|
ಉಡುಪಿ – ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಭಾಗವಹಿಸಿತ್ತು. ವೇದಿಕೆಯಲ್ಲಿ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸಲಹೆಗಾರ ಅಬ್ದುಲ್ ಕರೀಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತೆಯರನ್ನು ಪರಿಚಯಿಸುವಾಗ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತೆ ಎಂದು ಪರಿಚಯಿಸಲಾಯಿತು. ಆಗ ಅಲ್ಲಿದ್ದ ಕೌನ್ಸಿಲರ್ ಅಬ್ದುಲ್ ಕರೀಂ ಸಿಟ್ಟಿನಿಂದ ಎದ್ದು ಹೋದರು. ಮನವೊಲಿಸುವ ಪ್ರಯತ್ನವೂ ವಿಫಲವಾಯಿತು. ಕಾರ್ಯಕ್ರಮ ಮುಗಿಯುವ ಮುನ್ನವೇ ಪುರಸಭೆಗೆ, ಶಿಕ್ಷಣ ಇಲಾಖೆಗೆ ದೂರು ನೀಡಲಾಯಿತು. ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ‘ಸಮಿತಿಯ ಕಾರ್ಯಕರ್ತೆ’ಯರ ಹೆಸರನ್ನು ಮಾತ್ರ ಹೇಳಬೇಕಿತ್ತು. ‘ಹಿಂದೂ’ ಎಂಬ ಪದವನ್ನು ಉಲ್ಲೇಖಿಸಬಾರದಿತ್ತು’, ಎಂದು ಅವರಿಗೆ ತಿಳುವಳಿಕೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರು ಸಮಿತಿಯ ಕಾರ್ಯಕರ್ತೆಯರಿಗೆ ದೂರವಾಣಿ ಕರೆ ಮಾಡಿ ‘ಈ ವಿಚಾರದಲ್ಲಿ ಮುಂದೆ ನಿಮ್ಮನ್ನು ಕರೆದರೆ ಹಾಜರಿರಬೇಕಾಗಬಹುದು’ ಎಂದು ಹೇಳಿದರು.
ಜಿಲ್ಲೆಯ ಮೂಡುಬಿದಿರೆಯ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ರಾಷ್ಟ್ರಧ್ವಜ ಅವಮಾನವನ್ನು ತಡೆಯುವ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತೆಯರಿಗೆ ಉಪನ್ಯಾಸ ನೀಡಲು ಅವಕಾಶ ನೀಡಲಾಯಿತು. ಆದ್ದರಿಂದ ಅವರು ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧ್ವಜಾರೋಹಣಕ್ಕೂ ಮುನ್ನ ಚಿಕ್ಕ ಸಭೆ ನಡೆಯಿತು. ಈ ವೇಳೆ ಮುಖ್ಯೋಪಾಧ್ಯಾಯರು ಸಮಿತಿಯ ಕಾರ್ಯಕರ್ತೆಯರನ್ನು ಪರಿಚಯಿಸುತ್ತಿರುವಾಗ ಮೇಲಿನ ಘಟನೆ ನಡೆದಿದೆ.
ಸಂಪಾದಕೀಯ ನಿಲುವುಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ವಾಸ್ತವದಲ್ಲಿ ಜಾತ್ಯತೀತ ದೇಶದಲ್ಲಿ ‘ಹಿಂದೂ’ ಎಂಬ ಪದವನ್ನೇ ದ್ವೇಷಿಸುವ ಮುಸಲ್ಮಾನ ಅಧಿಕಾರಿಯನ್ನು ಶಿಕ್ಷಣಾಧಿಕಾರಿಗಳೇ ಪ್ರಶ್ನಿಸಬೇಕಿತ್ತು ! ರಾಜ್ಯದಲ್ಲಿ ‘ಹಿಂದೂ’ ಎಂಬ ಪದವನ್ನು ಮತಾಂಧ ಎಂದು ಪರಿಗಣಿಸಿದರೆ, ಮುಸಲ್ಮಾನ ಪದವನ್ನು ‘ಜಾತ್ಯತೀತ’ ಎಂದು ಪರಿಗಣಿಸಲಾಗುತ್ತಿದೆ, ಅದು ಅಷ್ಟೇ ಸತ್ಯ ! |