‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸುಳ್ಳುಗಾರರ ಸಂಘ !

  • ಸಾಹಿತಿ ಪ್ರೊ. ಕೆ.ಎಸ್. ಭಗವಾನರ ಬೌದ್ಧಿಕ ದಿವಾಳಿತನ !

  • ಈ ವರ್ಷ ‘ಮಹಿಷ ದಸರಾ ಸಮಿತಿ’ಯು ರಾಜ್ಯದಲ್ಲಿ ಮಹಿಷ ದಸರಾವನ್ನು ಆಚರಿಸಲಿದೆ !

ಮೈಸೂರು – ದೇಶದ ಪ್ರಸಿದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘವಲ್ಲ, ಕೇವಲ ಸುಳ್ಳು ಪ್ರಚಾರ ಮಾಡುವ ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿದೆ, ಎಂದು ಕೆ.ಎಸ್. ಭಗವಾನ್ ಇವರು ಇಲ್ಲಿ ‘ಮಹಿಷ ದಸರಾ ಸಮಿತಿ’ಯು ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

1. ಈ ಸಂದರ್ಭದಲ್ಲಿ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಮಹಿಷ ದಸರಾ’ವನ್ನು ಆಚರಿಸಲು 1 ತಿಂಗಳ ಮೊದಲು ಸಂವಾದ ಮತ್ತು ವಿಚಾರ ಸಂಕಿರಣ ಆಯೋಜಿಸಲಾಗುವುದು. ದಸರಾ ವಿರೋಧಿಸಲು ‘ಮಹಿಷ ದಸರಾ’ ಆಚರಿಸುತ್ತಿಲ್ಲ, ಈ ಮೂಲಕ ಮಹಿಷನ ಕುರಿತು ದೇಶದಾದ್ಯಂತ ಮಾಹಿತಿಯನ್ನು ಪ್ರಸಾರ ಮಾಡಲಿದ್ದೇವೆ. ‘ನಾವು ನೀಡಿರುವ ಮಾಹಿತಿ ತಪ್ಪು’ ಎಂದು ಸಾಬೀತಾದರೆ ಮತ್ತೆ ಮಹಿಷ ದಸರಾ’ವನ್ನು ಆಚರಿಸುವುದಿಲ್ಲ ಎಂದು ಹೇಳಿದರು.

2. ಸುದ್ಧಿಗೋಷ್ಠಿಯಲ್ಲಿ ಪ್ರೊ. ಮಹೇಶಚಂದ್ರ ಗುರು ಮಾತನಾಡಿ, ರಾಜ್ಯದಲ್ಲಿ ‘ಮಹಿಷ ದಸರಾ’ ಆಚರಣೆಗೆ ಹಿಂದುತ್ವನಿಷ್ಠರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗುಲಬುರ್ಗಾ, ಮೈಸೂರು, ಬೆಂಗಳೂರು ಸೇರಿದಂತೆ ಇತರೆ ವಿಶ್ವವಿದ್ಯಾನಿಲಯಗಳಲ್ಲಿ ‘ಮಹಿಷ ಅಧ್ಯಯನ ಪೀಠ’ ಸ್ಥಾಪಿಸುವಂತೆ ಸರಕಾರವನ್ನು ಕೋರುತ್ತೇವೆ. ರಾಜ್ಯದಲ್ಲಿ ಹಿಂದುತ್ವನಿಷ್ಠ ಇಲ್ಲದ ಸರಕಾರ ಅಸ್ತಿತ್ವಕ್ಕೆ ಬಂದಿದೆ; ಆದರೆ ಆಡಳಿತದಲ್ಲಿರುವವರು ಉಚ್ಚ ಜಾತಿಯವರಾಗಿದ್ದಾರೆ. ದಲಿತರ ಪ್ರಗತಿ ಅವರಿಂದ ಸಾಧ್ಯವಿಲ್ಲ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಂದೂ ದಲಿತರ ಪರವಾಗಿ ಧ್ವನಿ ಎತ್ತಿಲ್ಲ. ಅವರು ಅವಕಾಶವಾದಿಗಳಾಗಿದ್ದಾರೆ. ಅವರಿಗೆ ಅನುಕೂಲವಾಗುವ ರಾಜಕಾರಣವನ್ನು ಅವರು ಮಾಡುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠ ಸಂಘಟನೆಗೆ ‘ಸುಳ್ಳುಗಾರರು’ ಎಂದು ಕರೆಯುವ ಪ್ರಗತಿ(ಅಧೋಗತಿ)ಪರರ ಇತಿಹಾಸವನ್ನು ನೋಡಿದರೆ, ಅದರಲ್ಲಿ ಸುಳ್ಳನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ, ಎಂಬುದನ್ನು ಗಮನಿಸಿರಿ !

‘ಮಹಿಷ ದಸರಾ’ದಂತಹ ಹಿಂದೂ ವಿರೋಧಿ ಉತ್ಸವವನ್ನು ಆಚರಿಸುವ ಮೂಲಕ ಅತ್ಯಾಚಾರಿ ಮಹಿಷಾಸುರನನ್ನು ಹೊಗಳುವವರ ಮಾನಸಿಕತೆ ಎಂತಹದ್ದು ಎನ್ನುವುದು ಗಮನಕ್ಕೆ ಬರುತ್ತದೆ ! ಅಂತಹವರಿಗೆ ಭಾಜಪದ ರಾಜ್ಯದಲ್ಲಿ ಉತ್ಸವವನ್ನು ಆಚರಿಸುವುದನ್ನು ನಿಷೇಧಿಸಲಾಗಿತ್ತು; ಆದರೆ ಕಾಂಗ್ರೆಸ್ ಸರಕಾರ ಬಂದಾಗ ಅವರು ಕೊಬ್ಬಿದ್ದಾರೆ ! ಕಾಂಗ್ರೆಸ್ ಅನ್ನು ಆರಿಸಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?