ದಾವಣಗೆರೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ
ದಾವಣಗೆರೆ – ಇಲ್ಲಿನ ಗೌರಿಬಿದನೂರು ಊರಿನಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಅಗಸ್ಟ 14 ರಂದು ರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ‘ಅಖಂಡ ಭಾರತ ಸಂಕಲ್ಪ ದಿವಸ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯವಕ್ತಾರರೆಂದು ಸಂಘಟನೆಯ ದಕ್ಷಿಣ ಕರ್ನಾಟಕ ಸಹಸಂಚಾಲಕ ಶ್ರೀ. ಸತೀಶ ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ ಸತೀಶ ಬಾಬು ಉಪಸ್ಥಿತರಿದ್ದರು. ಈ ಸಮಯದಲ್ಲಿ ನೀಡಿದ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಶ್ರೀ. ಸತೀಶರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದು, 2 ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶ್ರೀ. ಸತೀಶ ಇವರು ತಮ್ಮ ಭಾಷಣದಲ್ಲಿ…
1. ‘ಎರಡು ಮಕ್ಕಳು ಸಾಕು’ ಎನ್ನುತ್ತೇವೆ; ಆದರೆ ಕೆಲವರು 4 ವಿವಾಹವಾಗಿ ಮತ್ತು 40 ಮಕ್ಕಳನ್ನು ಹುಟ್ಟಿಸುತ್ತಾರೆ. ಆದ್ದರಿಂದ ಜನಸಂಖ್ಯಾ ಸ್ಫೋಟವಾದರೆ, ದೇಶವು ಮತ್ತೆ ಪಾಕಿಸ್ತಾನದಂತೆ ವಿಭಜನೆಯಾಗುತ್ತದೆ.
2. ಕೇರಳ, ಭಾಗ್ಯನಗರ, ಭಟ್ಕಳ, ಮಂಗಳೂರಿನ ಉಳ್ಳಾಲದಲ್ಲೂ ವಿಭಜನೆಗೆ ಒತ್ತಾಯಿಸಲಾಗುತ್ತಿದೆ. ಇಡೀ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಶಿವಾಜಿನಗರ ಅವರ (ಮುಸ್ಲಿಂ) ಪ್ರಭಾವವಿದೆ. ಶೇ. 15 ರಷ್ಟು ಮುಸಲ್ಮಾನರು ಇರುವ ಸ್ಥಳಗಳಲ್ಲಿ, ಹಿಂದೂಗಳು ಮೊಹರಂ ಸಮಯದಲ್ಲಿ ತಮ್ಮ ಮೆರವಣಿಗೆಗಳಲ್ಲಿ ಭಾಗವಹಿಸುತ್ತಾರೆ; ಆದರೆ ಅಕಸ್ಮಾತ್ ಅವರು (ಮುಸ್ಲಿಮರು) ಶೇ. 30 ರಷ್ಟು, ಗಣೇಶನ ಮೆರವಣಿಗೆಯಲ್ಲಿ ‘ನೀವು ನಮ್ಮ ಮನೆ ಮುಂದೆ ಹಾದುಹೋಗಬಾರದು’ ಎಂದು ಹೇಳಬಹುದು.
3. ಒಸಾಮಾ ಬಿನ್ ಲಾಡೆನ್, ‘ನಾನು 5 ಬಾರಿ ನಮಾಜ್ ಮಾಡುತ್ತೇನೆ, ಖುರಾನ್ ಓದುತ್ತೇನೆ, ಎಂದು ಹೇಳಿದ್ದನು. ಖುರಾನ್ ಓದುವವರು ಹೇಗೆ ಭಯೋತ್ಪಾದಕರಾದರು?, ಇದು ನನಗೆ ಅರ್ಥವಾಗುತ್ತಿಲ್ಲ. (ಈ ಭಾಷಣದಲ್ಲಿ ಆಕ್ಷೇಪಾರ್ಹ ಏನಿದೆ? ಸತೀಶ ಅವರು ಪ್ರಸ್ತುತ ಸ್ಥಿತಿಯನ್ನು ಹೇಳುತ್ತಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? – ಸಂಪಾದಕರು)
Hindu Jagarana Vedike : ಹಿಂಜಾವೇ ಪ್ರಾಂತ ಸಹ ಸಂಯೋಜಕ ಸೆರೆ; ಸರ್ಕಾರದ ವಿರುದ್ಧ ಹಿಂದು ಸಂಘಟನೆಗಳ ವ್ಯಾಪಕ ಆಕ್ರೋಶ#vistaranews #HinduJagaranaVedike #HinduActivisthttps://t.co/0TEwSw2sAu
— Vistara News (@VistaraNews) August 20, 2023
ಸಂಪಾದಕರ ನಿಲುವು* ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹಿಂದುತ್ವನಿಷ್ಠರಿಗಾಗಿ ಪಾಕಿಸ್ತಾನೀ ಆಡಳಿತದ ಪರಿಸ್ಥಿತಿ ಬಂದಿದೆ. ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ ! |