ಚಂದ್ರಯಾನ-3′ ರ ‘ಲ್ಯಾಂಡರ್ ವಿಕ್ರಂ’ ಚಂದ್ರನಿಂದ ಕೇವಲ 25 ಕಿಮೀ ದೂರ !

ಬೆಂಗಳೂರು – ಭಾರತದ ‘ಚಂದ್ರಯಾನ-3’ ರ ‘ಲ್ಯಾಂಡರ್ ವಿಕ್ರಂ’ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈಗ ಅದು ಚಂದ್ರನಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿದೆ. ಬರುವ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲೆ ಇಳಿಯಲಿದೆ. 2 ದಿನಗಳ ಹಿಂದೆ ಲ್ಯಾಂಡರ್ ವಿಕ್ರಂ ತನ್ನ ವೇಗವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು. ಇಸ್ರೋ ಟ್ವೀಟ್ ಮಾಡಿ, ಈಗ ಲ್ಯಾಂಡರ್ ವಿಕ್ರಂ ಅನ್ನು ಆಂತರಿಕ ತಪಾಸಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದೆ.

(ಸೌಜನ್ಯ:WION)