‘ಚಂದ್ರಯಾನ-3’ ‘ಲ್ಯಾಂಡರ್ ವಿಕ್ರಮ್’ ನ ವೇಗ ಕಡಿಮೆ ಮಾಡಿತು !

ಬೆಂಗಳೂರು – ಭಾರತದ ‘ಚಂದ್ರಯಾನ-3’ ಮಿಷನ್ ಅಡಿಯಲ್ಲಿ ಆಗಸ್ಟ್ 18 ರಂದು ಮತ್ತೊಂದು ಮೈಲಿಗಲ್ಲು ಪೂರ್ಣಗೊಂಡಿದೆ. ಮುಖ್ಯ ಯಾನದಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್ ವೇಗವನ್ನು ಕಡಿಮೆ ಮಾಡಿದೆ (ಡೀಬೂಸ್ಟ್ ಮಾಡುತ್ತದೆ). ಇದರೊಂದಿಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮತ್ತಷ್ಟು ಹತ್ತಿರಕ್ಕೆ ತಲುಪಿದೆ. ಲ್ಯಾಂಡರ್ ವಿಕ್ರಮ್ ಈಗ 113 x 157 ಕಿಮೀ ಕಕ್ಷೆಯಲ್ಲಿದೆ. ಅಂದರೆ ಈಗ ಚಂದ್ರನಿಂದ ಅದರ ಅತ್ಯಂತ ಕಡಿಮೆ ದೂರ 113 ಕಿಮೀ ಮತ್ತು ಗರಿಷ್ಠ ದೂರ 157 ಕಿಮೀ ಇದೆ. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ಹತ್ತಿರ ತರುವುದು ಡಿಬೂಸ್ಟ್ ಮಾಡುವ ಉದ್ದೇಶವಾಗಿದೆ. ಇದು ಲ್ಯಾಂಡರ್ ಅನ್ನು 30 ಕಿಮೀ ಒಳಗೆ ಚಂದ್ರನ ಹತ್ತಿರಕ್ಕೆ ತರುತ್ತದೆ. ಇದಾದ ಬಳಿಕ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಈ ಪ್ರಕ್ರಿಯೆಯು ಆಗಸ್ಟ್ 23 ರಂದು ಸಂಜೆ 5.47 ಕ್ಕೆ ನಡೆಯಲಿದೆ. ಇಸ್ರೋ, ಲ್ಯಾಂಡರ್ ಉತ್ತಮ ಸ್ಥಿತಿಯಲ್ಲಿದೆ. ಅದು ಯಶಸ್ವಿಯಾಗಿ ಡಿಬೂಸ್ಟಿಂಗ್ ಪ್ರಕ್ರಿಯೆಯನ್ನು ತಾನೇ ಮಾಡಿದೆ. ಮುಂದಿನ ಡೀಬೂಸ್ಟಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 20 ರಂದು ಮಧ್ಯಾಹ್ನ 2 ಗಂಟೆಗೆ ಪ್ರಸ್ತಾಪಿಸಲಾಗಿದೆ. ಇದರ ನಂತರ, ಚಂದ್ರನಿಂದ ಲ್ಯಾಂಡರ್ ವಿಕ್ರಮ್ ಕನಿಷ್ಠ ದೂರ 30 ಕಿಮೀ ಮತ್ತು ಗರಿಷ್ಠ ದೂರ 100 ಕಿಮೀ ಆಗಿರುತ್ತದೆ ಎಂದು ಟ್ವೀಟ್ ಮಾಡಿದೆ.