ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಜೈಘೋಷವನ್ನು ಹೇಳಿಸಿದ ನಂತರ ಶಿಕ್ಷಕಿಯಿಂದ ಕ್ಷಮಾಯಾಚನೆ !

ಬಂಟ್ವಾಳನ ಸರಕಾರಿ ಶಾಲೆಯಲ್ಲಿನ ಘಟನೆ !

ಮುಸಲ್ಮಾನ ಪೋಷಕರು ಮತ್ತು ರಾಜಕೀಯ ನಾಯಕರ ಒತ್ತಡದ ದುಷ್ಪರಿಣಾಮ !

ಮಂಗಳೂರು – ಬಂಟ್ವಾಳ ತಾಲೂಕಿನ ಮಂಚಿ ಇಲ್ಲಿಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್ ಕಿ ಜೈ’ ಎಂದು ಘೋಷಣೆ ನೀಡಿದ್ದರಿಂದ ಶಿಕ್ಷಕಿಗೆ ಕ್ಷಮಯಾಚಿಸಬೇಕಾದ ಘಟನೆ ಬೆಳಕಿಗೆ ಬಂದಿದೆ. ಈ ಶಿಕ್ಷಕಿಯು ತರಗತಿಯಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳಿಂದಲೂ ಈ ಘೋಷಣೆ ಹೇಳಿಸಿದ್ದರಿಂದ ಪೋಷಕರು ಮತ್ತು ಕೆಲ ರಾಜಕೀಯ ಮುಖಂಡರ ಒತ್ತಡದಿಂದ ಶಿಕ್ಷಕಿ ಕ್ಷಮಯಾಚನೆ ಮಾಡಬೇಕಾಯಿತು.

೧. ಶಾಲೆಯ ವಿದ್ಯಾರ್ಥಿಗಳು ಸಾವರ್ಕರರ ಜೈಘೋಷ ಮಾಡಿರುವ ವಿಡಿಯೋ ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿತ್ತು. ಅದನ್ನು ನೋಡಿ ಮುಸಲ್ಮಾನ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಹೋಗಿ ಅವರಿಗೆ ಇದರ ಬಗ್ಗೆ ಪ್ರಶ್ನೆ ಕೇಳಿದರು. ‘ನೀವು ಮುಸಲ್ಮಾನ ವಿದ್ಯಾರ್ಥಿಗಳಿಂದ ಸಾವರ್ಕರರ ಜೈಘೋಷ ಏಕೆ ಮಾಡಿಸಿದ್ದೀರಿ ?’ ಎಂದು ಅವರು ಪ್ರಶ್ನಿಸಿದರು.

೨. ಆ ಸಮಯದಲ್ಲಿ ಮುಖ್ಯೋಪಾಧ್ಯಾಯರು ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು. ಅವರು, ‘ಈ ಜೈಘೋಷ ಬೇಕಂತಲೇ ಮಾಡಿಲ್ಲ, ಎಲ್ಲಾ ಸ್ವಾತಂತ್ರ್ಯ ವೀರರ ಸಹಿತ ಅವರ ಜೈಘೋಷ ಕೂಡ ಮಾಡಿದ್ದಾರೆ. ಸಾವರ್ಕರರು ಸ್ವಾತಂತ್ರ್ಯ ವೀರರಾಗಿದ್ದರು, ಎಂದು ಪುಸ್ತಕದಲ್ಲಿ ಕಲಿಸಲಾಗುತ್ತದೆ. ಮಕ್ಕಳ ಮನಸ್ಸಿನಲ್ಲಿ ರಾಜಕಾರಣ ನಿರ್ಮಾಣ ಮಾಡಬಾರದೆಂದು ತಿಳಿಸಿ ಹೇಳುವ ಪ್ರಯತ್ನ ಮಾಡಲಾಯಿತು; ಆದರೆ ಮುಸಲ್ಮಾನರು ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಸಮಯದಲ್ಲಿ ರಾಜಕೀಯ ನಾಯಕರ ಕರೆಯಿಂದ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ ತರಲಾಯಿತು. ಆದ್ದರಿಂದ ನಂತರ ಶಿಕ್ಷಕಿ ಕ್ಷಮೆ ಕೇಳಬೇಕಾಯಿತು.

೩. ಮರುದಿನ ಶಾಲೆಯ ಶಿಕ್ಷಕರು ಮತ್ತು ಪೋಷಕರ ಸಭೆ ಕರೆಯಲಾಗಿತ್ತು. ಅದರಲ್ಲಿ ಪೋಷಕರು ಮತ್ತು ಕೆಲವು ರಾಜಕೀಯ ನಾಯಕರು ಆ ಶಿಕ್ಷಕಿಯನ್ನು ಟೀಕಿಸಿದರು. ಆ ಸಮಯದಲ್ಲಿ ಶಿಕ್ಷಕಿ ಎಲ್ಲರೆದರು ಕ್ಷಮೆ ಯಾಚಿಸಿದರು.

೪. ಮುಖ್ಯೋಪಾಧ್ಯಾಯರು ಶಾಲೆಯಲ್ಲಿನ ಜೈಘೋಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.