ನುಹ್ (ಹರಿಯಾಣ) ನಲ್ಲಿ ಹಿಂಸಾಚಾರದ ಪ್ರಕರಣಬಿಟ್ಟು ಬಜರಂಗಿ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖ !ಭಜರಂಗಿಯ ಮೇಲೆ ಅನುಮತಿಯಿಲ್ಲದೆ ತ್ರಿಶೂಲ ಮತ್ತು ಖಡ್ಗ ಇಟ್ಟುಕೊಂಡ ಆರೋಪ ! |
ನುಹ್ (ಹರಿಯಾಣ) – ಜುಲೈ 31 ರಂದು ಹಿಂದೂಗಳ ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹಚ್ಚಿದ್ದರು. ಈ ಸಮಯದಲ್ಲಿ ಕೆಲವು ಹಿಂದೂಗಳು ಮತ್ತು ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕೊಲ್ಲಲಾಯಿತು. ಈ ವೇಳೆ ಮತಾಂಧ ಮುಸಲ್ಮಾನರು ‘ಗೋರಕ್ಷಕ ಬಿಟ್ಟು ಬಜರಂಗಿ ಇವರು ಫೇಸ್ ಬುಕ್ ನಲ್ಲಿ ಮುಸ್ಲಿಮರನ್ನು ಪ್ರಚೋದಿಸಿದ್ದರಿಂದ ಹಿಂಸಾಚಾರ ನಡೆದಿದೆ’ ಎಂದು ಕಿಡಿಕಾರಿದ್ದಾರೆ. ಆದ್ದರಿಂದ ಪೊಲೀಸರು ಆಗಸ್ಟ್ 16 ರಂದು ಬಜರಂಗಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
‘Deadly weapons’ like Trishuls: As police arrests Gaurakshak Bittu Bajrangi, read what FIR against him sayshttps://t.co/W2wT5hs0x4
— OpIndia.com (@OpIndia_com) August 16, 2023
ಬಜರಂಗಿ ವಿರುದ್ಧದ ಎಫ್ಐಆರ್ ನಲ್ಲಿ, ಬಿಟ್ಟು ಬಜರಂಗಿ ಮತ್ತು ಇತರ 15 ರಿಂದ 20 ಮಂದಿ ಯಾತ್ರೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಕಾಶವಿಲ್ಲದಿದ್ದರೂ ‘ತ್ರಿಶೂಲ’ ಮತ್ತು ‘ಕತ್ತಿ’ಯಂತಹ ‘ಮಾರಕ ಆಯುಧ’ಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಪೊಲೀಸರು ಹಿಂದೂಗಳಿಂದ ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರವೂ ಬಜರಂಗಿ ಮತ್ತು ಅವನ ಸಹಚರರು ಅವುಗಳನ್ನು ಪೊಲೀಸ್ ವಾಹನದಿಂದ ಬಲವಂತವಾಗಿ ತೆಗೆದುಕೊಂಡು ಹೋದರು. ಈ ವೇಳೆ ಅಲ್ಲಿದ್ದ ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. ಈ ಹಿನ್ನೆಲೆಯಲ್ಲಿ ಬಿಟ್ಟು ಬಜರಂಗಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಪಾದಕರ ನಿಲುವು* ಹಿಂದೂಗಳಿಗೆ ಪವಿತ್ರವಾಗಿರುವ ತ್ರಿಶೂಲವನ್ನು ಅವಮಾನಿಸಿದ ಹರಿಯಾಣ ಪೊಲೀಸರಿಂದ ಹಿಂದೂಗಳಿಗೆ ಎಂದಾದರೂ ನ್ಯಾಯ ಸಿಗುವುದೇ ? |