಿಧಿಗಳಿಂದ ಗೌರವಧನ ಅಥವಾ ಕೌನ್ಸಿಲಿಂಗ್ ಶುಲ್ಕ ಪಡೆಯುವುದು ನಿಷೇಧಿಸಿದೆ. ಹಾಗೂ ಹೊಸ ನಿಯಮಗಳ ಪ್ರಕಾರ ಡಾಕ್ಟರರು ಜೆನೆರಿಕ್ ಔಷಧಿಗಳನ್ನೇ ಬರೆದುಕೊಡಲು ಕಡ್ಡಾಯಗೊಳಿಸಿದೆ.
೨. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಈ ನಿಯಮಗಳನ್ನು ವಿರೋಧಿಸಿದೆ. ಇದರ ಕುರಿತು ಕೇಂದ್ರ ಆರೋಗ್ಯ ಸಚಿವ ಮನಸುಖ ಮಂಡಾವಿಯ ಇವರು ಒಂದು ಸಬೆಯನ್ನು ಆಯೋಜಿಸಿದ್ದಾರೆ.
೩. ಈ ಹಿಂದೆ ಮೆಡಿಕಲ್ ‘ಕೌನ್ಸಿಲ್ ಆಫ್ ಇಂಡಿಯಾ’ವು ೨೦೧೦ ರಲ್ಲಿ ಡಾಕ್ಟರ್ ಮತ್ತು ಅವರ ಕುಟುಂಬದವರಿಗೆ ಔಷಧ ನಿರ್ಮಾಣ ಮಾಡುವ ಕಂಪನಿಗಳಿಂದ ಉಡುಗೊರೆ ಪಡೆಯುವುದು, ಪ್ರವಾಸಕ್ಕಾಗಿ ಸೌಲಭ್ಯ ನೀಡುವುದು ಮುಂತಾದವುಗಳನ್ನು ನಿಷೇಧಿಸಿದ್ದರು.