ಮುಂಬಯಿ, ಆಗಸ್ಟ್ ೨೦ (ವಾರ್ತೆ) – ದಾದರ (ಪೂರ್ವ) ಇಲ್ಲಿಯ ಹಿಂದಮಾತ ಚಿತ್ರಮಂದಿರದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಬೆಂಬತ್ತಿ ಚುಡಾಯಿಸುತ್ತಿದ್ದ ಮುಸಲ್ಮಾನ ಯುವಕನಿಗೆ ಜನರು ಧರ್ಮದೇಟು ನೀಡಿದ್ದಾರೆ. ಈ ಸಮಯದಲ್ಲಿ ಯುವಕನು ತಾನು ಹಿಂದೂ ಎಂದು ಹೇಳಿದನು; ಆದರೆ ಜನರು ಅವನ ಗುರುತಿನ ಚೀಟಿಯಾಗಿದ್ದ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅವನು ಮುಸಲ್ಮಾನನೆಂದು ತಿಳಿದು ಬಂದಿತು. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ.
ಈ ವಿಷಯದ ಬಗ್ಗೆ ಅಪ್ರಾಪ್ತ ಹುಡುಗಿಯು, ಮುಸಲ್ಮಾನ ಯುವಕ ಪರಳ ಇಲ್ಲಿಂದ ಆಕೆಯನ್ನು ಹಿಂಬಾಲಿಸುತ್ತಿದ್ದನು. ಹಿಂದಮಾತಾ ಚಲನಚಿತ್ರ ಮಂದಿರದ ಸ್ಥಳಕ್ಕೆ ಬಂದ ನಂತರ ಮುಸಲ್ಮಾನ ಯುವಕನು ‘ನೀನು ನನಗೆ ಇಷ್ಟ, ನನ್ನ ಜೊತೆಗೆ ವಿವಾಹ ಮಾಡಿಕೊಳ್ಳುವೆಯಾ?’, ಹೀಗೆ ಹೇಳುತ್ತಾ ಆಕೆಯ ಜೊತೆಗೆ ಸಲಿಗೆ ಬೆಳೆಸಲು ಪ್ರಯತ್ನಿಸಿದನು. ಹೆದರಿರುವುದರಿಂದ ಆಕೆ ಕಿರುಚಾಡಿದಳು ಆದ್ದರಿಂದ ಅಕ್ಕಪಕ್ಕದ ಅಂಗಡಿಕಾರರು ಮತ್ತು ಮಾರಾಟಗಾರರು ಓಡಿ ಬರುತ್ತಿರುವಾಗಲೇ ಮುಸಲ್ಮಾನ ಯುವಕನು ಅಲ್ಲಿಂದ ಕಾಲ್ಕಿತ್ತನು. ಆ ಸಮಯದಲ್ಲಿ ನೆರೆದಿರುವ ಜನರು ಮುಸಲ್ಮಾನ ಯುವಕನನ್ನು ಬೆಂಬೇತ್ತಿ ಹಿಡಿದರು. ಈ ಅಪ್ರಾಪ್ತ ಹುಡುಗಿ ದಾದರ(ಪೂರ್ವ) ಪರಿಸರದಲ್ಲಿ ವಾಸಿಸುತ್ತಾಳೆ. ಆಕೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಇಲ್ಲಿಯ ಎಲ್ಲಾ ಅಂಗಡಿಗಳಿಗೆ ಆಕೆ ವಾರದಲ್ಲಿ ಒಂದೆರಡು ಬಾರಿ ಉದಬತ್ತಿ ಮಾರುವುದಕ್ಕೆ ಬರುತ್ತಾಳೆ. ಆದ್ದರಿಂದ ಇಲ್ಲಿಯ ಎಲ್ಲಾ ಸ್ಥಳೀಯ ಅಂಗಡಿದಾರರಿಗೆ ಮತ್ತು ಮಾರಾಟಗಾರರಿಗೆ ಹುಡುಗಿಯ ಪರಿಚಯವಿದೆ. ಈ ಸಮಯದಲ್ಲಿ ಜನರು ಚುಡಾಯಿಸುತ್ತಿದ್ದ ಮುಸಲ್ಮಾನ ಯುವಕನನ್ನು ಭೋವಿವಾಡದ ಪೊಲೀಸ ಠಾಣೆಗೆ ಕರೆದುಕೊಂಡು ಹೋದರು.
ದೂರು ನೀಡಿದರು ಕೂಡ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದರು !
ಅಪರಾಧಿಗಳಿಗೆ ರಾಜಾರೋಷವಾಗಿ ಬಿಡುವ ಮುಂಬಯಿ ಪೊಲೀಸ್ ! ಪೊಲೀಸರಿಗೆ ನಿಜವಾಗಿಯೂ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಿದ್ದರೆ, ಪೊಲೀಸರು ಸ್ವತಃ ಯುವಕನ ವಿರುದ್ಧ ದೂರು ದಾಖಲಿಸಿ ಅವನನ್ನು ಕಂಬಿ ಹಿಂದೆ ಕಳಿಸುತ್ತಿದ್ದರು. ಹಾಡುಹಗಲೇ ಅಪರಾಧ ನಡೆಯುತ್ತಿರುವುದು ಕಂಡು ಕೂಡ ಪೊಲೀಸರು ಸ್ವತಃ ಯುವಕನ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ ? ಅಥವಾ ಪೊಲೀಸರು ಇಂತಹವರನ್ನು ರಕ್ಷಿಸುತ್ತಾರೆಯೆ ? ಇಂತಹ ಪೊಲೀಸರನ್ನು ತಕ್ಷಣ ವಜಾ ಗೊಳಿಸಬೇಕು.
ಇದರ ಬಗ್ಗೆ ವಿಡಿಯೋ ದೊರೆತನಂತರ ದೈನಿಕ್ ‘ಸನಾತನ ಪ್ರಭಾತ’ದ ಪ್ರತಿನಿಧಿ ಆಗಸ್ಟ್ ೨೦ ರಂದು ಭೋವಿವಾಡ ಪೊಲೀಸ ಠಾಣೆಗೆ ಹೋಗಿ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ಚುಡಾಯಿಸುವ ಯುವಕನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ? ಇದರ ಬಗ್ಗೆ ಮಾಹಿತಿ ಕೇಳಿದಾಗ ಈ ಪ್ರಕರಣದಲ್ಲಿ ಹುಡುಗಿಯಿಂದ ಯಾವುದೇ ದೂರ ದಾಖಲಿಸದೆ ಇರುವುದರಿಂದ ಅವನಿಗೆ ಬುದ್ಧಿ ಹೇಳಿ ಕಳುಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. (ಹೀಗೆ ಲವ್ ಜಿಹಾದ್ ಘಟನೆಗಳು ತಡೆಯುವುದಕ್ಕಾಗಿ ಸಂತ್ರಸ್ತೇ ಯುವತಿ ಮತ್ತು ಹಿಂದೂಗಳು ದೂರು ದಾಖಲಿಸುವದಕ್ಕೆ ಮುಂದೆ ಬರಬೇಕು ! – ಸಂಪಾದಕರು)
ಸಂಪಾದಕೀಯ ನಿಲುವುಇಂತಹ ಕಾಮುಕ ಮತಾಂಧರನ್ನು ಎದುರಿಸಲು ಸರಕಾರವು ಎಲ್ಲಾ ಕಡೆಗೆ ಯುವತಿ ಮತ್ತು ಮಹಿಳೆಯರಿಗೆ ಸ್ವಸಂರಕ್ಷಣ ಪ್ರಶಿಕ್ಷಣ ನೀಡಬೇಕು ! |